ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಮಾಳವೀಯಗೆ ಮೊದಲೇ ಗೊತ್ತಿತ್ತಾ ಚುನಾವಣೆ ದಿನಾಂಕ..?!

|
Google Oneindia Kannada News

Recommended Video

Karnataka Elections 2018 : ಅಮಿತ್ ಮಾಳವೀಯಗೆ ಚುನಾವಣಾ ದಿನಾಂಕ ಮೊದಲೇ ತಿಳಿದದ್ದು ಹೇಗೆ | Oneindia Kannada

ಕರ್ನಾಟಕ ವಿಧಾನಸಭೆ ಚುನಾವಣೆ ಇಡೀ ದೇಶದ ನಾಯಕರಿಗೂ ಪ್ರತಿಷ್ಠೆಯ ಪ್ರಶ್ನೆಯೇನೋ ಹೌದು. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಒಬ್ಬ ವ್ಯಕ್ತಿಯೇ ಚುನಾವಣೆಯ ದಿನಾಂಕವನ್ನು ತಪ್ಪು ತಪ್ಪಾಗಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಾಕುವುದು ಎಷ್ಟರ ಮಟ್ಟಿಗೆ ಸರಿ?

ಅದರಲ್ಲೂ ಚುನಾವಣಾ ಆಯೋಗ ಇನ್ನೂ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡುವ ಮೊದಲೇ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಚುನಾವಣೆಯ ದಿನಾಂಕವನ್ನು ಮೇ.12 ಮತ್ತು ಫಲಿತಾಂಶದ ದಿನಾಂಕವನ್ನು ಮೇ.18(ಮೇ.15ರ ಬದಲಾಗಿ) ಎಂದು ಟ್ವೀಟ್ ಮಾಡಿದ್ದು ಇದೀಗ ವಿವಾದ ಸೃಷ್ಟಿಸಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಯ ಮುಖ್ಯ ದಿನಾಂಕಗಳುಕರ್ನಾಟಕ ವಿಧಾನಸಭೆ ಚುನಾವಣೆಯ ಮುಖ್ಯ ದಿನಾಂಕಗಳು

ಆ ಟ್ವೀಟ್ ಅನ್ನು ಅವರೇನೋ ಡಿಲೀಟ್ ಮಾಡಿದ್ದಾರೆ. ಆದರೆ ಅವರು ಟ್ವೀಟ್ ಮಾಡಿ ಕೆಲವೇ ಕ್ಷಣಗಳಲ್ಲೇ ಅದನ್ನು ಡಿಲೀಟ್ ಮಾಡಿದ್ದರೂ, ಕಿಲಾಡಿಗಳು ಕೆಲವರು ಅದಾಗಲೇ ಅದರ ಸ್ಕ್ರೀನ್ ಶಾಟ್ ತೆಗೆದಿಟ್ಟುಕೊಂಡು ಮಾಳವೀಯ ಕಾಲೆಳೆಯುವುದಕ್ಕೆ ಆರಂಭಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮೇ.12 ರಂದು ನಡೆಯಲಿದೆ, ಮತ್ತು ಮೇ 15 ರಂದು ಬಿಡುಗಡೆಯಾಗಲಿದೆ ಎಂದು ಇಂದು ಭಾರತೀಯ ಚುನಾವಣಾ ಆಯೋಗ ಘೋಷಣೆ ಮಾಡಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚುನಾವಣೆ ದಿನಾಂಕ ಮೇ 10 ರಿಂದ 12ರ ಒಳಗೆ ನಡೆಯುತ್ತದೆ ಎಂಬುದು ಎಲ್ಲರೂ ಊಹಿಸಿದ್ದ ಸಗತಿಯೇ. ಆದರೆ ಅದನ್ನು ಅಧಿಕೃತವಾಗಿ ಚುನಾವಣಾ ಆಯೋಗಕ್ಕೂ ಮೊದಲೇ ಪ್ರಕಟಿಸಿದ್ದು ಹೇಗೆ? ನಿಖರವಾಗಿ ಮೇ.12 ಚುನಾವಣಾ ದಿನಾಂಕ ಎಂದು ಅಮಿತ್ ಮಾಳವೀಯ ಅವರಿಗೆ ಮೊದಲೇ ತಿಳಿದಿದ್ದು ಹೇಗೆ..? ಎಂಬಿತ್ಯಾದಿ ಪ್ರಶ್ನೆಗಳು ಈಗ ಎದ್ದಿವೆ. ಈ ಕುರಿತು ಟ್ವಿಟ್ಟರ್ ನಲ್ಲಿ ಸಾಕಷ್ಟು ಚರ್ಚೆ ಸಹ ನಡೆಯುತ್ತಿದೆ.

