• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರ್ಮ್ಡ್ ಫೋರ್ಸಸ್ ಫ್ಲ್ಯಾಗ್‌ ಡೇ: ಯೋಧರಿಗಾಗಿ ನೀವೇನು ಮಾಡ್ತೀರಾ?

|

ನವದೆಹಲಿ, ಡಿಸೆಂಬರ್ 7: ದೇಶವನ್ನು ಕಾಪಾಡಲು ಹೋರಾಡಿ ಹುತಾತ್ಮರಾದ ಹಾಗೂ ದೇಶದ ಗಡಿಯಲ್ಲಿ ನಿಂತು ದೇಶಕ್ಕಾಗಿ ಹೋರಾಡುತ್ತಿರುವ ಯೋಧರ ನೆನಪಿಗಾಗಿ' ಆರ್ಮ್ಡ್ ಫೋರ್ಸಸ್ ಫ್ಲ್ಯಾಗ್‌ ಡೇ'ಯನ್ನು ಡಿಸೆಂಬರ್ 7ರಂದು ಆಚರಿಸಲಾಗುತ್ತಿದೆ.

ಮೊದಲು 1949ರಲ್ಲಿ ಈ ದಿನವನ್ನು ಆಚರಿಸಲಾಯಿತು. ಹ್ಯಾಷ್ ಟ್ಯಾಗ್ ಆರ್ಮ್ಡ್ ಫೋರ್ಸ್ ಫ್ಲ್ಯಾಗ್ ಡೇ 2018 ಎಂದು ಬರೆಯುವ ಮೂಲಕ ಟ್ವಿಟ್ಟರ್‌ನಲ್ಲಿ ಈ ದಿನದ ಕುರಿತು ಅರಿವು ಮೂಡಿಸಲಾಗುತ್ತಿದೆ.

ರಜೆಯ ಮೇಲೆ ಮನೆಗೆ ಬರುತ್ತಿದ್ದ ಕಾರವಾರ ಮೂಲದ ಯೋಧ ಅನುಮಾನಾಸ್ಪದ ಸಾವು!

ಜೊತೆಗೆ ಯೋಧರಿಗೆ ಸಹಾಯಾರ್ಥವಾಗಿ ಈ ದಿನದ ಅಂಗವಾಗಿ ಆರ್ಮಡ್ ಫೋರ್ಸ್ ಫ್ಲ್ಯಾಗ್ ಡೇ ಫಂಡ್ ನ್ನು ಕೂಡ ಪಡೆಯಲಾಗುತ್ತಿದೆ.

ತೆರೆಯ ಮೇಲೆ ಬರಲಿದೆ ಉರಿ ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್!

ಈ ಮೊದಲು ಆರ್ಮ್ಡ್ ಫೋರ್ಸ್ ಫ್ಲ್ಯಾಗ್ ಡೇ ಬಗ್ಗೆ ನಮಗೆ ತಿಳಿದಿರಲಿಲ್ಲ ಆಚರಣೆಯನ್ನೂ ಮಾಡುತ್ತಿರಲಿಲ್ಲ, ಆದರೆ ತಿಳಿದ ಮೇಲೆ ಉತ್ಸಾಹದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಆರ್ಮ್ಡ್ ಫೋರ್ಸ್ ಫ್ಲ್ಯಾಗ್‌ನ್ನು ತೊಟ್ಟು ಆರ್ಮ್ಡ್ ಫೋರ್ಸ್ ಫ್ಲ್ಯಾಗ್‌ ಡೇ ಫಂಡ್‌ಗೆ ಹಣವನ್ನು ನೀಡಿ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮನವಿ ಮಾಡಿದ್ದಾರೆ.

ಯೋಧರಿಗೆ ಫಂಡ್ ನೀಡಲು ನೀವೇನು ಮಾಡಬೇಕು

ಯೋಧರಿಗೆ ಫಂಡ್ ನೀಡಲು ನೀವೇನು ಮಾಡಬೇಕು

ವಾಯುಪಡೆ, ನೌಕಾಪಡೆ, ಸೇನೆ ಇವು ಮೂರು ಸೇನೆಗಳ ಯೋಧರು ನಮ್ಮ ದೇಶವನ್ನು ಕಾಪಾಡಲು ಎಂದಿಗೂ ಸಿದ್ಧರಿರುತ್ತಾರೆ, ಹೋರಾಟ ಮಾಡುತ್ತಿರುತ್ತಾರೆ. ಈ ಸೈನಿಕರಿಗೆ ನೀವು ಸಹಾಯ ಮಾಡಬಯಸುವುದಾದರೆ Paytm on 8800462175 ಪೇಟಿಎಂ ಮಾಡಿ ಹಣ ನೀಡಬಹುದಾಗಿದೆ. ವರ್ಷಪೂರ್ತಿ ನಮಗಾಗಿ ದುಡಿಯುವ ಯೋಧರಿಗೆ ನಿಮ್ಮ ಕೈಲಾದಷ್ಟು ಧನಸಹಾಯವನ್ನು ಮಾಡಬಹುದು. ಅಥವಾ ksb.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.

