ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನಾ ಮುಖ್ಯಸ್ಥ ಬಿಪಿನ್ ರಾವತ್‌ಗೆ ಪರಮ ವಿಶಿಷ್ಟ ಸೇವಾ ಪದಕ

|
Google Oneindia Kannada News

ನವದೆಹಲಿ, ಮಾರ್ಚ್‌ 14: 2018-19ನೇ ಸಾಲಿನ ಸೇನಾ ಪದಕ ನೀಡಲಾಗಿದ್ದು, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಇಂದು ಪರಮ ವಿಶಿಷ್ಟ ಸೇವಾ ಪದಕವನ್ನು ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರು ಪ್ರಧಾನ ಮಾಡಿದರು.

ಪರಂ ವಿಶಿಷ್ಟ ಸೇವಾ ಪದಕವು ಭಾರತೀಯ ಸೇನೆಗೆ ನೀಡಲಾಗುವ ಅತ್ಯುತ್ತಮ ಗೌರವಾಗಿದ್ದು, ಈ ಗೌರವವು ಬಿಪ್ ರಾವತ್ ಅವರಿಗೆ ಸಂದಾಯವಾಗಿದೆ. ರಾಷ್ಟ್ರಪತಿ ಭವನದಲ್ಲಿ ಇಂದು ರಮಾನಾಥ ಕೋವಿಂದ್ ಅವರು ಬಿಪಿನ್ ರಾವತ್ ಅವರಿಗೆ ಪದಕ ಪ್ರಧಾನ ಮಾಡಿದರು.

56 ಮಂದಿ ಗಣ್ಯರಿಗೆ ರಾಷ್ಟ್ರಪತಿ ಕೋವಿಂದ್ ಅವರಿಂದ ಪದ್ಮ ಪ್ರಶಸ್ತಿ ಪ್ರದಾನ56 ಮಂದಿ ಗಣ್ಯರಿಗೆ ರಾಷ್ಟ್ರಪತಿ ಕೋವಿಂದ್ ಅವರಿಂದ ಪದ್ಮ ಪ್ರಶಸ್ತಿ ಪ್ರದಾನ

ಬಿಪಿನ್ ರಾವತ್ ಅವರ ಜೊತೆಗೆ ಇನ್ನೂ ಹಲವು ಸೇನಾ ಅಧಿಕಾರಿಗಳು, ಸೈನಿಕರುಗಳಿಗೆ ಸೇನಾ ಪದಕಗಳನ್ನು ವಿತರಣೆ ಮಾಡಲಾಗಿದೆ. ಕುಪ್ವಾರದಲ್ಲಿ ನಡೆದ ಉಗ್ರರ ವಿರುದ್ಧದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರ ವಿರುದ್ಧ ಹೋರಾಡಿದ 20 ಜಾಟ್ ರೆಜಿಮೆಂಟ್ ನ ಮೇಜರ್ ತುಷಾರ್ ಗೌಬಾ ಅವರಿಗೆ ಕೀರ್ತಿ ಚಕ್ರ ಪದಕ ಘೋಷಣೆ ಮಾಡಲಾಗಿದೆ.

Army Chief General Bipin Rawat conferred with Param Vishisht Seva Medal

ಸಿಆರ್ ಪಿಎಫ್ ಜವಾನ್ ರಾಜೇಂದ್ರ ಸಿಂಗ್ ನಾಯ್ನ್, ಸೆಪೋಯ್ ವ್ರಹ್ಮ ಪಾಲ್ ಸಿಂಗ್, ರವೀಂದ್ರ ಬಬ್ಬನ್ ಧನವಾಡೆ ಅವರಿಗೆ ಮರಣೋತ್ತರ ಕೀರ್ತಿ ಚಕ್ರ ಪದಕ ಘೋಷಣೆ ಮಾಡಲಾಗಿದೆ. 12 ಅಧಿಕಾರಿಗಳು ಮತ್ತು ಸೈನಿಕರು ಮತ್ತು ಸಿಆರ್ ಪಿಎಫ್ ಹಲವು ಸೈನಿಕರು ಶೌರ್ಯ ಚಕ್ರ ಪದಕಕ್ಕೆ ಭಾಜನರಾಗಿದ್ದಾರೆ.

English summary
Army Chief General Bipin Rawat conferred with Param Vishisht Seva Medal by President Ram Nath Kovind, at Rashtrapati Bhawan, today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X