• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಣತಂತ್ರ ದಿನ ಸಂಭ್ರಮದಲ್ಲಿ ಒಬಾಮಾ, ಮೋದಿ

By Mahesh
|

ನವದೆಹಲಿ, ಜ.26: ಮೂರು ದಿನಗಳ ಭಾರತ ಪ್ರವಾಸ ನಿರತ ಅಮೆರಿಕ ಅಧಕ್ಷ ಬರಾಕ್ ಒಬಾಮಾ ಅವರ ಎರಡನೇ ದಿನದ ದಿನಚರಿ ಮುಂಜಾನೆಯ ಚಳಿಯೊಂದಿಗೆ ಆರಂಭಗೊಂಡಿದೆ. ತಂತುರು ಮಳೆಯೊಡನೆ ರಾಜಪಥಕ್ಕೆ ಬೀಸ್ಟ್ ನಲ್ಲಿ ಆಗಮಿಸಿದ ಒಬಾಮಾ ಹಾಗೂ ಮಿಶೆಲ್ ಅವರನ್ನು ಪೇಟಧಾರಿ ಪ್ರಧಾನಿ ಮೋದಿ ಅವರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

ಕೆಂಪುಕೋಟೆಯಲ್ಲಿ ಧ್ವಜಾರೋಹಣಕ್ಕೂ ಮುನ್ನ ಅಮರ್ ಜವಾನ್ ಜ್ಯೋತಿ ಸ್ಮಾರಕ ಸ್ಥಳಕ್ಕೆ ತೆರಳಿದ ಪ್ರಧಾನಿ ಮೋದಿ ಅವರು ಅಗಲಿದ ಯೋಧರಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದರು. [ಚಿತ್ರಗಳಲ್ಲಿ ನೋಡಿ : ಭಾರತದಲ್ಲಿ ಒಬಾಮಾ ಮೊದಲ ದಿನ]

ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿ ಬರಾಕ್ ಓಬಾಮಾ ಉಪಸ್ಥಿತಲಿರಲಿದ್ದಾರೆ. ಗಣರಾಜ್ಯೋತ್ಸವಕ್ಕೆ ಕೆಂಪುಕೋಟೆ ಸಜ್ಜಾಗಿದ್ದು, ಭಾರೀ ಭದ್ರತೆ ಒದಗಿಸಲಾಗಿದೆ. [ಗಣರಾಜ್ಯೋತ್ಸವ : ಕರ್ನಾಟಕದ ಸ್ತಬ್ಧಚಿತ್ರ ನೋಡಿ]

ಒಬಾಮಾ ಭಾರತ ಪ್ರವಾಸದ ಎರಡನೇ ದಿನದ ಅಪ್ಡೇಟ್ಸ್ ಇಲ್ಲಿ ಓದುತ್ತಿರಿ...

* ಸಂಜೆ 6ರ ವೇಳೆಗೆ ತಾಜ್ ಪ್ಯಾಲೇಸ್ ಹೊಟೆಲ್ ನಲ್ಲಿ ಚಹಾ ಕೂಟದಲ್ಲಿ ವಿವಿಧ ಸಂಸ್ಥೆಗಳ ಸಿಇಒಗಳಲ್ಲದೆ ಅನೇಕ ಗಣ್ಯರು ಪಾಲ್ಗೊಂಡಿದ್ದಾರೆ.

* ರಾಷ್ಟ್ರಪತಿ ಭವನದಲ್ಲಿ ಒಬಾಮಾ ದಂಪತಿ ಸೇರಿದಂತೆ ವಿವಿಧ ಗಣ್ಯರಿಗೆ ಮತ್ತೊಮ್ಮೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆತಿಥ್ಯ ನೀಡಿದರು.

