ಎಎಪಿಗೆ ಭಾರಿ ಹೊಡೆತ, ಅಂಜಲಿ ದಮಾನಿಯಾ ಹೊರಕ್ಕೆ
ಮುಂಬೈ, ಅ.1: ಆಮ್ ಆದ್ಮಿ ಪಕ್ಷದ ಮಹಾರಾಷ್ಟ್ರ ಘಟಕದ ಸಂಚಾಲಕಿ ಅಂಜಲಿ ದಮಾನಿಯಾ ಹಾಗೂ ಕಾರ್ಯದರ್ಶಿ ಪ್ರೀತಿ ಶರ್ಮ ಮೆನನ್ ಅವರು ಪಕ್ಷದಿಂದ ಹೊರ ನಡೆದಿದ್ದಾರೆ. ಇಬ್ಬರು ವೈಯಕ್ತಿಕ ಕಾರಣ ನೀಡಿ ಪಕ್ಷ ತೊರೆಯುತ್ತಿರುವುದಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಈ ಹಿಂದೆ ಶಾಜಿಯಾ ಇಲ್ಮಿ, ಕ್ಯಾಪ್ಟನ್ ಗೋಪಿನಾಥ್ ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಿಗೆ ಸಾಮಾಜಿಕ ಕಾರ್ಯಕರ್ತೆ ಅಂಜಲಿ ದಮಾನಿಯಾ ಅವರು ರಾಜೀನಾಮೆ ನೀಡಿದ್ದರು. ಅದರೆ, ಮಾಯಾಂಕ್ ಗಾಂಧಿ ಅವರ ಸಂಧಾನದಿಂದ ಮತ್ತೆ ಪಕ್ಷದ ಸಂಚಾಲಕಿಯಾಗಿ ಮುಂದುವರೆದಿದ್ದರು.
ಭ್ರಷ್ಟಾಚಾರ ವಿರೋಧಿ ಚಳುವಳಿಗಾರ್ತಿ, ಆಮ್ ಆದ್ಮಿ ಪಕ್ಷದ ಹಿರಿಯ ನಾಯಕಿ ಅಂಜಲಿ ದಮಾನಿಯಾ ಅವರು ಎಎಪಿ ಪಕ್ಷಕ್ಕೆ ರಾಜಿನಾಮೆ ನೀಡಿರುವುದು ಪಕ್ಷಕ್ಕೆ ಆಘಾತವಾದರೂ ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಟೀಕೆ ಕೇಳಿ ಬಂದಿದೆ. [ನನ್ನ ಮಗಳು ರಾಜಕೀಯ ರಂಗ ಪ್ರವೇಶಿಸಲ್ಲ]
ಅಕ್ಟೋಬರ್ 15ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸದಿರಲು ನಿರ್ಧರಿಸಿದೆ. ಇಬ್ಬರು ನಾಯಕಿಯರು ಪಕ್ಷ ತೊರೆದರೂ ಎಎಪಿಯನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಅಂಜಲಿ ದಮಾನಿಯಾ ಟ್ವೀಟ್ ಗೆ ಭಾರಿ ಪ್ರತಿಕ್ರಿಯೆ ಹರಿದು ಬಂದಿದೆ.

ಕಳೆದ ಚುನಾವಣೆಯಲ್ಲಿ ಅಂಜಲಿಗೂ ಸೋಲು
ಕಳೆದ ಚುನಾವಣೆಯಲ್ಲಿ ಮಹಾರಾಷ್ಟ್ರದ 48 ಕ್ಷೇತ್ರಗಳಲ್ಲೂ ಆಪ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅಂಜಲಿ ದಮಾನಿಯಾ, ಮಾಯಾಂಕ್ ಗಾಂಧಿ, ಮೇಧಾ ಪಾಟ್ಕರ್ ಮತ್ತು ವಿಜಯ್‌ಪಾಂಡೆ ಸೋಲು ಕಂಡಿದ್ದರು.
|
ಅಂಜಲಿ ಹಾಗೂ ಪ್ರೀತಿ ಐಡಿ ಚೇಂಜ್ ಮಾಡಿಕೊಳ್ಳಲಿ
ಎಎಪಿಯಿಂದ ಹೊರಬಿದ್ದ ಮೇಲೆ ಅಂಜಲಿ ಹಾಗೂ ಪ್ರೀತಿ ಐಡಿ ಚೇಂಜ್ ಮಾಡಿಕೊಳ್ಳಲಿ
|
ಅಂಜಲಿ ಹೊರಕ್ಕೆ ಹೋಗಿರುವುದು ಅಚ್ಚರಿ ನಡೆ ಏನಲ್ಲ
ಅಂಜಲಿ ಎಎಪಿಯಿಂದ ಹೊರಕ್ಕೆ ಹೋಗಿರುವುದು ಅಚ್ಚರಿ ನಡೆ ಏನಲ್ಲ
|
ಚುನಾವಣೆ, ಪಬ್ಲಿಸಿಟಿ ಇಲ್ಲದಿದ್ದರೆ ಏನು ಕೆಲಸ
ಚುನಾವಣೆ, ಪಬ್ಲಿಸಿಟಿ ಇಲ್ಲದಿದ್ದರೆ ಏನು ಕೆಲಸವಿರುತ್ತದೆ?
|
ಟ್ವೀಟ್ ಮಾಡಿದ್ದಕ್ಕೆ ಅಂಜಲಿ ಹೊರಹಾಕಲಾಗಿದೆ
ಟ್ವೀಟ್ ಮಾಡಿದ್ದಕ್ಕೆ ಅಂಜಲಿ ಹೊರಹಾಕಲಾಗಿದೆ ಮುಂದೆ ಆಶುತೋಷ್ ಗೂ ಇದೆ ಗತಿ.
|
ಅಂಜಲಿ ಪಕ್ಷ ತೊರೆದಿದ್ದರ ಬಗ್ಗೆ ಟ್ವೀಟ್
ಅಂಜಲಿ ಪಕ್ಷ ತೊರೆದಿದ್ದರ ಬಗ್ಗೆ ಮತ್ತೊಂದು ಟ್ವೀಟ್












Click it and Unblock the Notifications