• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೂಡ ಹರ್ಯಾಣದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ನೇಮಕ

|
Google Oneindia Kannada News

ನವದೆಹಲಿ, ನವೆಂಬರ್ 2: ಹರ್ಯಾಣದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡ ನೇಮಕಗೊಂಡಿದ್ದಾರೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇಮಕ ಮಾಡಿದ್ದಾರೆ. ಹರ್ಯಾಣ ಉಸ್ತುವಾರಿ ಗುಲಾಮ್ ನಬಿ ಅಜಾದ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಹೂಡಾ ಅವರೆ ಹರ್ಯಾಣದ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಲಿದ್ದಾರೆ ಎಂದು ತಿಳಿಸಿದರು.

ಹರ್ಯಾಣದಲ್ಲಿ 2ನೇ ಬಾರಿ ಬಿಜೆಪಿ, 1966ರಿಂದ ಆಳ್ವಿಕೆ ಮಾಡಿದ ಪಕ್ಷಗಳು ಯಾವ್ಯಾವು? ಹರ್ಯಾಣದಲ್ಲಿ 2ನೇ ಬಾರಿ ಬಿಜೆಪಿ, 1966ರಿಂದ ಆಳ್ವಿಕೆ ಮಾಡಿದ ಪಕ್ಷಗಳು ಯಾವ್ಯಾವು?

ವೀಕ್ಷಕರಾಗಿ ಆಗಮಿಸಿದ ಮಧುಸೂಧನ್ ಮಿಸ್ತ್ರಿ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದು, ಹೂಡಾ ಅವರನ್ನು ವಿರೋಧ ಪಕ್ಷದ ನಾಯಕನ್ನಾಗಿ ನೇಮಿಸುವ ಬಗ್ಗೆ ಶಾಸಕರು ಸರ್ವಾನುಮತದಿಂದ ನಿರ್ಣಯವೊಂದನ್ನು ಕೈಗೊಂಡಿದ್ದು, ಸೋನಿಯಾ ಗಾಂಧಿ ಅವರಿಗೆ ರವಾನಿಸಿದ್ದಾರೆ ಎಂದು ಅವರು ಹೇಳಿದರು.

90 ಸದಸ್ಯ ಬಲದ ಹರ್ಯಾಣದಲ್ಲಿ ಬಿಜೆಪಿ 40, ಜೆಜೆಪಿ 10 ಹಾಗೂ ಕಾಂಗ್ರೆಸ್ 31, ರಾಷ್ಟ್ರೀಯ ಲೋಕ ದಳ, ಹರ್ಯಾಣ ಲೋಕಹಿತ ಪಾರ್ಟಿ ತಲಾ ಒಂದು ಹಾಗೂ ಪಕ್ಷೇತರರು ಏಳು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಏಳು ಪಕ್ಷೇತರರು ಬಿಜೆಪಿ ಸರ್ಕಾರ ರಚನೆಗೆ ಬೆಂಬಲ ನೀಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಹೂಡಾ ಹಾಗೂ ಹರ್ಯಾಣ ಕಾಂಗ್ರೆಸ್ ಅಧ್ಯಕ್ಷೆ ಕುಮಾರಿ ಶೆಲ್ಜಾ ಅವರ ಪ್ರಯತ್ನವನ್ನು ಹೊಗಳಿದ ಅಜಾದ್, ಪಕ್ಷಕ್ಕಾಗಿ ಅವರು ಒಗ್ಗೂಡಿ ಕೆಲಸ ಮಾಡಿದ್ದಾರೆ. ಕಡಿಮೆ ಸಮಯದಲ್ಲೂ ಕಾಂಗ್ರೆಸ್ ಉತ್ತಮ ರೀತಿಯ ಸಾಮರ್ಥ್ಯ ಸಾಬೀತುಪಡಿಸುವಲ್ಲಿ ನೆರವಾಗಿದೆ ಎಂದು ಹೇಳಿದರು.

English summary
Congress president Sonia Gandhi on Saturday appointed former Haryana chief minister Bhupinder Singh Hooda leader of the Congress Legislature Party (CLP) in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X