* ಅಲೂ ಮಟರ್ ಸಮೋಸಾ, ಮಟನ್ ಪಫ್, ಕೆನೆಭರಿತ ಸೌತೆಕಾಯಿ ಸ್ಯಾಂಡ್ ವಿಚ್, ಚಿಕನ್ ಮಲಾಯಿ ಟಿಕ್ಕಾ, ಫಿಶ್ ಫಿಂಗರ್ಸ್, ಪನೀರ್ ವ್ರಾಪ್, ಅನಾರ್ ಭೋಗ್, ಟೀ, ಕಾಫಿ.

* ಗಣರಾಜ್ಯೋತ್ಸವ ಸಂಭ್ರಮವನ್ನು ಕಣ್ತುಂಬಿಸಿಕೊಂಡ ಮೇಲೆ ಬರಾಕ್ ಒಬಾಮಾ ಹಾಗೂ ನರೇಂದ್ರ ಮೋದಿ ಅವರು ವಿವಿಧ ಸಂಸ್ಥೆಗಳ ಸಿಇಒಗಳನ್ನು ಭೇಟಿ ಮಾಡಲಿದ್ದಾರೆ.

* ಹನಿವೇಲ್, ಡಿಸ್ನಿ, ಮಾಸ್ಟರ್ ಕಾರ್ಡ್, ಪೆಪ್ಸಿಕೋ, ಮಾರಿಯಾಟ್ ಇಂಟರ್ ನ್ಯಾಷನಲ್, ಸನ್ ಎಡಿಸನ್, ವೆಸ್ಟಿಂಗ್ ಹೌಸ್, ವಾರ್ಮೀರ್ ಮುಂತಾದ ಸಂಸ್ಥೆ ಸಿಇಒಗಳ ಜೊತೆ ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ.

*ಬಾನೆತ್ತರಕ್ಕೆ ಹಾರಿದ ದೇಶದ ಹೆಮ್ಮೆಯ ಯುದ್ಧವಿಮಾನಗಳು

*ಬಿಎಸ್ ಎಫ್ ನ ಮೋಟರ್ ಸೈಕಲ್ ಸ್ಟಂಟ್ ಗೆ ಥಮ್ಸ್ ಅಪ್ ಎಂದ ಒಬಾಮಾ

*ಡೇರ್ ಡೆವಿಲ್ ಪಡೆ ಸ್ಟಂಟ್

*ಮೇಕ್ ಇನ್ ಇಂಡಿಯಾ ಸ್ತಬ್ದ ಚಿತ್ರ

* ಸೇನಾಪಡೆಗಳ ಸಾಹಸ ಪ್ರದರ್ಶನ ವೀಕ್ಷಿಸಿದ ಒಬಾಮಾ

* ಚನ್ನಪಟ್ಟಣ ಗೊಂಬೆಗಳ ಸ್ತಬ್ದಚಿತ್ರ ಪ್ರಥಮ ಸ್ತಬ್ದ ಚಿತ್ರವಾಗಿ ಮೆರವಣಿಗೆಯಲ್ಲಿ ಸಾಗಿತು. ನಂತರ ಆಂಧ್ರಪ್ರದೇಶ ಸೇರಿದಂತೆ 16 ರಾಜ್ಯಗಳ ವಿವಿಧ ಇಲಾಖೆಗಳ ಒಟ್ಟು 25 ಸ್ತಬ್ದ ಚಿತ್ರಗಳು ಸಾಗುತ್ತಿವೆ.

ರಾಜಸ್ಥಾನದ ಒಂಟೆ ದಳ

ಮೂರು ಸೇನೆಗಳ ಮುಖ್ಯಸ್ಥರು

ಜಲಸೇನೆ ಮಹಿಳಾ ಪಡೆ

ಲೆ. ಕಮಾಂಡೆರ್ ಸಂಧ್ಯಾ ಚೌಹಣ್ ನೇತೃತ್ವದ ಪಡೆ

* ಡಿಆರ್ ಡಿಒ ತಂಡ, ಆಕಾಶ್ ಕ್ಷಿಪಣಿ ರಾಜಪಥದಲ್ಲಿ ಸಾಗಿತು.

