ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನನ್ನು ಭಯೋತ್ಪಾದಕನಂತೆ ನೋಡುತ್ತಿದ್ದಾರೆ: ಅಜಮ್ ಖಾನ್

|
Google Oneindia Kannada News

ನವದೆಹಲಿ, ಫೆಬ್ರವರಿ 29: ನನ್ನನ್ನು ಎಲ್ಲರೂ ಭಯೋತ್ಪಾದಕನಂತೆ ನೋಡುತ್ತಾರೆ ಎಂದು ಫೋರ್ಜರಿ ಪ್ರಕರಣದಡಿ ಜೈಲು ಸೇರಿರುವ ರಾಮ್‌ಪುರ ಲೋಕಸಭಾ ಸಂಸದ ಅಜಮ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ.

ಫೋರ್ಜರಿ ಪ್ರಕರಣದಲ್ಲಿ ಜೈಲು ಸೇರಿದ್ದ ಅಜಮ್‌ ಖಾನ್‌ ಅವರನ್ನು ಸೀತಾಪುರ್ ಜೈಲಿನಿಂದ ರಾಂಪುರಕ್ಕೆ ವಿಚಾರಣೆಗೆಂದು ಕರೆತಂದಾಗ ಇದನ್ನು ಹೇಳಿದರು. ಅಜಮ್ ಖಾನ್, ಪತ್ನಿ ತಜೀನ್ ಫಾತಿಮಾ, ಮಗ ಅಬ್ದುಲ್ಲಾ ಅಜಮ್ ಅವರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ವಿಚಾರಣೆಯನ್ನು ನ್ಯಾಯಾಲಯವು ಮಾರ್ಚ್ 2ಕ್ಕೆ ಮುಂದೂಡಿದೆ.

ಖಾನ್ ಕುಟುಂಬದ ವಿರುದ್ಧ ನ್ಯಾಯಾಲಯವು ವಿವಿಧ ಪ್ರಕರಣಗಳಲ್ಲಿ ಸಲ್ಲಿಸಿದ್ದ ಸಮನ್ಸ್ ಗಳನ್ನು ನಿರ್ಲಕ್ಷಿಸಿತ್ತು.ಇದರ ಪರಿಣಾಮವಾಗಿ ಅವರ ವಿರುದ್ಧ ಕುಟುಂಬದ ವಿರುದ್ಧ ವಾರಂಟ್ ಜಾರಿಯಾಗಿತ್ತು.

Azam Khan Says Treating Me Like Terrorist

ರಾಂಪುರದ ಸ್ಥಳೀಯ ಸಂಸದರ-ಶಾಸಕರ ವಿಶೇಷ ನ್ಯಾಯಾಲಯ ಮೊಹಮ್ಮದ್ ಅಜಮ್ ಖಾನ್, ತಂಜೀನ್ ಫಾತಿಮಾ ಮತ್ತು ಅಬ್ದುಲ್ಲಾ ಆಜಮ್ ಅವರ ಆಸ್ತಿಗಳನ್ನು ಲಗತ್ತಿಸಲು ಮಂಗಳವಾರ ಆದೇಶಿಸಿತ್ತು. ಸಮಾಜವಾದಿ ನಾಯಕಜಾಮೀನು ಪಡೆಯಲು ಹಲವಾರು ಪ್ರಯತ್ನಗಳನ್ನು ಮಾಡಿದರೂ ಸಹ ಅದು ಸಫಲವಾಗಿರಲಿಲ್ಲ.

ಎಸ್ಪಿ ಸಂಸದ ಅಜಂ ಖಾನ್ ಹಾಗೂ ಕುಟುಂಬಕ್ಕೆ ಜೈಲುವಾಸಎಸ್ಪಿ ಸಂಸದ ಅಜಂ ಖಾನ್ ಹಾಗೂ ಕುಟುಂಬಕ್ಕೆ ಜೈಲುವಾಸ

ಕಳೆದ ವರ್ಷ ಜುಲೈನಲ್ಲಿ ಅಜಮ್ ಖಾನ್ ಗೆ ಸಂಕಷ್ಟಗಳು ಪ್ರಾರಂಬವಾಗಿದ್ದವು. ಅವರ ಮತ್ತು ಅವರ ಕುಟುಂಬದ ವಿರುದ್ಧ 4 ಕ್ಕೂ ಹೆಚ್ಚು ಪ್ರಕರಣಗಳುದಾಕಲಾಗಿದೆ.
ಭೂ ಕಬಳಿಕೆ, ಅತಿಕ್ರಮಣ, ಪುಸ್ತಕ ಕಳ್ಳತನ, ವಿದ್ಯುತ್ ಕಳ್ಳತನ, ಪ್ರತಿಮೆ ಕಳ್ಳತನ, ಎಮ್ಮೆ ಕಳ್ಳತನ, ಮೇಕೆ ಕಳ್ಳತನಕ್ಕಾಗಿ ಸಂಸದರ ವಿರುದ್ಧ ಪ್ರಕರಣ ದಾಖಲಾಗಿದೆ.

ಅವರ ಪುತ್ರ ಅಬ್ದುಲ್ಲಾ ಅಜಮ್ ವಿರುದ್ಧ ಜನ್ಮ ದಿನಾಂಕದ ದಾಖಲೆಗ ನಕಲಿ ಮಾಡಿದ ಪ್ರಕರಣವಿದೆ. ಖೋಟಾ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾದ ನಂತರ ಅವರು ರಾಜ್ಯ ವಿಧಾನಸಭೆಯ ಸದಸ್ಯತ್ವವನ್ನು ಸಹ ಕಳೆದುಕೊಂಡರು.

English summary
Lok Sabha MP from Rampur and senior Samajwadi Party leader Azam Khan, alleged he was "being treated like a terrorist". who was taken from Sitapur jail to Rampur today for hearing in a forgery case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X