ಇವರ ತಲೆಯಲ್ಲಿ ಏನಿದೆ..?!

ಇವರ ತಲೆಯಲ್ಲಿ ಏನಿದೆ..?!

ಬಿಜೆಪಿ ಐಟಿ ಸೆಲ್ ನಲ್ಲಿ ಎಂಥ ಮಹಾನ್ ವ್ಯಕ್ತಿ! ಅಕಸ್ಮಾತ್ ಅಮಿತ್ ಮಾಳವೀಯ ಅವರಿಗೆ ಚುನಾವಣೆ ದಿನಾಂಕ ಗೊತ್ತಿದ್ದರೂ ಅದನ್ನು ಚುನಾವಣಾ ಆಯೋಗಕ್ಕೂ ಮೊದಲೇ ಘೋಷಿಸುವ ಜರೂರತ್ತು ಏನಿತ್ತು? ಅವರ ತಲೆಯಲ್ಲಿ ಏನಿದೆ? ಎಂಥ ಬಾಲಿಶ ವರ್ತನೆ! ಎಂದು ಕಿಡಿಕಾರಿದ್ದಾರೆ ಸೌಂದರಮ್ ರಾಜಪ್ಪ. ಆದರೆ ಅಚ್ಚರಿ ಎಂದರೆ ಈ ರೀತಿ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅವರೂ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ!

ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿ

ಚುನಾವಣಾ ಆಯೋಗಕ್ಕೂ ಮೊದಲೇ ಚುನಾವಣೆ ದಿನಾಂಕ ಘೋಷಿಸಿದ ಅಮಿತ್ ಮಾಳವೀಯ ಅವರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿ ಎಂದು ಹರಿಹಾಯ್ದಿದ್ದಾರೆ ಟಿ.ಎಸ್. ಸುಧೀರ್ ಎಂಬುವವರು.

ಮೊದಲೇ ದಿನಾಂಕ ಗೊತ್ತಿದ್ದಿದ್ದು ಹೇಗೆ?

ಇದು ಮಾಳವೀಯ ಅವರು ಡಿಲೀಟ್ ಮಾಡಿದ ಟ್ವೀಟ್. ನಮಗೆ ಹೇಳಿ ನರೇಂದ್ರ ಮೋದಿಯವರೇ, ನಿಮ್ಮ ಐಟಿ ಸೆಲ್ ಮುಖ್ಯಸ್ಥರಿಗೆ ಸ್ವತಂತ್ರ ಅಂಗವಾದ ಚುನಾವಣಾ ಆಯೋಗಕ್ಕೂ ಮೊದಲೇ ಚುನಾವಣಾ ದಿನಾಂಕ ತಿಳಿದಿದ್ದು ಹೇಗೆ? ಎಂದು ಅಮಿತ್ ಮಾಳವೀಯ ಅವರ ಡಿಲಿಟೇಡ್ ಟ್ವೀಟ್ ನ ಸ್ಕ್ರೀನ್ ಶಾಟ್ ಅನ್ನೂ ನೀಡಿದ್ದಾರೆ ಸ್ವಾತಿ ಚತುರ್ವೇದಿ.

ಅವರೊಬ್ಬ ದ್ರಷ್ಟಾರ..!

ಅಮಿತ್ ಮಾಳವೀಯ ಒಬ್ಬ ಆಧುನಿಕ ಗುರು. ಅವರು ಭವಿಷ್ಯವನ್ನು ನೋಡಬಲ್ಲರು, ಮತ್ತು ಭವಿಷ್ಯದಲ್ಲಿ ಏನಾಗಲಿದೆ ಎಮಬುದನ್ನು ನಮಗೆ ಹೇಳಬಲ್ಲರು. ಅವರಿಗೆ ನಮ್ಮ ನಮನ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ ಅನುರಾಗ್ ಕಾಂಬ್ಳೆ ಎಂಬುವವರು.

English summary
Karnataka assembly elections 2018: BJP IT cell chief Amit Malviya tweets Karnataka Assembly elections dates before Election commission of India. The matter becomes very serious and people on twitter demand investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X