ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂದಿದೆ ಅಗ್ಗದ ಕುಡಿಯುವ ನೀರಿನ ಬಾಟಲಿ 'ಸೇನಾ ಜಲ್'

By Manjunatha
|
Google Oneindia Kannada News

ನವ ದೆಹಲಿ, ಜನವರಿ 23: ಕುಡಿಯಲು ನೀರು ಬೇಕೆಂದಾಗ ನೀವು ಕೇಳುವುದು ಬಿಸ್ಲೆರಿ ಕೊಡಿ ಎಂತಲೋ ಅಥವಾ ಇನ್ನಾವುದೋ ದುಬಾರಿ ಬ್ರಾಂಡ್‌ನ ನೀರಿನ ಬಾಟಲಿಯನ್ನು, ಆದರೆ ಇನ್ನು ಮುಂದೆ ಕುಡಿಯುವ ನೀರಿಗೆ ಹೆಚ್ಚಿಗೆ ಹಣ ಕೊಡುವ ಅಗತ್ಯವಿಲ್ಲ. ಅಗ್ಗದ ಕುಡಿಯುವ ನೀರಿನ ಬಾಟಲಿ 'ಸೇನಾ ಜಲ್' ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಭಾರತೀಯ ಸೇನೆಯ ಅಂಗ ಸಂಸ್ಥೆಯಾದ ಎಡ್ಬ್ಲುಡ್ಬ್ಲುಎ (AWWA) ಸಂಸ್ಥೆಯು ಅಗ್ಗದ 'ಸೇನಾ ಜಲ್' ವಾಟರ್ ಬಾಟಲಿಗಳನ್ನು ಮಾರುಕಟ್ಟೆಗೆ ತಂದಿದೆ. ಇದರ ಬೆಲೆ ಕೇವಲ ರೂ 6 ಮತ್ತು 10 ರೂಪಾಯಿ ಮಾತ್ರ.

ಸೇನೆಯಲ್ಲಿ ಮಡಿದ ಸೈನಿಕರ ಮಡದಿಯರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಈ ಸಂಸ್ಥೆ ಕಡಿಮೆ ಬೆಲೆಯ ಸೇನಾ ಜಲ್ ತಯಾರಿಸುತ್ತಿದ್ದು, ನೀರಿನ ಸಂಸ್ಕರಣೆ, ಪ್ಯಾಕಿಂಗ್ ಎಲ್ಲವನ್ನೂ ಈ ಸಂಸ್ಥೆಯ ಸದಸ್ಯರೇ ಮಾಡುತ್ತಾರೆ.

AWWA released less priced water bottle

ಇದರಿಂದ ಗಳಿಸಿದ ಅಷ್ಟೂ ಹಣ ಮಡಿದ ಸೈನಿಕರ ಮಡದಿಯರ ಕಲ್ಯಾಣಕ್ಕೆ ಬಳಕೆಯಾಗುತ್ತದೆ ಮತ್ತು ಸೇನೆಗೆ ದೇಣಿಗೆಯಾಗಿ ಹೋಗುತ್ತದೆ. ಎಡ್ಬ್ಲುಡ್ಬ್ಲುಎ (AWWA) ಕೇವಲ ಕುಡಿಯುವ ನೀರನ್ನಷ್ಟೆ ಅಲ್ಲದೆ ಕಾಗದ ಮರುಬಳಕೆ, ಮೇಣದ ಬತ್ತಿ ತಯಾರಿಕೆ, ಹೊಲಿಗೆ, ಊಟ ತಯಾರಿಸಿ ಮಾರಾಟ, ಕರಕುಶಲವಸ್ತು ತಯಾರಿಕೆಯಂತಹ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ.

ಭಾರತೀಯ ಸೇನೆಯ ಅಂಗ ಸಂಸ್ಥೆಯಾದ ಎಡ್ಬ್ಲುಡ್ಬ್ಲುಎ (AWWA) ಯನ್ನು ನಡೆಸುತ್ತಿರುವುದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್‌. ಈ ಸಂಸ್ಥೆ ಭಾರತದ ದೊಡ್ಡ ಸ್ವಯಂ ಸೇವಕರ ಸಂಸ್ಥೆಗಳಲ್ಲಿ ಒಂದಾಗಿದ್ದು, ಯೋಧರ ಕುಟುಂಬಸ್ಥರ ಕೌಶಲ್ಯ ಅಭಿವೃದ್ಧಿ ಮತ್ತು ಸಬಲೀಕರಣ ಉದ್ದೇಶವನ್ನು ಹೊಂದಿದೆ. ಯೋಧರ ಪತ್ನಿಯರು ಸ್ವಾವಲಂಬಿಯಾಗಿ ಬದುಕಲು ಅವಕಾಶ ಕಲ್ಪಿಸಿಕೊಡುವುದು, ಅವರಿಗೆ ಆರ್ಥಿಕ ಸಹಾಯ ಮಾಡುವುದು ಈ ಸಂಸ್ಥೆಯ ಉದ್ದೇಶ.

ಈ ಉತ್ಪನ್ನಗಳ ಮಾರಾಟದಾರರಾಗಲು ಹಾಗೂ ಆ ಮೂಲಕ ಭಾರತೀಯ ಸೇನೆಗೆ ಸಹಾಯ ಮಾಡಲು ನವದೆಹಲಿಯ ರಕ್ಷಣಾ ಮುಖ್ಯ ಕಾರ್ಯಾಲಯವನ್ನು ಸಂಪರ್ಕಿಸಬಹುದು.

English summary
Indian Army's brother Organization AWWA (Army Wives Welfare Association ) released cheaper water bottles named 'Sena Jal'. this bottles only cost rs6 and rs 10. earned money will go into soldiers widow welfare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X