Amruthadhaare Serial: ಗೌತಮ್ ದಿವಾನ್ ಸಾಮ್ರಾಜ್ಯ ಮರುಸ್ಥಾಪನೆ ನಡುವೆ ಹೊಸ ಸಂಕಷ್ಟ ಸೂಚನೆ, ಶಕುಂತಲಾ ದೇವಿ ಬದಲಾಗಿಲ್ವಾ
Amruthadhaare Serial: ಅಮೃತಧಾರೆ ಸೀರಿಯಲ್ ಮತ್ತೊಂದು ಹೊಸ ರೋಚಕ ತಿರುವು ಪಡೆದುಕೊಂಡಿದೆ. ಕೇಡಿ ಜೈದೇವ್ ಬೀದಿ ಪಾಲಾಗಿದ್ದಾನೆ. ಗೌತಮ್ ದಿವಾನ್ ಕೈಗೆ ಆಸ್ತಿ ಬಂದಿದ್ದು ಹಳೆಯ ಖದರ್ ಮತ್ತೆ ಬಂದಿದೆ. ಶತ್ರುಗಳಿಗೆ ಸಂಕಷ್ಟ ಎದುರಾಗಿದೆ. ಜೈದೇವ್‌ನನ್ನು ಹೊರಗೆ ಹಾಕುವಲ್ಲಿ ಗೌತಮ್ ಯಶಸ್ವಿಯಾಗಿದ್ದಾನೆ. "ಗೌತಮ್ ದಿವಾನ್ ಸಾಮ್ರಾಜ್ಯದ ಮರು ಸ್ಥಾಪನೆ ಶುರುವಾಗಿದೆ. ಹೊಸ ಹೆಜ್ಜೆಗೆ, ಹಳೆ ಕೊಂಡಿಯಿಂದಿದ್ಯಾ ಅಪಾಯ" ಎಂಬ ಹೊಸ ಎಪಿಸೋಡ್ ಬಿಡುಗಡೆಯಾಗಿದೆ.
ಎಲ್ಲವೂ ಸರಿ ಹೋಗಿದೆ ಎನ್ನುವ ಸಂದರ್ಭದಲ್ಲಿಯೇ ರೋಚಕ ತಿರುವೊಂದು ಶುರುವಾಗಿದೆ. ಆದರೆ, ಇದರ ಬಗ್ಗೆ ಪ್ರೇಕ್ಷಕರು ಸಣ್ಣ ಅಸಮಾಧಾನ ಹೊರ ಹಾಕಿದ್ದಾರೆ. ಇದರ ನಡುವೆ ಗೌತಮ್ ದಿವಾನ್ - ಭೂಮಿಕಾ ಅವರ ಹೆಣ್ಣು ಮಗುವಿನ ಬಗ್ಗೆಯೂ ಹೆಚ್ಚು ಚರ್ಚೆ ನಡೆಯುತ್ತಿದೆ. ಈ ವಿಚಾರವನ್ನು ಪುರೋಹಿತರು ಪ್ರಸ್ತಾಪಿಸಿದ್ದಾರೆ.

ಅಮೃತಧಾರೆ ಸೀರಿಯಲ್‌ನಲ್ಲಿ ಎಲ್ಲವೂ ಸರಿ ಆಗುತ್ತಿದೆ ಎನ್ನುವ ಸಂದರ್ಭದಲ್ಲೇ ರೋಚಕ ತಿರುವೊಂದು ಶುರುವಾಗಿದೆ. ಗೌತಮ್ ಅವರ ಮಲತಾಯಿ ಶಕುಂತಲ ಬದಲಾಗಿದ್ದಾಳೆ ಎಂದು ಹೇಳಲಾಗಿದ್ದು. ಎಲ್ಲರೂ ಹಳೆಯ ಮನೆಗೆ ಹಿಂದಿರುಗುವುದಕ್ಕೆ ಗೌತಮ್ ನಿರ್ಧರಿಸಿದ್ದಾರೆ. ಗೌತಮ್ ದಿವಾನ್ ತಮ್ಮ ಮನೆತನದ ಆಸ್ತಿಯನ್ನು ಹರಾಜಿನಲ್ಲಿ ಕೈತಪ್ಪಿ ಹೋಗದಂತೆ ನೋಡಿಕೊಂಡು, ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲಾ ತಮ್ಮ ಹಳೆಯ ಆಸ್ತಿಯನ್ನು ತಮ್ಮದಾಗಿಸಿಕೊಂಡಿರುವ ಗೌತಮ್ ಅವರು ಮನೆಗೆ ಹಿಂದಿರುಗಿದ್ದು, ಮನೆಯವರು ಗೌತಮ್ ಅವರನ್ನು ಆರತಿ ಎತ್ತಿ ಸ್ವಾಗತಿಸಿದ್ದಾರೆ.
