KSR Bengaluru: ಪಂಚಗಂಗಾ ಸೇರಿ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ

ಬೆಂಗಳೂರು: ಬೆಂಗಳೂರಿನ ಹೃದಯಭಾಗದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಯಾರ್ಡ್ ಮರುರೂಪಿಸುವಿಕೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ (South Western Railways) ವ್ಯಾಪ್ತಿಯ ಹಲವು ರೈಲುಗಳ ಸಂಚಾರಗಳಲ್ಲಿ 3 ದಿನ ಮಹತ್ವದ ಬದಲಾವಣೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವೆಲ್ಲ ಮಾರ್ಗದ ರೈಲುಗಳಲ್ಲಿ ಬದಲಾವಣೆ ಆಗಿದೆ, ಸಮಯ, ವೇಳಾಪಟ್ಟಿ ಮಾಹಿತಿ ಇಲ್ಲಿದೆ.

ಜುಲೈ 31 ರಿಂದ ಆಗಸ್ಟ್ 2 ರವರೆಗೆ (ಮೂರು ದಿನ) ಕೆಎಸ್‌ಆರ್ ರೈಲು ನಿಲ್ದಾಣಗಳಿಗೆ ಬರುವ ರೈಲುಗಳಿಗೆ ಬ್ರೇಕ್ ಬಿದ್ದಿದೆ. ಈ ನಿರ್ಬಂಧಿತ ಅವಧಿಯಲ್ಲಿ, ಕೆಲವು ರೈಲುಗಳ ಮಾರ್ಗಗಳನ್ನು ಬದಲಿಸಲಾಗಿದ್ದರೆ, ಇನ್ನು ಕೆಲವು ರೈಲುಗಳನ್ನು ಅಲ್ಪ ದೂರಕ್ಕೆ ಸೀಮಿತಗೊಳಿಸಿ, ಭಾಗಶಃ ರದ್ದುಗೊಳಿಸಲಾಗಿದೆ.

Rail Services Affected

ಕಾರವಾರ-ಕೆಎಸ್‌ಆರ್ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ರೈಲು (16596) ಜುಲೈ 31 ರಿಂದ ಆಗಸ್ಟ್ 2 ರವರೆಗೆ (ಮೂರು ದಿನ) ಯಶವಂತಪುರದಲ್ಲಿಯೇ ತನ್ನ ಸಂಚಾರ ಕೊನೆಗೊಳಿಸುತ್ತದೆ. ಈ ಅವಧಿಯಲ್ಲಿ, ಯಶವಂತಪುರ ಮತ್ತು ಕೆಎಸ್‌ಆರ್ ಬೆಂಗಳೂರು ನಡುವಿನ ಇದರ ಸೇವೆ ಸಂಪೂರ್ಣವಾಗಿ ರದ್ದಾಗಲಿದೆ.

BBC: ತುಮಕೂರು-ಬಳ್ಳಾರಿ ರಸ್ತೆ ಯೋಜನೆ ಅಪ್ಡೇಟ್: ಬಿಡ್ ಸಲ್ಲಿಸಿದ 2 ಕಂಪನಿಗಳು, ಶೀಘ್ರವೇ ಅಂತಿಮ
BBC: ತುಮಕೂರು-ಬಳ್ಳಾರಿ ರಸ್ತೆ ಯೋಜನೆ ಅಪ್ಡೇಟ್: ಬಿಡ್ ಸಲ್ಲಿಸಿದ 2 ಕಂಪನಿಗಳು, ಶೀಘ್ರವೇ ಅಂತಿಮ

ಯಶವಂತಪುರ ನಿಲ್ದಾಣದಿಂದ ರೈಲುಗಳ ಸಂಚಾರ

ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿ ಪ್ರಿ-ಎನ್‌ಐ (ನೋನ್‌-ಇಂಟರ್‌ಲಾಕಿಂಗ್) ಮತ್ತು ಎನ್‌ಐ ಬ್ಲಾಕ್‌ಗಳಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಕೆಎಸ್‌ಆರ್ ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲು (16595) ಆಗಸ್ಟ್ 1 ರಿಂದ ಆಗಸ್ಟ್ 3 ರವರೆಗೆ (ಮೂರು ದಿನ) ಯಶವಂತಪುರದಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಈ ರೈಲು ಕೆಎಸ್‌ಆರ್ ಬೆಂಗಳೂರು ಮತ್ತು ಯಶವಂತಪುರ ನಡುವಿನ ತನ್ನ ಸಂಚಾರ ರದ್ದಾಗಿದೆ ಎಂದು ರೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿಲುಗಡೆ ರದ್ದು, ಮಾರ್ಗ ಬದಲಾವಣೆ

ಮುರಡೇಶ್ವರ -ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (ಎಸ್‌ಎಂವಿಟಿಬಿ)-ಮುರ್ಡೇಶ್ವರ ಎಕ್ಸ್‌ಪ್ರೆಸ್‌ಗಳ ರೈಲುಗಳ ಸಂಚಾರ ಮಾರ್ಗದಲ್ಲಿಯೂ ಒಂದಷ್ಟು ಬದಲಾವಣೆ ಆಗಿದೆ. ಪ್ರಯಾಣಿಕರು ಈ ಬದಲಾವಣೆ ಗಮನಿಸಿ ಪ್ರಯಾಣ ಪ್ಲ್ಯಾನ್ ಮಾಡಿಕೊಳ್ಳಬೇಕಿದೆ.

ಮುರಡೇಶ್ವರ-ಎಸ್‌ಎಂವಿಟಿಬಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (16586) ಜುಲೈ 16 ಮತ್ತು 17 ರಂದು (ಎರಡು ದಿನ) ಹಾಗೂ ಎಸ್‌ಎಂವಿಟಿಬಿ ಬೆಂಗಳೂರು-ಮುರಡೇಶ್ವರ ಎಕ್ಸ್‌ಪ್ರೆಸ್ ಜುಲೈ 17 ರಿಂದ ಜುಲೈ 19 ರವರೆಗೆ (ಮೂರು ದಿನ) ಯಶವಂತಪುರ-ಹೆಬ್ಬಾಳ-ಬಾಣಸವಾಡಿ ಮೂಲಕ ಚಲಿಸುತ್ತದೆ. ಈ ರೈಲುಗಳು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಿಲುಗಡೆಯನ್ನು ರದ್ದುಪಡಿಸಲಾಗಿದೆ.

ರೈಲು ಸಂಚಾರ 60 ನಿಮಿಷವಿಳಂಬ

ಇನ್ನೂ ಆಗಸ್ಟ್ 3 ರಂದು ಮುರಡೇಶ್ವರದಿಂದ ಹೊರಡುವ ಮುರಡೇಶ್ವರ-ಎಸ್‌ಎಂವಿಟಿಬಿ ಬೆಂಗಳೂರು ಎಕ್ಸ್‌ಪ್ರೆಸ್‌ನ ರೈಲು (16586) ಪ್ರಯಾಣದ ಸಮಯವನ್ನು 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. ಅಂದರೆ ಈ ರೈಲು ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ನಿಲ್ದಾಣದಿಂದ ಹೊರಡುತ್ತದೆ ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+