ಬಿಜೆಪಿ ಸೇರಿದರೆ ಒಬ್ಬರಿಗೆ 20 ಕೋಟಿ, ಮತ್ತೊಬ್ಬರನ್ನು ಕರೆ ತಂದರೆ 25 ಕೋಟಿ!
ನವದೆಹಲಿ, ಆಗಸ್ಟ್ 24: ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಪಕ್ಷಾಂತರವಾಗಿ ಆಪ್ ಸರಕಾರವನ್ನು ಪತನಗೊಳಿಸಿದರೆ, ತಲಾ 20 ಕೋಟಿ ರೂಪಾಯಿ ಮತ್ತು ಇದರ ಭಾಗವಾಗಿ ಹೆಚ್ಚಿನ ಶಾಸಕರನ್ನು ಪಕ್ಷಕ್ಕೆ ಕರೆ ತಂದರೆ 25 ಕೋಟಿ ರೂಪಾಯಿ ನೀಡುವುದಾಗಿ ಹೇಳಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರು ಬುಧವಾರ ಎಂದು ಆರೋಪಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಆಮ್ ಆದ್ಮಿ ಪಕ್ಷ ಇಂದು ತರಾಟೆಗೆ ತೆಗೆದುಕೊಂಡಿದ್ದು, ದೆಹಲಿ ಸರಕಾರವನ್ನು ಕುತಂತ್ರದಿಂದ ಬೀಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ. ಬಿಜೆಪಿ ತನ್ನ ನಾಯಕರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಪಕ್ಷ ಆರೋಪಿಸಿದೆ.
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನಂತರ ಎಎಪಿ ಶಾಸಕರಾದ ಸಂಜಯ್ ಸಿಂಗ್, ಸೋಮನಾಥ್ ಭಾರ್ತಿ, ಸಂಜೀವ್ ಝಾ, ಅಜಯ್ ದತ್ ಮತ್ತು ಕುಲದೀಪ್ ಕುಮಾರ್ ಬಿಜೆಪಿ ವಿರುದ್ಧ ಈ ಆರೋಪಗಳನ್ನು ಮಾಡಿದ್ದಾರೆ.
ಎಎಪಿ ಶಾಸಕರಿಗೆ ಹಣದ ಆಮಿಷ ಮತ್ತು ಬೆದರಿಕ ಒಡ್ಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿಯನ್ನು ಐವರು ಹಿರಿಯ ಆಪ್ ನಾಯಕರು ಇಂದು ಸುದ್ದಿಗೋಷ್ಠಿ ನಡೆಸಿ ಬಿಜೆಪಿಯನ್ನು ಟೀಕಿಸಿದ್ದಾರೆ.

ಬಿಜೆಪಿ ಸೇರುವಂತೆ ಸಿಸೋಡಿಯಾಗೆ ಆಹ್ವಾನ!
ಈ ಪ್ರಸ್ತಾಪವನ್ನು ಸ್ವೀಕರಿಸಲು ನಿರಾಕರಿಸಿದರೇ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮೇಲೆ ಪ್ರಕರಣ ದಾಖಲಿಸಿದಂತೆ ತಮ್ಮ ವಿರುದ್ಧವೂ ನಕಲಿ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎಂದು ಎಎಪಿ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ.
ದೆಹಲಿಯ ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ಅವರ ನಿವಾಸ ಸೇರಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ದಾಳಿ ನಡೆಸಿದ ನಂತರ ಎಎಪಿ ಮತ್ತು ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಿದೆ.
ತನ್ನ ವಿರುದ್ಧದ ಪ್ರಕರಣಗಳನ್ನು ಕೈಬಿಡಬೇಕಾದರೆ ಎಎಪಿಯಲ್ಲಿ ಒಡಕು ಮೂಡಿಸಿ ಬಿಜೆಪಿಗೆ ಸೇರುವಂತೆ ಕೇಳಿಕೊಳ್ಳಲಾಗಿದೆ ಎಂದು ಸಿಸೋಡಿಯಾ ಸೋಮವಾರ ಹೇಳಿದ್ದಾರೆ. ಸಿಸೋಡಿಯಾ ಅವರ ಹೇಳಿಕೆಯನ್ನು ಬಿಜೆಪಿ ನಿರಾಧಾರ ಎಂದು ತಳ್ಳಿಹಾಕಿದೆ.

