ಬಿಜೆಪಿಯಿಂದ ಎಎಪಿ ಶಾಸಕರಿಗೆ 10 ಕೋಟಿ ರೂ. ಆಮಿಷ: ಕೇಜ್ರಿವಾಲ್ ಶಾಕಿಂಗ್ ಹೇಳಿಕೆ

ನವದೆಹಲಿ, ಮೇ 02: ಬಿಜೆಪಿಯು ಆಮ್ ಆದ್ಮಿ ಪಕ್ಷದ ಏಳು ಶಾಸಕರಿಗೆ ತಲಾ 10 ಕೋಟಿ ರೂ.ಗಳ ಆಮಿಷವೊಡ್ಡಿ ಅವರನ್ನು ಖರೀದಿಸಲು ಯತ್ನಿಸಿದೆ ಎಂದ ಶಾಕಿಂಗ್ ಹೇಳಿಕೆಯನ್ನು ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ನೀಡಿದ್ದಾರೆ.

"ಕಳೆದ ಮೂರು ದಿನಗಳಲ್ಲಿ ಎಎಪಿಯ ಏಳು ಶಾಸಕರು ಬಂದು ನನ್ನ ಬಳಿ ಹೇಳಿದ್ದಾರೆ. ಬಿಜೆಪಿಯು ಅವರಿಗೆ ತಲಾ 10 ಕೋಟಿ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿ, ಬಿಜೆಪಿಗೆ ಸೇರುವಂತೆ ಒತ್ತಾಯಿಸಿದೆ. ಅವರು ನಮ್ಮ ಶಾಸಕರಲ್ಲಿ ಒಡಕು ಮೂಡಿಸುತ್ತಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಪ್ಪುವುದಿಲ್ಲ. ಕಳೆದ ಒಂದೆರಡು ದಿನಗಳ ಹಿಂದಷ್ಟೇ 'ನಾವು ನಲವತ್ತು ಶಾಸಕರನ್ನು ಖರೀದಿಸಿ ಮಮತಾ ಬ್ಯಾನರ್ಜಿ ಸರ್ಕಾರ ಬೀಳುವಂತೆ ಮಾಡುತ್ತೇವೆ' ಎಂದು ಪ್ರಧಾನಿ ಮೋದಿ ಹೇಳಿದ್ದರು. ಇಂಥ ಮಾತುಗಳು ಅವರ ಹುದ್ದೆಗಲ್ಲ" ಎಂದು ಕೇಜ್ರಿವಾಲ್ ಹೇಳಿದರು.

ಪಶ್ಚಿಮ ಬಂಗಾಳದ ಸೆರಾಂಪೋರ್ ನಲ್ಲಿ ಚುನಾವಣಾ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದ, "ನಲವತ್ತಕ್ಕೂ ಹೆಚ್ಚು ಟಿಎಂಸಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಮಮತಾ ಬ್ಯಾನರ್ಜಿ ಸರ್ಕಾರವನ್ನು ಉಳಿಸಲು ಯಾರಿಗೂ ಸಾಧ್ಯವಿಲ್ಲ" ಎಂದಿದ್ದರು.

BJP offers Rs.10 crore each to 7 AAP MLAs: Shocking statement by Kejriwal

"ಜನರು ಎಎಪಿಯ ಕೆಲಸ ನೋಡಿ ಮತ ಹಾಕುತ್ತಾರೆ. ನಾವು ದೆಹಲಿಯಲ್ಲಿ ಉತ್ತಮ ಕೆಲಸ ಮಾಡಿದ್ದೇವೆ. ಮೋದಿ ತಮ್ಮ ಹೆಸರಿನ ಮೂಲಕ ಮತ ಕೇಳಬಹುದು. ನಾವು ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳುತ್ತೇವೆ" ಎಂದು ಕೇಜ್ರಿವಾಲ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+