ಕೊವಿಡ್ 19 ವೈದ್ಯಕೀಯ ಸಾಮಗ್ರಿ ಹೊತ್ತ ವಿಮಾನ ಚಾಲನೆ ಮಾಡಿದ ಬಿಜೆಪಿ ನಾಯಕ
ನವದೆಹಲಿ, ಮೇ 27: ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿ ದೆಹಲಿಯಿಂದ ಢಾಕಾಗೆ ಕೊವಿಡ್ 19 ವೈದ್ಯಕೀಯ ಸಾಮಗ್ರಿ ಇದ್ದ ವಿಮಾನವನ್ನು ಚಾಲನೆ ಮಾಡಿದ್ದಾರೆ.
ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ ಓರ್ವ ಪೈಲಟ್ ಎಂಬುದು ಅನೇಕ ಜನರಿಗೆ ಗೊತ್ತಿಲ್ಲದಿರಬಹುದಾದ ಸಂಗತಿ. ಅವರ ಈ ಕೌಶಲ್ಯ ಕೊವಿಡ್-19 ವಿರುದ್ಧದ ಕಾರ್ಯಾಚರಣೆ ಸಂದರ್ಭದಲ್ಲಿ ಸಹಾಯಕ್ಕೆ ಬಂದಿದೆ.
ಕೊರೊನಾ ಹೋರಾಟದಲ್ಲಿ ರಾಜಕಾರಣಿಗಳು ತಮ್ಮ ಕೌಶಲ್ಯಗಳನ್ನು ಸೇವೆಗೆ ಸದುಪಯೋಗಪಡಿಸಿಕೊಂಡಿದ್ದಾರೆ. ಈ ಪೈಕಿ ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿ ಒಬ್ಬರು.

ಮೇ.3 ರ ನಂತರ ಎರಡು ವಾರಗಳ ಕಾಲ ಲಾಕ್ ಡೌನ್ ಮುಂದುವರೆಸಿದ್ದ ಭಾರತ ಸರ್ಕಾರ, ಮೇ. 31 ವರೆಗೆ ಅಂತಾರಾಷ್ಟ್ರೀಯ ವಿಮಾನಗಳಿಗೆ ನಿರ್ಬಂಧ ವಿಧಿಸಿತ್ತು. ಕೊವಿಡ್-19 ವೈದ್ಯಕೀಯ ಸಾಮಗ್ರಿಗಳಿದ್ದ ಕಾರ್ಗೋ ಫ್ಲೈಟ್ ನ್ನು ಚಾಲನೆ ಮಾಡಿ ದೆಹಲಿಯಿಂದ ಢಾಕಾಗೆ ಅವುಗಳನ್ನು ತಲುಪಿಸಿದ್ದಾರೆ .
ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಕೊರೊನಾದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಭಾರತ ಉತ್ತಮವಾಗಿ ನಿಭಾಯಿಸುತ್ತಿದೆ ಎಂದಿದ್ದಾರೆ.












Click it and Unblock the Notifications