ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿರಿ ಫೋರ್ಟ್ ನಲ್ಲಿ ಕಳೆಗಟ್ಟಿದ ಬರಾಕ್ ಒಬಾಮಾ ಭಾಷಣ

By Mahesh
|
Google Oneindia Kannada News

ನವದೆಹಲಿ, ಜ.26: ಅಮೆರಿಕ ಅಧಕ್ಷ ಬರಾಕ್ ಒಬಾಮಾ ಅವರ ಮೂರನೇ ಅಂತಿಮ ದಿನದ ದಿನಚರಿ ಇನ್ನೇನು ಮುಗಿಯಲಿದೆ. ಗಣರಾಜ್ಯೋತ್ಸವ ಸಂಭ್ರಮದ ನಂತರ ರಾಷ್ಟ್ರಪತಿ ಭವನದಲ್ಲಿ ಚಹಾ ಕೂಟ, ಹೋಟೆಲ್ ನಲ್ಲಿ ಸಿಇಒಗಳ ಜೊತೆ ಚರ್ಚೆ ನಡೆಸಿದ ಒಬಾಮಾ ಅವರು ಮಂಗಳವಾರ ಸಿರಿ ಫೋರ್ಟ್ ಆಡಿಟೋರಿಯಂನಲ್ಲಿ ವಿದ್ಯಾರ್ಥಿಗಳು, ಯುವ ಜನತೆ ಉದ್ದೇಶಿಸಿ ಭಾಷಣ ಮಾಡಿದ್ದಾರೆ.

ಒಬಾಮಾ ಅವರ ಆಹ್ವಾನ ಪಡೆದಿರುವ ನೊಬೆಲ್ ಪಾರಿತೋಷಕ ವಿಜೇತ ಸಾಮಾಜಿಕ ಕಾರ್ಯಕರ್ತ ಕೈಲಾಶ್ ಸತ್ಯಾರ್ಥಿ ಅವರು ಕೂಡಾ ಆಡಿಟೋರಿಯಂನಲ್ಲಿ ಉಪಸ್ಥಿತರಿದ್ದಾರೆ. [ಒಬಾಮಾ ಚ್ಯೂಯಿಂಗ್ ಗಮ್ ಯಾಕಮ್ಮ?]

Obama at Siri Auditorium

ಭಾಷಣದ ಮುಖ್ಯಾಂಶಗಳು ಇಲ್ಲಿದೆ:
* ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುವ ಜನಾಂಗ ಹೊಂದಿದ್ದು, ಏನು ಬೇಕಾದರೂ ಸಾಧಿಸುವ ಶಕ್ತಿ ಹೊಂದಿದ್ದಾರೆ. ಯುವ ಜನಾಂಗ ವಿಶ್ವವನ್ನೇ ಬದಲಿಸಬಲ್ಲದು.
* ನಾವು ಬಯಸುವ ಶಾಂತಿ, ಸೌಹಾರ್ದತೆ ನಮ್ಮೆಲ್ಲರ ಹೃದಯದಲ್ಲಿದೆ.
* ಶಾರುಖ್ -ಕಾಜೋಲ್ ಅಭಿನಯದ ಡಿಡಿಎಲ್ ಜೆ ಚಿತ್ರದ ಡೈಲಾಗ್ ಹೊಡೆದ ಒಬಾಮಾ.


* ನನ್ನಜ್ಜ ಬ್ರಿಟಿಷ್ ಅರ್ಮಿಯಲ್ಲಿ ಅಡುಗೆ ಕೆಲಸದಲ್ಲಿದ್ದರು, ನಾನು ಐಸ್ ಕ್ರೀಮ್ ಸೆಲ್ಲರ್ ಆಗಿದ್ದೆ, ಮೋದಿ ಅವರು ಚಹಾ ಮಾರಾಟಗಾರನಾಗಿದ್ದರು. ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ, ಗೌರವ, ಬೆಲೆ ಸಿಗುತ್ತದೆ ಎಂಬುದಕ್ಕೆ ನಾವೇ ಜೀವಂತ ಉದಾಹರಣೆ.

* ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ, ಮಿಲ್ಕಾಸಿಂಗ್, ಮೇರಿ ಕೋಮ್, ಕೈಲಾಶ್ ಸತ್ಯಾರ್ಥಿ ಹೀಗೆ ಪಟ್ಟಿ ಬೆಳೆಯುತ್ತದೆ.
* ರಾಷ್ಟ್ರಪತಿ ಭವನದಲ್ಲಿ ಗೌರವ ವಂದನೆ ನೀಡಿದ ಮಹಿಳೆಗೆ ನನ್ನ ನಮನ ಎಂದ ಒಬಾಮಾ.

* ಕಳೆದ ಬಾರಿ ಮುಂಬೈನಲ್ಲಿ ದೀಪಾವಳಿ ಅಂಗವಾಗಿ ನೃತ್ಯ ಮಾಡಿದ್ದೆ. ಈ ಬಾರಿ ಸಮಯ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ನೃತ್ಯಪ್ರಿಯ ಒಬಾಮಾ.

* ಜಾಗತಿಕ ತಾಪಮಾನ ಇಳಿಕೆ ನಮ್ಮ ಗುರಿ, ಹಿಮಾಲಯದ ಹಿಮಗಡ್ಡೆಗಳು ಕರಗುತ್ತಿವೆ, ಹವಾಮಾನ ವೈಪರೀತ್ಯ ನಿಯಂತ್ರಣಕ್ಕಾಗಿ ಶ್ರಮಿಸಬೇಕಿದೆ.
* ಗಣತಂತ್ರದಿನದ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ನನಗೆ ನೀಡಿದ ದೊಡ್ಡ ಗೌರವ. ಮೋದಿ ಅವರಿಗೆ ನಾನು ಆಭಾರಿಯಾಗಿದ್ದೇನೆ.
* ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳು ಒಂದಾಗಿ ಕಾರ್ಯ ನಿರ್ವಹಿಸಲಿದೆ. ಎರಡು ದೇಶಗಳು ಮಂಗಳ ಹಾಗೂ ಚಂದ್ರನ ಅಂಗಳಕ್ಕೆ ಕಾಲಿಟ್ಟಿವೆ.

* ಮೋದಿ ಅವರ ಪ್ರತಿಯೊಂದು ಮಗುವಿಗೂ ಶಿಕ್ಷಣ, ಸ್ವಚ್ಛ ಭಾರತ ಅಭಿಯಾನ, ಮಹಿಳಾ ಸಬಲೀಕರಣ, ಜನಧನ್ ಯೋಜನೆ ಅನುಕರಣೀಯ.
* ಬಾಲ ಕಾರ್ಮಿಕರ ಪಿಡುಗನ್ನು ನಿವಾರಿಸಲು ಶ್ರಮಿಸಿದ ಕೈಲಾಶ್ ಸತ್ಯಾರ್ಥಿಯಂಥ ದಿಗ್ಗಜರು ಇವರ ದೇಶವಿದು.
* ಸ್ವಾಮಿ ವಿವೇಕಾನಂದರನ್ನು ಸ್ಮರಿಸಿದ ಒಬಾಮಾ, ಅಮೆರಿಕಕ್ಕೆ ಬಂದು ಎಲ್ಲರನ್ನು ಬ್ರದರ್ಸ್, ಸಿಸ್ಟರ್ಸ್ ಎಂದಿದ್ದರು.ಅವರ ಸಿದ್ಧಾಂತಗಳು ನಮಗೂ ಸ್ಪೂರ್ತಿ ನೀಡಿವೆ.
* ಭಾರತದ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಅಮೆರಿಕ ನೆರವಾಗಲಿದೆ.

* ಏಷ್ಯಾ ಫೆಸಿಫಿಕ್ ಪ್ರದೇಶದಲ್ಲಿ ಮೋದಿ ನೇತೃತ್ವದ ಸರ್ಕಾರ ಬೆಳೆಸಿರುವ ಬಾಂಧವ್ಯ ಹೊಸ ಭವಿಷ್ಯ ಬರೆಯಲಿದೆ.
* ವಿದ್ಯಾರ್ಥಿಗಳು ಹೆಚ್ಚೆಚ್ಚು ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕು. ಭಾರತ-ಅಮೆರಿಕ ನಡುವೆ ಹೊಸ ಇತಿಹಾಸ ಆರಂಭವಾಗಿದೆ.
* ಅಣ್ವಸ್ತ್ರ ರಹಿತ ಶಾಂತಿಯುತ ವಿಶ್ವವನ್ನು ಕಾಣಲು ಅಮೆರಿಕ ಬಯಸುತ್ತದೆ.
* ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಮಾಡುವುದನ್ನು ಸಹಿಸಲ್ಲ, ಭಯೋತ್ಪಾದನೆ ನಿರ್ಮೂಲನೆ ನಾವು ಕೈಜೋಡಿಸಿದ್ದೇವೆ.

* ನಮಸ್ತೆ ಎಂದು ಭಾಷಣ ಆರಂಭಿಸಿದ ಒಬಾಮಾ, ವಿದ್ಯಾರ್ಥಿಗಳು, ಬಾಲಿವುಡ್ ತಾರೆಗಳು, ಕ್ರೀಡಾಪಟುಗಳಿಂದ ಕಿಕ್ಕಿರಿದಿರುವ ಸಭಾಂಗಣ.

ಸಿರಿ ಫೋರ್ಟ್ ಆಡಿಟೋರಿಯಂನಿಂದ ಲೈವ್ ವಿಡಿಯೋ ಪ್ರಸಾರ ನೋಡಿ


ಈ ಕಾರ್ಯಕ್ರಮದ ನಂತರ ಒಬಾಮಾ ಅವರು ಮೋದಿ ಅವರ 'ಮನ್ ಕಿ ಬಾತ್' ಆಕಾಶವಾಣಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಜಂಟಿ ಧ್ವನಿಮುದ್ರಣ ಇಂದು ರಾತ್ರಿ 8ಕ್ಕೆ ಪ್ರಸಾರವಾಗಲಿದೆ. ನಾಳೆ ಸುಮಾರು 30 ಭಾಷೆಗಳಲ್ಲಿ 60 ದೇಶಕ್ಕೆ ಇವರಿಬ್ಬರ ಮನದಾಳದ ಮಾತು ತಲುಪಲಿದೆ. [ಒಬಾಮಾಗೆ ಟೀ ಟೈಮಲ್ಲಿ ಸಮೋಸಾ, ಮಟನ್ ಪಫ್ ]

ಇದಕ್ಕೂ ಮುನ್ನ ಸೋಮವಾರ ಸಂಜೆ ತಾಜ್ ಪ್ಯಾಲೇಸ್ ಹೊಟೆಲ್ ನಲ್ಲಿ ಚಹಾ ಕೂಟದಲ್ಲಿ ವಿವಿಧ ಸಂಸ್ಥೆಗಳ ಸಿಇಒಗಳಲ್ಲದೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ರಾಷ್ಟ್ರಪತಿ ಭವನದಲ್ಲಿ ಒಬಾಮಾ ದಂಪತಿ ಸೇರಿದಂತೆ ವಿವಿಧ ಗಣ್ಯರಿಗೆ ಮತ್ತೊಮ್ಮೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆತಿಥ್ಯ ನೀಡಿದರು.

English summary
On the last day of his trip, Obama will address 2000 people at Siri Fort and will have a radio chat with PM Narendra Modi. Here is what happened on his third day of radio chat with PM Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X