ದೆಹಲಿಯಲ್ಲಿ ನ.25ರಿಂದ ಮತ್ತೊಂದು ಚಾಲಕ ರಹಿತ ಮೆಟ್ರೋ ಸೇವೆ ಆರಂಭ

ನವದೆಹಲಿ, ನವೆಂಬರ್ 24: 2020 ರ ಡಿಸೆಂಬರ್‌ನಲ್ಲಿ ದೇಶದ ಮೊಟ್ಟ ಮೊದಲ ಚಾಲಕ ರಹಿತ ಮೆಟ್ರೋ ಸೇವೆಯನ್ನು ಜಾರಿಗೆ ತಂದ ದೆಹಲಿ ಮೆಟ್ರೋ ರೈಲು ನಿಗಮ ಈಗ ಮತ್ತೊಂದು ಮಾರ್ಗದಲ್ಲೂ ಚಾಲಕ ರಹಿತ ರೈಲು ಸೇವೆಯನ್ನು ಪರಿಚಯಿಸಲು ಸಿದ್ಧವಾಗಿದೆ. ದೆಹಲಿ ಮೆಟ್ರೋದ 57 ಕಿಮೀ ಪಿಂಕ್ ಲೈನ್‌ನಲ್ಲಿ ಚಾಲಕ ರಹಿತ ರೈಲು ಕಾರ್ಯಾಚರಣೆಗೆ ಚಾಲನೆ ನೀಡಲಾಗುತ್ತಿದೆ. ಗುರುವಾರ (ನವೆಂಬರ್ 25) ಉದ್ಘಾಟನೆಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಇದನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮ ನಾಳೆ ಬೆಳಿಗ್ಗೆ 11:30 ಕ್ಕೆ ನಡೆಯಲಿದೆ ಎಂದು ಡಿಎಂಆರ್‌ಸಿ ತಿಳಿಸಿದೆ.

ಈ ಹಿಂದೆ ಮಜ್ಲಿಸ್ ಪಾರ್ಕ್‌ನಿಂದ ಶಿವ ವಿಹಾರ್‌ವರೆಗೆ ವ್ಯಾಪಿಸಿರುವ ಪಿಂಕ್ ಲೈನ್ 2021 ರ ಮಧ್ಯದ ವೇಳೆಗೆ ಚಾಲಕ ರಹಿತ ಕಾರ್ಯಾಚರಣೆಯನ್ನು ಹೊಂದಿರುತ್ತದೆ ಎಂದು ಡಿಎಂಆರ್‌ಸಿ ಅಧಿಕಾರಿಗಳು ಹೇಳಿದ್ದರು. ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ ಸುರಕ್ಷತಾ ಕ್ರಮದ ನಂತರವೇ ರೈಲು ಕಾರ್ಯಾಚರಣೆ (UTO) ಆರಂಭವಾಗಿತ್ತದೆ. ಇದು ವರ್ಷದ ಅಂತ್ಯದ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ 58.4 ಕಿಮೀ ಉದ್ದದ ಗುಲಾಬಿ ಮಾರ್ಗದಲ್ಲಿ ಚಾಲಕ ರಹಿತ ರೈಲು ಸಂಚಾರ ಆರಂಭವಾಗಲಿದೆ ಎಂದು ಹೇಳಲಾಗಿತ್ತು. ಆದಾಗ್ಯೂ, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಮೆಟ್ರೋದ ಕಾರ್ಯಾಚರಣೆಗಳ ಮೇಲೆ ಪ್ರಮುಖವಾಗಿ ಪರಿಣಾಮ ಬೀರಿತು.

Another driverless metro service to begin from Nov 25

ಪಿಂಕ್ ಲೈನ್‌ನಲ್ಲಿ ಚಾಲಕರಹಿತ ರೈಲು ಕಾರ್ಯಾಚರಣೆ ಪ್ರಾರಂಭವಾದ ನಂತರ DMRC ಯ ಒಟ್ಟು ಚಾಲಕರಹಿತ ದೂರವು ಸುಮಾರು 96 ಕಿ.ಮೀ. ಆಗಲಿದೆ. ಇದಕ್ಕೂ ಮೊದಲು, ದೇಶದ ಮೊದಲ ಚಾಲಕ ರಹಿತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು 2020 ರ ಡಿಸೆಂಬರ್ 28 ರಂದು 37 ಕಿಮೀ ಮೆಜೆಂಟಾ ಲೈನ್‌ನಲ್ಲಿ (ಜನಕಪುರಿ ಪಶ್ಚಿಮದಿಂದ ಬೊಟಾನಿಕಲ್ ಗಾರ್ಡನ್) ಸೇವೆಗೆ ಚಾಲನೆ ನೀಡಿದರು. 37-ಕಿಮೀ ಮೆಜೆಂಟಾ ಲೈನ್ ಜನಕಪುರಿ ಪಶ್ಚಿಮ ಮತ್ತು ಬೊಟಾನಿಕಲ್ ಗಾರ್ಡನ್ ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸುತ್ತದೆ.

ದೆಹಲಿ ಮೆಟ್ರೋ ಚಾಲಕ ರಹಿತ ರೈಲನ್ನು ಆರಂಭದಲ್ಲಿ ದಕ್ಷಿಣ ಕೊರಿಯಾದಿಂದ ಆಮದು ಮಾಡಿದೆ. ಅಲ್ಲಿನ ಹುಂಡೈ ರೊಟೊಮ್‌ ಕಂಪನಿ ಚಾಲಕ ರಹಿತ ರೈಲಿನ ವಿನ್ಯಾಸ, ತಂತ್ರಜ್ಞಾನಗಳನ್ನು ತಯಾರು ಮಾಡಿದೆ. ಕಳೆದ ವರ್ಷವೇ ಗುಜರಾತಿನ ಮುಂದ್ರಾ ಬಂದರಿನ ಮೂಲಕ 6 ರೈಲ್ವೇ ಕೋಚ್‌ಗಳು ದೆಹಲಿಗೆ ಬಂದು ತಲುಪಿದ್ದವು. ಒಪ್ಪಂದ ಪ್ರಕಾರ ಒಟ್ಟು 20 ರೈಲುಗಳನ್ನು ಹ್ಯುಂಡೈ ಕಂಪನಿ ತಯಾರು ಮಾಡಿದೆ. ಸುಮಾರು 60 ರೈಲುಗಳನ್ನು ಬೆಂಗಳೂರು ಮೂಲದ ಬಿಇಎಮ್‌ಎಲ್‌ ತಯಾರು ಮಾಡಿದೆ.

Another driverless metro service to begin from Nov 25

2014ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸನ್ನು ಮೊದಲ ಮೆಟ್ರೋ ರೈಲು ಸೇವೆಯ ಮೂಲಕ ನಮ್ಮ ಸರ್ಕಾರ ನನಸಾಗಿಸಿತು. ಅಂದು 5 ನಗರಗಳಲ್ಲಿ ಆರಂಭವಾದ ಮೆಟ್ರೋ ಸೇವೆ ಇಂದು 18 ನಗರಗಳಿಗೆ ವಿಸ್ತರಿಸಿದೆ. 2025ರ ವೇಳೆಗೆ 25 ನಗರಗಳಿಗೆ ವಿಸ್ತರಿಸಲಿದೆ ಎಂದು ಮೋದಿ ಹೇಳಿದರು.

Another driverless metro service to begin from Nov 25

ಇತರ ಮೆಟ್ರೋ ರೈಲುಗಳಿಗಿಂತಲೂ ಚಾಲಕ ರಹಿತ ರೈಲು ಹೆಚ್ಚು ಪರಿಸರ ಸ್ನೇಹಿಯಾಗಿದೆ. ಶೇ.10ರಷ್ಟು ಕಡಿಮೆ ವಿದ್ಯುತ್‌ ಬಳಕೆ ಮಾಡುತ್ತಿದೆ. ಜೊತೆಗೆ ವೇಗವೂ ಹೆಚ್ಚು. ಗರಿಷ್ಠ 95 ಕಿ.ಮೀ. ವೇಗದ ವರೆಗೆ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದ್ದು, ದೆಹಲಿ ಮೆಟ್ರೋ ವೇಗವನ್ನು ಗರಿಷ್ಠ 85 ಕಿ.ಮೀ.ಗೆ ನಿಗದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+