ಗೌತಮ್ ಮನೆಯ ಒಳಗೆ ಬರುವ ಸಂದರ್ಭದಲ್ಲಿ ಶಕುಂತಲ ಕಣ್ಣೀರು ಹಾಕಿದ್ದಾಳೆ. ಆಗ ಗೌತಮ್ ಯಾಕಮ್ಮ ಎಲ್ಲ ಸರಿ ಹೋಯ್ತಲ್ಲ ಈಗ ಯಾಕೆ ಕಣ್ಣೀರು ಅಂತ ಕೇಳಿದ್ದಾನೆ. ಅದಕ್ಕೆ ಇದು ಸಂತೋಷದ ಕಣ್ಣೀರು ಅಂತ ಶಕುಂತಲ ಹೇಳಿದ್ದಾಳೆ. ಎಲ್ಲಿ ಆ ಮನೆ ಕೈ ತಪ್ಪಿ ಹೋಗಲಿದೆಯೋ ಎನ್ನುವ ಭಯವಿತ್ತು. ಕೊನೆಗೂ ನೀನು ಅದನ್ನು ಉಳಿಸಿಕೊಂಡಲ್ಲ. ಈಗ ನನಗೆ ಸಮಾಧಾನವಾಯ್ತು ಎಂದು ಶಕುಂತಲ ಹೇಳಿದ್ದಾಳೆ. ಇದಕ್ಕೆ ಗೌತಮ್ ಈಗ ನಿಮಗೆ ಖುಷಿ ಆಯ್ತಲ್ಲ ನನಗೆ ಅಷ್ಟೇ ಬೇಕಾಗಿರುವುದು ಅಂತ ಗೌತಮ್ ಹೇಳಿದ್ದಾನೆ. ಭಾಗ್ಯ ಅವರು ಭೂಮಿಕಾಗೆ ಆ ಮನೆಗೆ ಹೋಗುವುದಕ್ಕೆ ಎಲ್ಲಾ ತಯಾರಿ ಮಾಡಿಕೊ, ಶಾಸ್ತ್ರಿಗಳಿಗೆ ಒಂದು ಫೋನ್ ಮಾಡು, ಮುಹೂರ್ತ ನೋಡಿಕೊಳ್ಳುವುದಕ್ಕೆ ಅಂತ ಹೇಳಿದ್ದಾರೆ.
ಶಾಸ್ತ್ರಿಗಳು ಮನೆಯವರೆಲ್ಲರನ್ನೂ ನೋಡಿ, ಸಂತೋಷವಾಯಿತು ನಿಮ್ಮನ್ನೆಲ್ಲರನ್ನೂ ಒಂದೇ ಕಡೆ ನೋಡಿ ಅಂತ ಹೇಳಿದ್ದಾರೆ. ಆಗ ಭಾಗ್ಯಮ್ಮ ಅವರು ನಾವು ಆ ಮನೆಗೆ ವಾಪಸ್ ಆಗಬೇಕು ಅಂತ ನಿರ್ಧಾರ ಮಾಡಿದ್ದೇವೆ. ಇದೇ ಸಂದರ್ಭದಲ್ಲಿ ಗೌತಮ್ ಜಾತಕವನ್ನೂ ಕೊಟ್ಟಿದ್ದು, ಅದನ್ನು ನೋಡುವಂತೆ ಕೇಳಿಕೊಂಡಿದ್ದಾರೆ. ಮುಂದೆ ಏನು ಸಮಸ್ಯೆ ಆಗಬಾರದು ಅಂತಲೂ ಹೇಳಿದ್ದಾರೆ. ಏನಾದರೂ ಪೂಜೆ ಇದ್ದರೂ ಹೇಳಿ ಅಂತ ಕೇಳಿದ್ದಾರೆ.
ಆಗ ಪುರೋಹಿತರು ಗೌತಮ್ ಅವರೇ ಸಂತೋಷದ ವಿಚಾರ ನಿಮಗೆ ಮತ್ತೊಂದು ಮಗುವಿನ ಯೋಗವಿದೆ. ಇದನ್ನು ಮಕ್ಕಳು ಕುತೂಹಲದಿಂದ ಕೇಳಿದ್ದು, ಇದಕ್ಕೆ ಭಾಗ್ಯ ಅವರು ನಿಮ್ಮ ಜೊತೆ ಆಟವಾಡುವುದಕ್ಕೆ ತಮ್ಮನೋ ತಂಗಿನೋ ಬರುತ್ತಾರಂತೆ ಹೇಳಿದ್ದಾರೆ. ಇದಕ್ಕೆ ತಮ್ಮ - ತಂಗಿ ಖುಷಿಯಾಗಿದ್ದಾರೆ. ನೀವು ಧೈರ್ಯವಾಗಿ ಆ ಮನೆಗೆ ಹೋಗಬಹುದು ಶುಕ್ರವಾರ ಒಳ್ಳೆಯ ಮುಹೂರ್ತವಿದೆ ಎಂದು ಪುರೋಹಿತರು ಹೇಳಿದ್ದಾರೆ.
ಗೌತಮ್ - ಭೂಮಿಕಾಗೆ ಬಿಗ್ ಶಾಕ್
ಇನ್ನು ಪುರೋಹಿತರು ಮನೆಯಿಂದ ಹೋಗುವಾಗ ಸೂಕ್ಷ್ಮವಾಗಿ ಗೌತಮ್ ಅವರನ್ನು ಮನೆಯಿಂದ ಹೊರಗೆ ಬರುವಂತೆ ಕೇಳಿದ್ದಾರೆ. ಅದೇ ಸಂದರ್ಭದಲ್ಲಿ ಗೌತಮ್ ಹಿಂದೆ ಭೂಮಿಕ ಸಹ ಹೋಗಿದ್ದಾಳೆ. ಆಗ ಶಾಸ್ತ್ರೀಗಳು ಶಾಕಿಂಗ್ ನ್ಯೂಸ್ ಹೇಳಿದ್ದಾರೆ. ನಿಮಗೆ ಜನಿಸಿದ ಹೆಣ್ಣು ಮಗುವಿನಿಂದ ನಿಮಗೆ ಕಂಟಕ ಎಂದು ಜಾತಕ ಹೇಳುತ್ತಿದೆ. ಕೆಲವೊಮ್ಮೆ ನಾವು ಎಲ್ಲ ಸರಿ ಹೋಯಿತು ಎಂದುಕೊಳ್ಳುತ್ತಿರುವಾಗಲೇ ಸಂಕಷ್ಟಗಳು ಎದುರಾಗುತ್ತವೆ ಎಂದು ಪುರೋಹಿತರು ಹೇಳಿದ್ದಾರೆ.












Click it and Unblock the Notifications