"ಕುದುರೆ ವ್ಯಾಪಾರ ಸಹಿಸಲಾರೆ": ಎಎಪಿ ತೊರೆದ ಅಂಜಲಿ
ನವದೆಹಲಿ, ಮಾ.11: ಆಮ್ ಆದ್ಮಿ ಪಕ್ಷದ ಹಿರಿ ತಲೆಗಳು ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿರುವ ಸಂದರ್ಭದಲ್ಲೇ ಮಹಾರಾಷ್ಟ್ರದ ಎಎಪಿ ಹಿರಿಯ ನಾಯಕಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ನಾನು ಈ ವರೆಗೂ ಅರವಿಂದ ಕೇಜ್ರಿವಾಲರನ್ನು ಬೆಂಬಲಿಸಿಕೊಂಡು ಬಂದಿರುವುದು ತತ್ವಗಳಿಗಾಗಿಯೇ ಹೊರತು ಕುದುರೆ ವ್ಯಾಪಾರಕ್ಕೆ ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇಂಥ ಒಂದು ಮೂರ್ಖತನದ ಕೃತ್ಯ (ಕುದುರೆ ವ್ಯಾಪಾರ) ವನ್ನು ಬೆಂಬಲಿಸುವುದಕ್ಕಾಗಿ ನಾನು ಈ ಪಕ್ಷಕ್ಕೆ ಬಂದವಳಲ್ಲ. ಅರವಿಂದ ಕೇಜ್ರಿವಾಲ್ ಅವರನ್ನು ನಾನು ತತ್ವಗಳಿಗಾಗಿ ಬೆಂಬಲಿಸಿದ್ದೇನೆಯೇ ವಿನಾ ಕುದುರೆ ವ್ಯಾಪಾರಕ್ಕಾಗಿ ಅಲ್ಲ' ಎಂದು ದಮಾನಿಯಾ ಕಿಡಿ ಕಾರಿದ್ದಾರೆ.[ಎಎಪಿಗೆ ಭಾರಿ ಹೊಡೆತ, ಅಂಜಲಿ ದಮಾನಿಯಾ ಹೊರಕ್ಕೆ]
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರಿಗೆ ನಿಕಟರಿರುವ ನಾಲ್ವರು ಆಪ್ ನಾಯಕರು, ದಿಲ್ಲಿ ವಿಧಾನಸಭೆಗೆ ಫೆಬ್ರವರಿಯಲ್ಲಿ ನಡೆದಿದ್ದ ಚುನಾವಣೆಯಲ್ಲಿ ಆಪ್ ಸೋಲು ಕಾಣಲು ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಯತ್ನಿಸಿದ್ದರು ಎಂದು ಇತ್ತೀಚೆಗೆ ಅಂಜಲಿ ದಮಾನಿಯಾ ಆರೋಪಿಸಿದ್ದರು.

ಆಪ್ ನ ಮಾಜಿ ಶಾಸಕ ರಾಜೇಶ್ ಗಾರ್ಗ್ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಡುವಿನ ರಹಸ್ಯ ಆಡಿಯೋ ಟೇಪ್ ಬಿಡುಗಡೆಯಾದ ಬೆನ್ನಲ್ಲೇ ಅಂಜಲಿ ದಮಾನಿಯಾ ಅವರು ಆಪ್ ಗೆ ರಾಜಿನಾಮೆ ನೀಡಿರುವುದು ಆಪ್ ಕಾರ್ಯಕರ್ತರಲ್ಲಿ ಹಲವಾರು ಪ್ರಶ್ನೆಗಳನ್ನು ಮೂಡಿಸಿದೆ.
ದೆಹಲಿ ಚುನಾವಣೆ ವೇಳೆ ನಡೆದಿದೆ ಎನ್ನಲಾಗುತ್ತಿರುವ ರಾಜೇಶ್ ಗಾರ್ಗ್ ಮತ್ತು ಅರವಿಂದ್ ಕೇಜ್ರಿವಾಲ್ ಅವರ ದೂರವಾಣಿ ಸಂಭಾಷಣೆಯನ್ನು ರಾಷ್ಟ್ರೀಯ ಮಾಧ್ಯಮವೊಂದು ಬಹಿರಂಗ ಪಡಿಸಿತ್ತು. ಇದಾದ ಬೆನ್ನಲ್ಲೇ ಅಂಜಲಿ ದಮಾನಿಯಾ ರಾಜೀನಾಮೆ ನೀಡಿದ್ದಾರೆ.
I quit.. Ihave not come into Aap for this nonsense. I believed him.. I backed Arvind for principles not Horse-trading http://t.co/lxMaBkwxeO
— Anjali Damania (@anjali_damania) March 11, 2015 ಅದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಯೋಗೇಂದ್ರ ಯಾದವ್ ಈ ಬಗ್ಗೆ ಸೂಕ್ತ ನಿರ್ಧಾರ ಪಕ್ಷ ಕೈಗೊಳ್ಳಲಿದೆ ಎಂದಿದ್ದಾರೆ.ಅರವಿಂದ್ ಕೇಜ್ರಿವಾಲ್ ಅವರು ಪ್ರಸ್ತುತ ಬೆಂಗಳೂರಿನ ಜಿಂದಾಲ್ ನೈಸರ್ಗಿಕ ಕೇಂದ್ರದಲ್ಲಿ ಕೆಮ್ಮು ಹಾಗೂ ಮಧುಮೇಹಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications