ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಡಾಖ್‌ಗೆ ಭೇಟಿ ಯೋಧರಿಗೆ ಮನೋಸ್ಥೈರ್ಯ ತುಂಬಿದ ಸೇನಾ ಮುಖ್ಯಸ್ಥ

|
Google Oneindia Kannada News

ಲಡಾಖ್, ಜೂನ್ 24: ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಭಾರತ-ಚೀನಾ ಸೈನಿಕರ ಹಿಂಸಾತ್ಮಕ ಘಟನೆ ಬಳಿಕ ಲಡಾಖ್‌ಗೆ ಭಾರತೀಯ ಸೇನೆ ಮುಖ್ಯಸ್ಥ ಎಂಎಂ ನರವಣೆ ಭೇಟಿ ನೀಡಿ ಯೋಧರನ್ನು ಶ್ಲಾಘಿಸಿದ್ದಾರೆ.

ಪೂರ್ವ ಲಡಾಖ್‌ನ ಮುಂಚೂಣಿ ನೆಲೆಗಳಿಗೆ ಬುಧವಾರ ಬೆಳಿಗ್ಗೆ ಭೇಟಿ ನೀಡಿದ ನರವಣೆ, ನೆಲದ ಕಾರ್ಯಾಚರಣೆಯ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಲಡಾಖ್ ಘರ್ಷಣೆ: ಚೀನಾ ಸೈನಿಕರ ಸಾವಿನ ರಹಸ್ಯ ಬಿಚ್ಚಿಟ್ಟ US ಗುಪ್ತಚರ ವರದಿಲಡಾಖ್ ಘರ್ಷಣೆ: ಚೀನಾ ಸೈನಿಕರ ಸಾವಿನ ರಹಸ್ಯ ಬಿಚ್ಚಿಟ್ಟ US ಗುಪ್ತಚರ ವರದಿ

'ಸೈನಿಕರ ಮನೋಸ್ಥೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಸ್ಥರು, ಮುಂದಿನ ದಿನಗಳಲ್ಲೂ ಇದೇ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಕೆಲಸ ಮಾಡುವುದನ್ನು ಮುಂದುವರೆಸುವಂತೆ ಸೂಚಿಸಿದರು' ಎಂದು ಎಎನ್ಐ ಟ್ವೀಟ್ ಮಾಡಿ ತಿಳಿಸಿದೆ.

ಅಂದ್ಹಾಗೆ, ಸೇನಾ ಮುಖ್ಯಸ್ಥ ಎಂಎಂ ನರವಣೆ ಎರಡು ದಿನಗಳ ಕಾಲ ಲಡಾಖ್ ಪ್ರವಾಸದಲ್ಲಿದ್ದಾರೆ. ಮಂಗಳವಾರ ಲೇಹ್‌ಗೆ ಭೇಟಿ ನೀಡಿದ್ದ ನವರಣೆ, ಲಡಾಖ್ ಸಂಸದರ ಜೊತೆ ಭದ್ರತೆ ಕುರಿತು ಚರ್ಚಿಸಿದ್ದರು.

Army Chief General MM Naravane visited forward areas in Eastern Ladakh

ಇದಕ್ಕೂ ಮುಂಚೆ ಚೀನಾ ಜೊತೆಗಿನ ಘರ್ಷಣೆಯಲ್ಲಿ ಗಾಯಗೊಂಡಿದ್ದ ಯೋಧರು ಚಿಕಿತ್ಸೆ ಪಡೆಯುತ್ತಿರುವ ಸೇನೆ ಆಸ್ಪತ್ರೆಗೆ ಭೇಟಿ ನೀಡಿದ ನರವಣೆ, ಗಾಯಗೊಂಡಿದ್ದ ಸೈನಿಕರ ಆರೋಗ್ಯ ವಿಚಾರಿಸಿದ್ದರು.

ಇನ್ನು ಭಾರತ ಮತ್ತು ಚೀನಾ ಗಡಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಸಂಬಂಧಪಟ್ಟಂತೆ ಉಭಯ ರಾಷ್ಟ್ರಗಳ ಸೇನೆ ಕಮಾಂಡರ್‌ಗಳ ನಡುವೆ ಸುಮಾರು 11 ಗಂಟೆವರೆಗೂ ಚರ್ಚೆ ಮಾತುಕತೆ ನಡೆದಿತ್ತು. ಈ ಮಾತುಕತೆ ಬಳಿಕ, ಗಡಿಯಲ್ಲಿ ಸೇನೆಯನ್ನು ಹಿಂದಕ್ಕೆ ತೆಗೆದುಕೊಳ್ಳುವ ನಿರ್ಧಾರ ಮಾಡಿರುವುದಾಗಿ ವರದಿಯಾಗಿತ್ತು.

English summary
Army Chief General MM Naravane visited forward areas in Eastern Ladakh & reviewed the operational situation on the ground.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X