ನಿನಗಾಗಿ 20 ಕೋಟಿ ರೂಪಾಯಿ ಸಿದ್ಧವಾಗಿದೆ!
ಸಂಜಯ್ ಸಿಂಗ್ ಮತ್ತು ಇತರ ಶಾಸಕರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಭಾರ್ತಿ, "ರಾಷ್ಟ್ರೀಯ ಮಟ್ಟದ ನಾಯಕರೊಬ್ಬರು ನನ್ನನ್ನುಸಂಪರ್ಕಿಸಿ ಬಿಜೆಪಿ ಸೇರುವಂತೆ ಕೇಳಿಕೊಂಡರು, ಇಲ್ಲದಿದ್ದರೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯವು ಅವರ ವಿರುದ್ಧ ನಕಲಿ ಪ್ರಕರಣಗಳನ್ನು ದಾಖಲಿಸುತ್ತದೆ ಎಂದು ಹೇಳಿದರು. ನನಗಾಗಿ 20 ಕೋಟಿ ಸಿದ್ಧವಾಗಿದೆ ಎಂದು ಆ ಬಿಜೆಪಿ ನಾಯಕ ಹೇಳಿದರು. ನಾನು ನನ್ನೊಂದಿಗೆ ಹೆಚ್ಚಿನ ಶಾಸಕರನ್ನು ಕರೆತಂದರೆ ನನಗೆ 25 ರೂಪಾಯಿ ಕೋಟಿ ಸಿಗುತ್ತದೆ. ಪಕ್ಷಾಂತರವಾಗುವ ಇತರ ಶಾಸಕರು 20 ಕೋಟಿ ಪಡೆಯುತ್ತಾರೆ ಎಂದರು" ಎಂದು ಆರೋಪಿಸಿದ್ದಾರೆ.

25 ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ!
"ಮನೀಶ್ ಸಿಸೋಡಿಯಾ ವಿರುದ್ಧದ ಪ್ರಕರಣ ನಕಲಿ ಎಂಬುದು ನನಗೂ ಗೊತ್ತಿದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ" ಎಂದು ಭಾರ್ತಿ ಹೇಳಿದ್ದಾರೆ. ಅವರು ಎಎಪಿ ಸರ್ಕಾರವನ್ನು ಉರುಳಿಸಲು ನಿರ್ಧರಿಸಿದ್ದಾರೆ ಎಂದು ನಾಯಕ ಹೇಳಿದರು. 25 ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಎಎಪಿಯನ್ನು ವಂಚನೆಯಿಂದ ವಿಭಜಿಸಲು ವಿವಿಧ ನಾಯಕರಿಗೆ ಕೆಲಸ ನೀಡಲಾಗಿದೆ ಎಂದು ನಾಯಕ ಹೇಳಿದರು. ನಾನು ಗಾಬರಿಯಾದೆ" ಎಂದು ತಿಳಿಸಿದರು.

ಬಿಜೆಪಿಗೆ ನಾವು ಹೆದರುವುದಿಲ್ಲ!
ಎಎಪಿಗೆ ಯಾವುದೇ ಭವಿಷ್ಯವಿಲ್ಲ ಎಂದು ಹೇಳಿ ತನಗೆ ವೈಯಕ್ತಿಕವಾಗಿ ತಿಳಿದಿರುವ ಬಿಜೆಪಿ ನಾಯಕರೊಬ್ಬರು ನನ್ನನ್ನು ಸಂಪರ್ಕಿಸಿದ್ದಾರೆ ಎಂದು ಸಂಜೀವ್ ಝಾ ಹೇಳಿದರು. ಎಎಪಿ ತೊರೆಯಲು ಅವರು ನನಗೆ 20 ಕೋಟಿ ಮತ್ತು ಹೆಚ್ಚಿನ ಶಾಸಕರನ್ನು ಕರೆತಂದರೆ 25 ಕೋಟಿ ನೀಡುವ ಆಮಿಷ ಒಡ್ಡಿದ್ದರು. ಒಪ್ಪದಿದ್ದರೇ ಶಾಸಕರು ಸಿಸೋಡಿಯಾ ಅವರಂತಹ ನಕಲಿ ಪ್ರಕರಣಗಳನ್ನು ಎದುರಿಸಬೇಕಾಗುತ್ತದೆ ಎಂದು ಆ ವ್ಯಕ್ತಿ ನನಗೆ ಹೇಳಿದರು. ನಾನು ಹೆದರುವುದಿಲ್ಲ ಮತ್ತು ಬಿಜೆಪಿ ನನಗೆ ಏನು ಮಾಡಲಾಗದು ಎಂದು ನಾನು ವ್ಯಕ್ತಿಗೆ ತಿಳಿಸಿದ್ದೇನೆ ಎಂದರು.
ಪಶ್ಚಿಮ ದೆಹಲಿ ಮೂಲದ ಬಿಜೆಪಿ ನಾಯಕರೊಬ್ಬರು ತಮ್ಮ ಬಳಿಗೆ ಬಂದಿದ್ದರು ಎಂದು ಕುಮಾರ್ ಹೇಳಿದ್ದಾರೆ. ಆದರೆ ಅವರಲ್ಲಿ ಯಾರೂ ಬಿಜೆಪಿ ನಾಯಕರು ಹೆಸರುಗಳನ್ನು ಹೆಸರಿಸಲಿಲ್ಲ.
"ಸರಕಾರಗಳನ್ನು ಉರುಳಿಸಲು ಬಿಜೆಪಿ ಹೆಸರುವಾಸಿಯಾಗಿದೆ. ಶಾಸಕರು ತಾವೇ ಸ್ವತಃ ಹಾಜರಾಗಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇದು ಸಾಕಷ್ಟು ಸಾಕ್ಷಿಯಾಗಿದೆ. ಬಿಜೆಪಿ ನಾಯಕರ ಹೆಸರುಗಳನ್ನು ಬಹಿರಂಗಪಡಿಸುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.












Click it and Unblock the Notifications