ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಲಸಿಕೆ 3ನೇ ಅಭಿಯಾನದ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ: ಹರ್ಷವರ್ಧನ್

|
Google Oneindia Kannada News

ನವದೆಹಲಿ, ಏಪ್ರಿಲ್ 26: ದೇಶಾದ್ಯಂತ ಕೋವಿಡ್ ಲಸಿಕೆ 3ನೇ ಅಭಿಯಾನ ಮೇ 1 ರಿಂದ ಶುರುವಾಗಲಿದ್ದು, ಈ ಅಭಿಯಾನದ ಬಗ್ಗೆ ಕೆಲವರು ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ಲಸಿಕೆ ಅಭಿಯಾನದ ಪ್ರಮುಖ ಹಂತಗಳ ಬಗ್ಗೆ ಹೆಚ್ಚಿನ ತಪ್ಪು ಮಾಹಿತಿ ಹರಡಲು ಪ್ರಯತ್ನಿಸಲಾಗುತ್ತಿದೆ. ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ ಹಳಿತಪ್ಪಿಸಲು ಪ್ರಯತ್ನಿಸುತ್ತಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳನ್ನು ಪತ್ತೆ ಮಾಡಲು ಬಯಸುತ್ತೇನೆ ಎಂದರು.

ಏಪ್ರಿಲ್ 26; ಭಾರತದಲ್ಲಿ ಮೂರೂವರೆ ಲಕ್ಷ ಮೀರಿದ ಕೊರೊನಾ ಪ್ರಕರಣಏಪ್ರಿಲ್ 26; ಭಾರತದಲ್ಲಿ ಮೂರೂವರೆ ಲಕ್ಷ ಮೀರಿದ ಕೊರೊನಾ ಪ್ರಕರಣ

ಯಾವುದೇ ಯುದ್ಧದಲ್ಲಾದರೂ ಸಮಯವು ಅತ್ಯಂತ ಮುಖ್ಯವಾಗಿರುತ್ತದೆ. ಭೀತಿಗೊಳಿಸುವ ರೋಗವು ಸುನಾಮಿಯಂತೆ ಹರಡುತ್ತಿರುವಾಗ , ನಿಯಂತ್ರಣಗಳನ್ನು ಸರಾಗಗೊಳಿಸುವ ಮತ್ತು ರಾಜ್ಯ ಸರ್ಕಾರಗಳಿಗೆ ಹಾಗೂ ಖಾಸಗಿ ವಲಯಕ್ಕೆ ಮುಕ್ತ ಅವಕಾಶ ನೀಡುವುದು ನಿರ್ಣಾಯಕವಾಗಿತ್ತು.

Attempt Being Made To Spread Misinformation On Phase 3 Of Covid-19 Vaccination Drive: Harsh Vardhan

ಮೇ 2021ರಿಂದ ಮೂರನೇ ಹಂತದ ಲಸಿಕಾ ಅಭಿಯಾನ ಶುರುವಾಗುತ್ತದೆ, ಲಸಿಕೆ ಉಚಿತ ವಿತರಣೆಯನ್ನು ಸರ್ಕಾರ ಮುಂದುವರೆಸುತ್ತದೆ. ಈ ಮೊದಲಿನಂತೆಯೇ, ಕೇಂದ್ರವು ತನ್ನ ಶೇ.50 ಕೋಟಾದಿಂದ ಲಸಿಕೆ ಪ್ರಮಾಣವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡಲಿದೆ. ಈ ಲಸಿಕೆಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿರ್ವಹಿಸುತ್ತಲೇ ಇರುತ್ತವೆ ಎಂದು ಹೇಳಿದರು.

ಆರೋಗ್ಯವು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂಬುದು ಸತ್ಯ, ಅಲ್ಲಿ ಕೇಂದ್ರವು ಮೂಲಭೂತವಾಗಿ ರಾಜ್ಯಗಳನ್ನು ಸಮನ್ವಯಗೊಳಿಸುತ್ತದೆ ಮತ್ತು ಸುಗಮಗೊಳಿಸುತ್ತದೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,52,991 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಒಂದೇ ದಿನ 2812 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 2,19,272 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ಹೆಲ್ತ್‌ ಬುಲೆಟಿನ್ ಬಿಡುಗಡೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ ದಾಖಲಾದ ಈ ಪ್ರಕರಣಗಳೊಂದಿಗೆ ದೇಶದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 1,73,13,163ಕ್ಕೆ ಏರಿಕೆಯಾಗಿದೆ.

English summary
Addressing concerns raised by some quarters on the recently announced ‘Liberalized and Accelerated Phase III Strategy of Covid-19 Vaccination’, Union Health Minister Dr Harsh Vardhan on Sunday took a swipe at “certain political leaders” from the Opposition who are indulging in “needless politics” and spreading “misinformation”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X