ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 23ರ ನಂತರ ಮೈತ್ರಿ ಸರ್ಕಾರ ಬೀಳುತ್ತಾ? ಕೆಸಿ ವೇಣುಗೋಪಾಲ್ ಏನಂತಾರೆ?

|
Google Oneindia Kannada News

ನವದೆಹಲಿ, ಮೇ 14: ಲೋಕಸಭೆ ಚುನಾವಣೆ ಫಲೊತಾಂಶ(ಮೇ 23)ದ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದ್ದು, ಮೈತ್ರಿ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಪ್ರತಿಕ್ರಿಯೆ ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

"ನಾವು ಯಾವುದೇ ಬಿಜೆಪಿ ಶಾಸಕರ ಕುದುರೆ ವ್ಯಾಪಾರಕ್ಕೂ ಪ್ರಯತ್ನಿಸುತ್ತಿಲ್ಲ. ಮೇ 23 ರ ನಂತರ ಸರ್ಕಾರ ಬೀಳುತ್ತದೆ ಎನ್ನುತ್ತಿರುವ ಅವರೇ ಮೇ 23ರ ನಂತರ ಕಾಂಗ್ರೆಸ್ ಗೆ ತಾವಾಗಿಯೇ ಬರುತ್ತಾರೆ. ಆ ಸನ್ನಿವೇಶ ಏರ್ಪಾಡಾಗಿಯೇ ಆಗುತ್ತದೆ" ಎಂದು ವೇಣುಗೋಪಾಲ್ ಹೇಳಿದ್ದಾರೆ.

ಕಾಂಗ್ರೆಸ್ ನ 20 ಶಾಸಕರು ರಾಜೀನಾಮೆ ನೀಡುತ್ತಾರೆ: ಬಿಎಸ್ ವೈಕಾಂಗ್ರೆಸ್ ನ 20 ಶಾಸಕರು ರಾಜೀನಾಮೆ ನೀಡುತ್ತಾರೆ: ಬಿಎಸ್ ವೈ

ಕಾಂಗ್ರೆಸ್ ನಾಯಕರು ಬಿಜೆಪಿ ಶಾಸಕರ ಕುದುರೆ ವ್ಯಾಪಾರಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, 'ನಮಗೆ ಕುದುರೆ ವ್ಯಾಪಾರದ ಅಗತ್ಯವಿಲ್ಲ. ಕಳೆದ ಒಂದು ವರ್ಷದಿಂದ ಯಾರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಕುದುರೆ ವ್ಯಾಪಾರವೇನಿದ್ದರೂ ಬಿಜೆಪಿ ಮನಸ್ಥಿತಿ. ನಮ್ಮದಲ್ಲ' ಎಂದರು.

Are Congressmen poacing BJP MLAs? Here is KC Venugopals reaction

ಮೈತ್ರಿ ಸರ್ಕಾರವನ್ನು ಸಿದ್ದರಾಮಯ್ಯ ಅವರೇ ಬೀಳಿಸುತ್ತಾರೆ: ಅಶೋಕ್ಮೈತ್ರಿ ಸರ್ಕಾರವನ್ನು ಸಿದ್ದರಾಮಯ್ಯ ಅವರೇ ಬೀಳಿಸುತ್ತಾರೆ: ಅಶೋಕ್

"ನಾವು ಸಮನ್ವಯದಿಂದ ಆಡಳಿತ ನಡೆಸಲು ಸಮ್ಮಿಶ್ರ ಸರ್ಕಾರ ರಚಿಸಿದ್ದೇವೆ. ಕಳೆದ ಹಲವು ತಿಂಗಳುಗಳಿಂದ ಆಡಳಿತ ನಡೆಸುತ್ತಿದ್ದೇವೆ. ಇದನ್ನು ಹೀಗೆಯೇ ಮುಂದುವರಿಸುತ್ತೇವೆ. ಅದರಲ್ಲಿ ಅನಾನಬೇಡ. ಬಿಜೆಪಿ ಹಗಲು ಕನಸು ಕಾಣುವ ಅಗತ್ಯವಿಲ್ಲ" ಎಂದು ಅವರು ಹೇಳಿದರು.

English summary
Congress leader KC Venugopal said, We're not going to poach any MLAs from BJP but naturally they'll come to Congress after 23rd. That's going to happen. In last 1 yr, Karnataka has been witnessing horse-trading mentality of BJP, on the other hand Congress-JD(S) joined together.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X