ಭಾನುವಾರ ನಮ್ಮ ಮೆಟ್ರೋಗಾಗಿ ಬೆಳಗ್ಗೆ 5ಗಂಟೆಯಿಂದಲೇ ಕಾದ ಪ್ರಯಾಣಿಕರು: ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು: ರಾಜಧಾನಿ ಬೆಂಗಳೂರು ನಮ್ಮ ಮೆಟ್ರೋ ಮೇಲಿನ ಜನರ ಅವಲಂಬನೆ ಹೆಚ್ಚಾಗಿದೆ. ಟಿಕೆಟ್ ದರ ಹೆಚ್ಚಾದರೂ ಪ್ರಯಾಣಿಕರು ಮೆಟ್ರೋ ಸಾರಿಗೆಯನ್ನೇ ಅನುಸರಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಏರಿಕೆ ಆಗುತ್ತಿದೆ. ಪ್ರತಿ ಭಾನುವಾರ ಬೆಳಗ್ಗೆ ನಮ್ಮ ಮೆಟ್ರೋ ರೈಲು ಸೇವೆ 7ಗಂಟೆಗೆ ಆರಂಭಿಸುವ ಕುರಿತು ಮೇಲಿಂದ ಮೇಲೆ ಚರ್ಚೆಗಳು ಆಗುತ್ತಿವೆ. ಇಂದು ಭಾನುವಾರ (ಮೇ 3) ರಂದು ಮೆಟ್ರೋಗಾಗಿ ಬೆಳಗ್ಗೆ 5 ಗಂಟೆಯಿಂದಲೇ ಕೆಎಸ್‌ಆರ್ ನಿಲ್ದಾಣ ಮುಂದೆ ಅನೇಕ ಪ್ರಯಾಣಿಕರು ಕಾದು ಕುಳಿತಿದ್ದರು. ಇದರ ಬೆನ್ನಲ್ಲೆ ಮೆಟ್ರೋ ಸೇವಾ ಸಮಯ ವಿಚಾರವು ಮತ್ತೆ ಮುನ್ನೆಲೆಗೆ ಬಂದಿದೆ.

ಸೋಮವಾರದಿಂದ ಶನಿವಾರದವರೆಗೆ ನಿತ್ಯ ಬೆಳಗ್ಗೆ 5 ಗಂಟೆಗೆ ನಮ್ಮ ಮೆಟ್ರೋ ಸೇವೆ ಆರಂಭವಾಗಿ ರಾತ್ರಿ 11 ಗಂಟೆಗೆ ಕೊನೆ ರೈಲು ಸಂಚರಿಸುತ್ತದೆ. ಭಾನುವಾರ ಮಾತ್ರ ಬೆಳಗ್ಗೆ 7 ಗಂಟೆಗೆ ರೈಲುಗಳ ಸಂಚಾರ ಆರಂಭವಾಗುತ್ತದೆ. ಕ್ರಿಕೆಟ್ ಪಂದ್ಯಾವಳಿ, ಮ್ಯಾರಾಥಾನ್, ಸ್ಪರ್ಧಾತ್ಮಕ ಪರೀಕ್ಷೆಗಳಂತಹ ವಿಶೇಷ ದಿನಗಳಲ್ಲಿ ಈ ಸಮಯದಲ್ಲಿ ಬದಲಾವಣೆ ಆಗುತ್ತದೆ. ಫೀಕ್ ಸಮಯದಲ್ಲಿ 3-5ನಿಮಿಷ, ಸಾಮಾನ್ಯ ಸಮಯದಲ್ಲಿ 15 ನಿಮಿಷಗಳ ಅಂತರದಲ್ಲಿ ಮೆಟ್ರೋಗಳು ಸಂಚರಿಸುತ್ತವೆ.

Namma Metro Sunday Delay

ಮೆಟ್ರೋ ನಿಲ್ದಾಣದ ಮುಂದೆ ಕಾದು ಸುಸ್ತಾದ ಪ್ರಯಾಣಿಕರು

ಕೆಎಸ್‌ಆರ್, ಯಶವಂತಪುರ ಸೇರಿ ಕೆಲವು ಮೆಟ್ರೋ ನಿಲ್ದಾಣಗಳ ಮುಂದೆ ಇಂದು (ಭಾನುವಾರ) ಜನದಟ್ಟಣೆ ಕಂಡು ಬಂದಿದೆ. ಮೆಟ್ರೋ ನಿಲ್ದಾಣದ ಬಾಗಿಲು ಏಳು ಗಂಟೆಗೆ ತೆಗೆಯುವವರೆಗೂ ಗುಂಪು ಗುಂಪಾಗಿ ಜನ ಕಾದು ಸುಸ್ತಾಗಿದ್ದಾರೆ. ಕೆಲವರು ಇಂದು ಭಾನುವಾರ ಎಂಬುದನ್ನೇ ಮರೆತು ಕಾದು ನಿಂತು ಮೆಟ್ರೋ ಏರಿದ್ದಾರೆ. ಅತ್ಯಧಿಕ ಜನರ ಸೇರಿದ್ದರಿಂದ ಮಟ್ರೋ ಸಮಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪುನಃ ಚೆರ್ಚೆಗಳಾಗುತ್ತಿವೆ. ಪ್ರತಿ ದಿನ ಬೆಳಗ್ಗೆ 4ಗಂಟೆಯಿಂದ ಪ್ರತಿ 20-30 ನಿಮಿಷಕ್ಕೊಂದು ಓಡಾಡುವಂತೆ ವ್ಯವಸ್ಥೆ ಮಾಡಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಉತ್ತರ ಕರ್ನಾಟಕ, ಕರಾವಳಿ ಸೇರಿ ರಾಜ್ಯದ ಬೇರೆ ಬೇರೆ ಭಾಗಗಳಿಗೆ ತೆರಳಿರುವ ಪ್ರಯಾಣಿಕರು ಶನಿವಾರ ಹೊರಟು ಭಾನುವಾರ ಬೆಳ್ಳಂಬೆಳಗ್ಗೆ ಸುಮಾರು 4, 5 ಮತ್ತು 6 ಗಂಟೆಗೆ ಹೊತ್ತಿಗೆ ಬೆಂಗಳೂರಿಗೆ ಬಂದಿಳಿದಿರುತ್ತಾರೆ. ಅವರಿಗೆ ಬೆಳಗ್ಗೆ ಬೇಗ ಮೆಟ್ರೋ ಸಿಗದಂತಾಗಿದೆ. ಕಾರಣ ಈ ದಿನ 7 ಗಂಟೆಗೆ ಮೆಟ್ರೋ ಸೇವೆ ಶುರುವಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಕಚೇರಿಗೆ ತೆರಳುವವರು, ಸಾರ್ವಜನಿಕರ ಸಂಚಾರ ಹೆಚ್ಚಿರುತ್ತದೆ. ಆದರೆ ಭಾನುವಾರ ನಗರದ ರಜಾದಿನವಾದ್ದರಿಂದ ಸಂಚಾರ ದಟ್ಟಣೆ ಕಡಿಮೆ ಇರುತ್ತದೆ. ಹೀಗಾಗಿ ಈ ಒಂದು ದಿನ ತಡವಾಗಿ ಮೆಟ್ರೋ ರೈಲುಗಳು ಸಂಚಾರ ಆರಂಭಿಸುತ್ತವೆ.

ಭಾನುವಾರ ಮೆಟ್ರೋ ಸಮಯದ ಬಗ್ಗೆ ಮಿಶ್ರ ಪ್ರತಿಕ್ರಿಯೆ

ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ಮೆಟ್ರೋ ನಿಲ್ದಾಣಕ್ಕೆ ಸಾಗುವ ವಾಕ್‌ವೇನಲ್ಲಿ ಸಾಲುಗಟ್ಟಿ ಪ್ರಯಾಣಿಕರು ನಿಂತಿದ್ದರು. ಮೆಟ್ರೋಗಾಗಿ ಕಾಯುತ್ತಿರುವ ಜನರ ಫೋಟೋವನ್ನು @SuhasDuga ಅವರು ಎಕ್ಸ್‌ ನಲ್ಲಿ ಹಂಚಿಕೊಂಡಿದ್ದಾರೆ. 'ಊರುಗಳಿಂದ ಬರುವವರಿಗೆ ತೊಂದರೆ ಆಗುತ್ತದೆ. ಇಂದು ಕೂಡ ಬೇಗ ಮೆಟ್ರೋ ತೆರೆಯುವಂತೆ ಕೆಲವರು' ಪೋಸ್ಟ್‌ಗೆ ಕಾಮೆಂಟ್ ಮಾಡಲಾಗಿದೆ. ಮತ್ತೊಬ್ಬರು ರಸ್ತೆಯಲ್ಲಿ ದಟ್ಟಣೆ ಕಡಿಮೆ ಇರುತ್ತದೆ. 4 ಗಂಟೆಗಳಿಂದ ಬಿಎಂಟಿಸಿ ಬಸ್ ಗಳ ಸಂಚಾರ ಇರಲಿದ್ದು, ಅದನ್ನೆ ಬಳಸುವಂತೆ' ಸಲಹೆ ನೀಡಿದ್ದಾರೆ. ಮೂರನೇ ಬಳಕೆದಾರರು 'ವಾರದಲ್ಲಿ ಒಂದು ದಿನ ಮೆಟ್ರೋ ನಿರ್ವಹಣಾ ಕೆಲಸಗಳು ಇರುತ್ತವೆ. ಈ ಕಾರಣದಿಂದ ಒಂದು ದಿನ ತಡವಾಗಿ ಸೇವೆ ಆರಂಭಿಸುವ ನಿರ್ಧಾರ ಸರಿಯಾಗಿದೆ' ಎಂದು ತಿಳಿಸಿದ್ದಾರೆ. ಕೆಲವರು 'ಭಾನುವಾರವು ಎಂದಿನಂತೆ ತೆರೆಯಲು ಕೋರಿದ್ದಾರೆ'. ಒಟ್ಟಾರೆ ಮೆಟ್ರೋ ಭಾನುವಾರದ ಸೇವೆಗಾಗಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಸದ್ಯ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL) ಈ ಹಿಂದೆಯು ಭಾನುವಾರವು ಎಂದಿನಂತೆ ಬೇಗ ರೈಲು ಸೇವೆ ಆರಂಭಿಸಲು ಕೆಲವು ಮನವಿಗಳು ಸಲ್ಲಿಕೆಯಾಗಿದ್ದವು. ಈ ಬಗ್ಗೆ ಅಧಿಕಾರಿಗಳು ಯಾವುದೇ ನಿರ್ಧಾರ ಕೈಗೊಂಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+