'ಮೋದಿ, ಮೋದಿ ಎಂದು ಕೂಗಿದರೆ ಹೊಟ್ಟೆ ತುಂಬಲ್ಲ'
ದೆಹಲಿ ಪಾಲಿಕೆ ಚುನಾವಣೆ ಸಮಾವೇಶದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ 'ಮೋದಿ ಮೋದಿ' ಎಂದು ಘೋಷಣೆ ಕೇಳಿ ಬಂದಿದೆ. ಅರವಿಂದ್ ಅವರು ಇದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದಾರೆ
ನವದೆಹಲಿ, ಏಪ್ರಿಲ್ 02: ದೆಹಲಿ ಪಾಲಿಕೆ ಚುನಾವಣೆ ಸಮಾವೇಶದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ 'ಮೋದಿ ಮೋದಿ' ಎಂದು ಘೋಷಣೆ ಕೇಳಿ ಬಂದಿದೆ. ಅರವಿಂದ್ ಅವರು ಇದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದಾರೆ.
'ಮೋದಿ, ಮೋದಿ' ಎಂದರೆ ಹೊಟ್ಟೆ ತುಂಬುವುದಿಲ್ಲ, ವಿದ್ಯುತ್ ಬಿಲ್ ಕಡಿಮೆಯಾಗುವುದಿಲ್ಲ, ಮನೆ ತೆರಿಗೆ ಮಾಫಿಯಾಗುವುದಿಲ್ಲ, ಆಗುತ್ತದೆ ಎಂದಾದರೆ ನಾನು ಕೂಡಾ ಮೋದಿ, ಮೋದಿ ಎಂದು ಕೂಗುತ್ತೇನೆ ಎಂದು ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ.

ದೆಹಲಿ ಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ದೆಹಲಿಯ ಗೌತಮ್ ವಿಹಾರ್ ಚೌಕ್ ನಲ್ಲಿ ನಡೆದ ಸಮಾವೇಶದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಯಾರೋ ಕಾರ್ಯಕರ್ತರು 'ಮೋದಿ ಮೋದಿ' ಎಂದು ಕೂಗಿದ್ದಾರೆ.
ವೇದಿಕೆ ಏರಿದ ಕೇಜ್ರಿವಾಲ್ ಅವರು ತಕ್ಷಣವೇ ಮೇಲ್ಕಂಡಂತೆ ಪ್ರತಿಕ್ರಿಯಿಸಿದ್ದಾರೆ. ಶನಿವಾರದಂದು ಚುನಾವಣಾ ಆಯಕ್ತ ನಾಸೀಮ್ ಜೈದಿ ಅವರನ್ನು ಭೇಟಿಯಾಗಿ ಇವಿಎಂ ಅಕ್ರಮ ಕುರಿತು ಚರ್ಚಿಸಿದ್ದರು. ಏಪ್ರಿಲ್ 23 ರಂದು ದೆಹಲಿ ಪಾಲಿಕೆ ಚುನಾವಣೆ ನಡೆಯಲಿದೆ.












Click it and Unblock the Notifications