ಆರ್ಮಡ್ ಫೋರ್ಸಸ್ ಫ್ಲ್ಯಾಗ್ ಹೇಗಿರುತ್ತೆ

ಆರ್ಮಡ್ ಫೋರ್ಸಸ್ ಫ್ಲ್ಯಾಗ್ ಹೇಗಿರುತ್ತೆ

ಆರ್ಮಡ್ ಫೋರ್ಸಸ್ ಫ್ಲ್ಯಾಗ್ ಮೂರು ಬಣ್ಣಗಳನ್ನು ಒಳಗೊಂಡಿರುತ್ತದೆ. ಕೆಂಪು, ನೆವಿ ಬ್ಲ್ಯೂ ಹಾಗೂ ಲೈಟ್ ಬ್ಲ್ಯೂ ಒಳಗೊಂಡಿರುತ್ತದೆ ಪ್ರತಿಯೊಂದು ಬಣ್ಣವು ಮೂರು ಸೇನೆಯ ಪರಿಚಯವನ್ನು ಮಾಡಿಕೊಡುತ್ತದೆ. ಭಾರತೀಯ ಸೇನೆ, ಭಾರತೀಯ ನೌಕಾಪಡೆ, ಭಾರತೀಯ ವಾಯುಪಡೆ ಈ ಮೂರು ಸೇನೆಗಳನ್ನು ನೆಪಿಸುತ್ತದೆ.

ಆರ್ಮಡ್ ಫೋರ್ಸ್ ಫ್ಲ್ಯಾಗ್ ಫಂಡ್ ಏಕೆ ನೀಡಬೇಕು?

ಆರ್ಮಡ್ ಫೋರ್ಸ್ ಫ್ಲ್ಯಾಗ್ ಫಂಡ್ ಏಕೆ ನೀಡಬೇಕು?

ಆರ್ಮಡ್ ಫೋರ್ಸ್ ಫ್ಲ್ಯಾಗ್ ಫಂಡ್ ನ್ನು ಯಾಕೆ ನೀಡಬೇಕು ಎಂದು ನೀವು ಆಲೋಚಿಸುತ್ತಿರಬಹುದು, ಪ್ರತಿ ವರ್ಷ 60 ಸಾವಿರ ಯೋಧರು ನಿವೃತ್ತರಾಗುತ್ತಾರೆ, ನೀವು ನೀಡಿರುವ ಹಣ ನಿವೃತ್ತ ಯೋಧರು, ಹುತಾತ್ಮರ ಹೆಂಡತಿಯ ಅವರ ಕುಟುಂಬ ಸುರಕ್ಷಿತವಾಗಿರಲು ಸಹಕಾರಿಯಾಗುತ್ತದೆ.

ಆರ್ಮಡ್ ಫೋರ್ಸ್ ಫ್ಲಾಗ್ ಫಂಡ್ ಎಲ್ಲಿಗೆ ಹೋಗುತ್ತದೆ

ಆರ್ಮಡ್ ಫೋರ್ಸ್ ಫ್ಲಾಗ್ ಫಂಡ್ ಎಲ್ಲಿಗೆ ಹೋಗುತ್ತದೆ

ಯುದ್ಧದಲ್ಲಿ ಕಾಲುಗಳನ್ನು ಕಳೆದುಕೊಂಡಿರುವ ಅಂಗವಿಕಲರಾಗಿರುವ ನಿವೃತ್ತ ಯೋಧರಿಗೆ, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಸೈನಿಕರಿಗೆ, ಆಲ್‌ ಇಂಡಿಯಾ ಗೂರ್ಖಾ ಇಎಸ್ಎಂ ವೆಲ್‌ಫೇರ್ ಆರ್ಗನೈಸೇಷನ್, ವಾರ್ ಮೆಮೊರಿಯಲ್ ಹಾಸ್ಟೆಲ್ಸ್, ರಕ್ಷಾ ಮಂತ್ರೀಸ್ ಎಕ್ಸ್‌ ಸರ್ವೀಸ್ ಮೆನ್ ವೆಲ್‌ಫೇರ್ ಫಂಡ್ ಗಳಿಗೆ ಈ ಹಣ ಹೋಗುತ್ತದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Armed Forces Flag Day Today, throughout the country to honour the martyrs and the men in uniform who valiantly fought on borders to safeguard the country's honour. This day gives us opportunity to contribute to ‘Armed Forces Flag Day Fund’. This fund is used for the welfare of the families of the martyrs and disabled soldiers.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more