* ವಿವಿಧ ಸೇನಾ ದಳಗಳ ಬ್ಯಾಂಡ್ ವಾದನದ ಪರೇಡ್ ಪಥಸಂಚಲನ ವೀಕ್ಷಣೆ.

* ವಾಯು, ಜಲ, ಭೂಸೇನೆಯ ಮಹಿಳಾ ಪಡೆಗಳಿಂದ ಪ್ರಪ್ರಥಮ ಬಾರಿಗೆ ಪಥ ಸಂಚಲನ

* ಮೈಸೂರು ಮಹಾರಾಜರ ಕಾಲದ ಅಶ್ವದಳದ ಪರೇಡ್ ವೀಕ್ಷಿಸಿದ ಒಬಾಮಾ

* ಕಮಾಂಡೆರ್ ಸುಬ್ರತೋ ಮಿಶ್ರಾ ನೇತೃತ್ವದ ಸೈನಿಕ ಪಡೆ ಗೌರವ ವಂದನೆ ಸ್ವೀಕರಿಸುತ್ತಿರುವ ಪ್ರಣಬ್ ಮುಖರ್ಜಿ

10.15: ರಾಜಪಥದಲ್ಲಿ ಪ್ರಪ್ರಥಮ ಬಾರಿಗೆ ಕುತೂಹಲದಿಂಡ ಪರೇಡ್ ವೀಕ್ಷಿಸುತ್ತಿರುವ ಬರಾಕ್ ಒಬಾಮಾ ಹಾಗೂ ಮಿಶೆಲ್

10.05: ರಾಷ್ಟ್ರಪತಿಗಳಿಂದ ತ್ರಿವರ್ಣ ಧ್ವಜಾರೋಹಣ, ಪ್ರಧಾನಿ ಮೋದಿ ಹಾಗೂ ಅವರ ಸಚಿವ ಸಂಪುಟ ಸದಸ್ಯರಿಂದ ಧ್ವಜ ವಂದನೆ ಗೌರವ.

* ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಒಬಾಮಾರಿಂದ ಗಣರಾಜ್ಯೋತ್ಸವದಲ್ಲಿ ಭಾಗಿ.

* ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ದೇಶದ ವೀರಯೋಧರಿಗೆ, ಹುತಾತ್ಮ ಸೇನಾನಿಗಳ ಕುಟುಂಬ ಸದಸ್ಯರಿಗೆ ಪ್ರಶಸ್ತಿ ಪ್ರದಾನ, ಅಶೋಕ ಚಕ್ರ

10.05: ರಾಷ್ಟ್ರಪತಿಗಳಿಂದ ತ್ರಿವರ್ಣ ಧ್ವಜಾರೋಹಣ, ಪ್ರಧಾನಿ ಮೋದಿ ಹಾಗೂ ಅವರ ಸಚಿವ ಸಂಪುಟ ಸದಸ್ಯರಿಂದ ಧ್ವಜ ವಂದನೆ ಗೌರವ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ವಂದನೆ ಸ್ವೀಕಾರ

ಮೋದಿ ಹಾಗೂ ಒಬಾಮಾ

ರಾಷ್ಟ್ರಪತಿಗಳಿಂದ ಅಶೋಕ್ ಚಕ್ರ ಪ್ರದಾನ

ರಾಜಪಥಕ್ಕೆ ಆಗಮಿಸಿದ ಒಬಾಮಾ

66ನೇ ಗಣರಾಜ್ಯೋತ್ಸವ ಸಮಾರಂಭ ರಾಜಪಥದಿಂದ ಲೈವ್ ನೋಡಿ

English summary
US President Barack Obama arrived at the Palam Airport here on Sunday morning.Today he will witness the Republic Day celebrations along with his wife Michelle Obama
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X