Lady Super Police: ಮಧ್ಯರಾತ್ರಿಯಲ್ಲಿ ರಹಸ್ಯ ಕಾರ್ಯಾಚರಣೆ ನಡೆಸಿದ ಲೇಡಿ ಸೂಪರ್ ಪೊಲೀಸ್: 3 ಗಂಟೆಯಲ್ಲಿ 40 ಕಾಮುಕರು ಬಲೆಗೆ

Lady Super Police: ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಹೈದರಾಬಾದ್‌ನಲ್ಲಿ ಮಹಿಳಾ ಪೊಲೀಸ್‌ವೊಬ್ಬರು ಮಧ್ಯರಾತ್ರಿಯಲ್ಲಿ ಮಾಡಿರುವ ರಹಸ್ಯ ಕಾರ್ಯಾ ಚರಣೆಯು ಮಾಡಿದ್ದಾರೆ. ಈ ರಹಸ್ಯ ಕಾರ್ಯಾಚರಣೆಯ ವಿಡಿಯೋ ವೈರಲ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬೀದಿಗಳಲ್ಲಿ ರಾತ್ರಿ ಸಂದರ್ಭದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತ ಎನ್ನುವ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾಡಿರುವ ಈ ಸ್ಟ್ರಿಂಗ್ ಆಪರೇಷನ್‌ ಇದೀಗ ದೇಶದಾದ್ಯಂತ ಗಮನ ಸೆಳೆದಿದೆ.

ಬೆಂಗಳೂರು - ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ರಾತ್ರಿ ಸಂದರ್ಭದಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಹೆಚ್ಚು ಚರ್ಚೆಗಳು ಆಗುತ್ತಲ್ಲೇ ಇರುತ್ತವೆ. ಇದೀಗ ಹೈದರಾಬಾದ್‌ನ ಪ್ರಮುಖ ಬೀದಿಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಪರಿಶೀಲಿಸುವ ಉದ್ದೇಶದಿಂದ ತಡರಾತ್ರಿಯ ರಹಸ್ಯ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. ಮಲ್ಕಾಜ್‌ಗಿರಿ ಪೊಲೀಸ್ ಕಮಿಷನರ್ ವಿ ಸುಮತಿ ಅವರು ಮಧ್ಯರಾತ್ರಿ 12.30 ರಿಂದ 3.30 ರ ನಡುವೆ ದಿಲ್‌ಸುಖ್‌ನಗರದ ಬಸ್ ನಿಲ್ದಾಣದಲ್ಲಿ ಸಾಮಾನ್ಯ ಪ್ರಯಾಣಿಕರಂತೆ ನಿಂತು ಈ ಸ್ಟ್ರಿಂಗ್ ಆಪರೇಷನ್‌ ನಡೆಸಿದ್ದಾರೆ.

Lady Super Police

ಹೈದರಾಬಾದ್‌ನಂತಹ ಪ್ರಮುಖ ನಗರದಲ್ಲಿ ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿ ಇರಿಸಿಕೊಂಡು ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ. ತಡರಾತ್ರಿ ಸಮಯದಲ್ಲಿ ಪ್ರಯಾಣಿಸುವ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸುವುದು ಹಾಗೂ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಈ ಸ್ಟ್ರಿಂಗ್‌ ಆಪರೇಷನ್‌ನ ಮುಖ್ಯ ಉದ್ದೇಶವಾಗಿದೆ. ತಡರಾತ್ರಿ ಐಪಿಎಸ್ ಅಧಿಕಾರಿ ಸಾಮಾನ್ಯ ಮಹಿಳಾ ಪ್ರಯಾಣಿಕರಂತೆ ತಡರಾತ್ರಿ ನಿಂತಿದ್ದಾರೆ.

ಮಹಿಳಾ ಪೊಲೀಸ್ ಎಂದು ತಿಳಿಯದೆ 40 ಕಾಮುಕರಿಂದ ಆಹ್ವಾನ

ಇನ್ನು ಮಹಿಳಾ ಪೊಲೀಸ್ ಎಂದು ತಿಳಿಯದೆ 40 ಕಾಮುಕರು ಮಹಿಳಾ ಪೊಲೀಸರನ್ನು ಆಹ್ವಾನಿಸಿದ್ದಾರೆ. ಮೂರು ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯ ಸಮಯದಲ್ಲಿ ಸುಮಾರು 40 ಪುರುಷರು ಆಕೆಯ ಬಳಿಗೆ ಬಂದಿದ್ದಾರೆ. ಅವರಲ್ಲಿ ಹಲವರು ಮದ್ಯ ಅಥವಾ ಗಾಂಜಾ ಸೇವಿಸಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಪಿನಲ್ಲಿ ಯುವಕರು ಇದ್ದರು, ಕೆಲವರು ವಿದ್ಯಾರ್ಥಿಗಳು ಮತ್ತು ಖಾಸಗಿ ಉದ್ಯೋಗಿಗಳು ಸಹ ಇದ್ದರು ಎಂದು ಗುರುತಿಸಲಾಗಿದೆ.

ಕಾರ್ಯಾಚರಣೆಯ ಭಾಗವಾಗಿ ಈಗಾಗಲೇ ಸಮೀಪದಲ್ಲಿ ಠಿಕಾಣಿ ಹೂಡಿದ್ದ ಪೊಲೀಸರು ಮಧ್ಯಪ್ರವೇಶಿಸಿ, ಅನುಮಾನಾಸ್ಪದ ಅಥವಾ ಅನುಚಿತ ರೀತಿಯಲ್ಲಿ ವರ್ತಿಸುತ್ತಿದ ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಬಸ್ ನಿಲ್ದಾಣದ ಸುತ್ತಮುತ್ತ ಕಿರುಕುಳ ಅಥವಾ ಗಲಾಟೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾತ್ರಿ ಗಸ್ತು ತಿರುಗುವಿಕೆ ಎಷ್ಟು ಪರಿಣಾಮಕಾ ಆಗಿದೆ ಎಂದು ತಿಳಿದುಕೊಳ್ಳಲು ಹಾಗೂ ತಡರಾತ್ರಿ ಸಮಯದಲ್ಲಿ ಮಹಿಳೆಯರು ಒಂಟಿಯಾಗಿ ಪ್ರಯಾಣಿಸುವ ಅಪಾಯಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ಪೊಲೀಸರು ಈ ರಹಸ್ಯ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+