ಯುಎಸ್ ಸಲಿಂಗಿಗಳ ಬಂಧಿಸಿ ಎಂದ ಬಿಜೆಪಿ

ಭಾರತಕ್ಕೆ ಆಗಮಿಸಿರುವ ಅಮೆರಿಕ ಸಂಸತ್ತಿನ ಪ್ರತಿನಿಧಿಗಳ ಪೈಕಿರುವ ಸಲಿಂಗ ಕಾಮಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಭಾರತದಲ್ಲಿರುವ ಅಮೆರಿಕದ ರಾಯಭಾರಿಗಳು ಇನ್ನಿತರ ಅಧಿಕಾರಿಗಳ ಪೈಕಿ ಯಾರಾದರೂ ಸಲಿಂಗಿಗಳಿದ್ದರೆ ಅವರನ್ನು ಸೆರೆ ಹಿಡಿಯಿರಿ. ಈ ದೇಶದ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಸಲಿಂಗಕಾಮ ಅಪರಾಧವಾಗಿದೆ ಎಂದು ಯಶವಂತ ಸಿನ್ಹಾ ಎಚ್ಚರಿಸಿದ್ದಾರೆ. [ಸಲಿಂಗಕಾಮ ಅನೈತಿಕ, ಅಪರಾಧ : ಸುಪ್ರೀಂಕೋರ್ಟ್]
ಪರಸ್ಪರ ಗೌರವಾದರವುಳ್ಳ ಉಭಯ ರಾಷ್ಟ್ರಗಳು ಈ ರೀತಿ ನಡೆದುಕೊಳ್ಳುವುದಿಲ್ಲ. ಉಪ ರಾಯಭಾರಿ ಮಹಿಳೆ ಅಧಿಕಾರಿಯನ್ನು ವಿವಸ್ತ್ರಗೊಳಿಸಿ ತಪಾಸಣೆ ಮಾಡಿರುವುದು ಆ ದೇಶದ ಕಾನೂನಾದರೆ, ನಮ್ಮ ದೇಶದ ಕಾನೂನಿನ ರುಚಿಯನ್ನು ಇಲ್ಲಿನ ಸರ್ಕಾರ ತೋರಿಸಲಿ, ಅಮೆರಿಕಾದಿಂದ ಬರುವವರಿಗೆ ವೀಸಾ ನೀಡುವುದನ್ನು ನಿಲ್ಲಿಸಲಿ, ಪ್ರತಿನಿಧಿಗಳನ್ನು ಬಂಧಿಸಲಿ ಎಂದು ಸಿನ್ಹಾ ಆಗ್ರಹಿಸಿದ್ದಾರೆ.
ಸಂಗೀತಾ ರಿಚರ್ಡ್ ಎಂಬ ಭಾರತ ಮೂಲದ ಮಹಿಳೆಯನ್ನು ಮನೆಗೆಲಸ ಮತ್ತು ಮಕ್ಕಳನ್ನ ನೋಡಿಕೊಳ್ಳಲು ದೇವಯಾನಿ ಅವರು ಕೆಲಸಕ್ಕೆ ಇಟ್ಟುಕೊಂಡಿದ್ದರು. ಜೂನ್ 2012ರಿಂದ ನವೆಂಬರ್ 2013ರವರೆಗೆ ತಿಂಗಳವರೆಗೆ ದೇವಯಾನಿ ಅವರ ಮನೆಯಲ್ಲಿ ಕೆಲಸ ಮಾಡಿದ ಸಂಗೀತಾ, ವೀಸಾ ದಾಖಲೆಯಲ್ಲಿ ತಿಂಗಳಿಗೆ 4.500 ಡಾಲರ್ ಸಂಬಳ( ಗಂಟೆಗೆ 3.31 ಡಾಲರ್ ಲೆಕ್ಕದಂತೆ) ಕೊಡುತ್ತಿದ್ದೇನೆ ಎಂದು ದೇವಯಾನಿ ಉಲ್ಲೇಖಿಸಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
1999 IFS ಬ್ಯಾಚಿನ ಅಧಿಕಾರಿಯಾಗಿರುವ 39 ವರ್ಷ ವಯಸ್ಸಿನ ದೇವಯಾನಿ ಕೋಬ್ರಾಗಡೆ ಅವರು ಭಾರತ ಸರ್ಕಾರದಿಂದ ವಾರ್ಷಿಕವಾಗಿ 100,000 ಡಾಲರ್ ಪಡೆಯುತ್ತಿದ್ದಾರೆ. ನ್ಯೂಯಾರ್ಕಿನಲ್ಲಿ ಐಷಾರಾಮಿ ವಸತಿ ಗೃಹ ಹೊಂದಿದ್ದಾರೆ. ಅಪರಾಧ ಸಾಬೀತಾದರೆ ದೇವಯಾನಿ ಅವರು 5-10 ವರ್ಷ ಕಾರಾಗೃಹ ವಾಸ ಅನುಭವಿಸಬೇಕಾಗುತ್ತದೆ












Click it and Unblock the Notifications