ಸುಪ್ರೀಂಕೋರ್ಟ್‌ನಲ್ಲಿಂದು ಅಯೋಧ್ಯೆ ರಾಮಮಂದಿರ ಅರ್ಜಿ ವಿಚಾರಣೆ

ನವದೆಹಲಿ, ಮೇ 10: ಅಯೋಧ್ಯೆ ರಾಮಮಂದಿರ ಭೂ ವಿವಾದ ಕುರಿತ ಅರ್ಜಿ ವಿಚಾರಣೆ ಇಂದು ಸುಪ್ರೀಂಕೋರ್ಟ್ ಮುಂದೆ ಬರಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಹಿಂದಿನ ವಿಚಾರಣೆ ಸಂದರ್ಭದಲ್ಲಿ ಸಂಧಾನ ಪ್ರಕ್ರಿಯೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ನಿವೃತ್ತ ನ್ಯಾಯಮೂರ್ತಿ ಎಫ್‌ಎಂಐ ಕಲಿಫುಲ ಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿಶಂಕರ್ ಗುರೂಜಿ, ಹಿರಿಯ ನ್ಯಾಯವಾದಿ ಶ್ರೀರಾಮ್ ಪಂಚ್ ನೇತೃತ್ವದಲ್ಲಿ ಗೌಪ್ಯ ಸಂಧಾನ ಸಭೆ ನಡೆಸುವಂತೆ ಕೋರ್ಟ್ ಸೂಚಿಸಿತ್ತು.

ಸುಪ್ರೀಂಕೋರ್ಟ್ ನೀಡಿರುವ ಎಂಟು ಅಥವಾ ಎರಡು ತಿಂಗಳಿನ ಗಡುವು ಇಂದು ಕೊನೆಯಾಗುತ್ತಿದೆ. ಸಂಧಾನ ಪ್ರಕ್ರಿಯೆ ವಿವರಗಳನ್ನು ಮಾಧ್ಯಮಗಳಿಗೆ ಅಥವಾ ಸಾರ್ವಜನಿಕರಿಗೆ ಬಹಿರಂಗಗೊಳಿಸದಂತೆ ಸಂಧಾನ ಸಮಿತಿಗೆ ಕೋರ್ಟ್ ಸೂಚಿಸಿತ್ತು.

Ayodhya land dispute case to be heard by Supreme Court today

ಈ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಸಂಧಾನ ಸಮಿತಿಗೆ ನೀಡುವ ಅಭಿಪ್ರಾಯ ಅಥವಾ ವರದಿ ಮೇಲೆ ತೀವ್ರ ಕುತೂಹಲ ಆರಂಭವಾಗಿದೆ.

ಕಳೆದ ಎಂಟು ವಾರಗಳ ಸಂಧಾನ ಪ್ರಕ್ರಿಯೆ ವಿಫಲವಾಗಿದೆಯೇ ಅಥವಾ ಯಶಸ್ವಿಯಾಗಿದೆಯೇ ಎಂಬ ಮಾಹಿತಿ ಸಿಗಲಿದೆ. ಅಥವಾ ಸಮಿತಿಯು ಇನ್ನಷ್ಟು ಕಾಲಾವಕಾಶ ಕೇಳಲಿದೆಯೇ ಎನ್ನುವ ಮಾಹಿತಿ ಕೂಡ ಇನ್ನಷ್ಟೇ ಸಿಗಬೇಕಿದೆ.

ಲೋಕಸಭೆ ಚುನಾವಣೆಗೆ ಇನ್ನೆರೆಡು ಹಂತ ಬಾಕಿ ಇರುವ ಸಮಯದಲ್ಲಿ ಅಯೋಧ್ಯೆ ಕುರಿತ ವಿಚಾರಣೆ ಮಹತ್ವ ಪಡೆದಿದೆ.

ಏತನ್ಮಧ್ಯೆ ರಾಹುಲ್ ಗಾಂಧಿ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಹಾಗೂ ರಫೇಲ್ ಯುದ್ಧ ವಿಮಾನ ಖರೀದಿ ತೀರ್ಪಿನ ಮರುಪರಿಶೀಲನಾ ಅರ್ಜಿಯನ್ನು ಕೂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಇಂದು ವಿಚಾರಣಗೆ ತೆಗೆದುಕೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+