• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಮತ್ತೆ ನಿಮ್ಮನ್ನು ನೋಡುವ ಯೋಗ ನಮಗಿಲ್ಲ', ಬಿಕ್ಕಿದ ಆನಂದ್ ಮಹೀಂದ್ರಾ

|

ನವದೆಹಲಿ, ಆಗಸ್ಟ್ 07: "ನೀವು ಜೀವಮಾನವಿಡೀ ಕಾಯುತ್ತಿದ್ದ ದಿನವೇನೋ ಬಂತು, ಆದರೆ ನಮಗೆ ಮತ್ತೆ ನಿಮ್ಮನ್ನು ನೋಡುವ ಯೋಗವಿಲ್ಲ!" ಎಂದು ಅಕ್ಷರಗಳಲ್ಲೇ ಬಿಕ್ಕಿದ್ದಾರೆ ಉದ್ಯಮಿ ಆನಂದ್ ಮಹೀಂದ್ರಾ.

ಸುಷ್ಮಾ ಸ್ವರಾಜ್ ನೆನಪು ಹಸಿರಾಗಿಸುವ ಸುಂದರ ಚಿತ್ರಗಳು

ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರ ನಿಧನದಿಂದ ಆಘಾತಗೊಂಡ ಆನಂದ್ ಮಹೀಂದ್ರಾ ಭಾವುಕರಾಗಿ ಟ್ವೀಟ್ ಮಾಡಿ, ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಸಾವಿನ ಕೊನೆಯ ಕ್ಷಣದಲ್ಲೂ ವೃತ್ತಿಪರತೆ ಮೆರೆದ ಸುಷ್ಮಾ ಸ್ವರಾಜ್ ಸಾವಿನ ಕೊನೆಯ ಕ್ಷಣದಲ್ಲೂ ವೃತ್ತಿಪರತೆ ಮೆರೆದ ಸುಷ್ಮಾ ಸ್ವರಾಜ್

ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಮೋದಿ ಸರ್ಕಾರದ ನಡೆಯನ್ನು ಸ್ವಾಗತಿಸಿದ್ದ ಸುಷ್ಮಾ ಸ್ವರಾಜ್, ಮಂಗಳವಾರ ಸಂಜೆಯಷ್ಟೇ ಟ್ವೀಟ್ ಮಾಡಿ, "ಪ್ರಧಾನ ಮಂತ್ರೀಜಿ, ಈ ದಿನಕ್ಕಾಗಿಯೇ ನಾನು ನನ್ನ ಜೀವಮಾನವಿಡಿ ಕಾದಿದ್ದೆ. ಧನ್ಯವಾದಗಳು ಪ್ರಧಾನಿಯವರೇ, ಬಹಳ ಧನ್ಯವಾದಗಳು. ಈ ದಿನವನ್ನು ನೋಡಲು ನಾನು ಕಾಯುತ್ತಿದ್ದೆ" ಎಂದಿದ್ದರು.

ಕಾಕತಾಳೀಯವೋ ಏನೋ, ಆ ದಿನವನ್ನು ನೋಡುತ್ತಿದ್ದಂತೆಯೇ ಅವರು ಇಹಲೋಕ ತ್ಯಜಿಸಿದರು! ಈ ಟ್ವೀಟ್ ಅನ್ನು ಸ್ಮರಿಸಿದ ಆನಂದ್ ಮಹೀಮದ್ರಾ, "ನೀವೇನೋ ಆ ದಿನವನ್ನು ಕಂಡಿರಿ. ಆದರೆ ನಿಮ್ಮನ್ನು ಮತ್ತೆ ನೋಡುವ ಅದೃಷ್ಟ ನಮಗಿಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಮದರ್ ಇಂಡಿಯಾ. ನೀವು ನಿಮ್ಮೊಂದಿಗೆ ಕೋಟಿ ಕೋಟಿ ಜನರ ಪ್ರೀತಿಯನ್ನು ಕೊಂಡೊಯ್ಯುತ್ತಿದ್ದೀರಿ" ಎಂಮದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

ಅಂಬಾಲ ಕಂಟೋನ್ಮೆಂಟ್ ನ ಗಟ್ಟಿಗಿತ್ತಿ ಹೆಣ್ಣುಮಗಳು ಸುಷ್ಮಾ ಸ್ವರಾಜ್ಅಂಬಾಲ ಕಂಟೋನ್ಮೆಂಟ್ ನ ಗಟ್ಟಿಗಿತ್ತಿ ಹೆಣ್ಣುಮಗಳು ಸುಷ್ಮಾ ಸ್ವರಾಜ್

ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸುಷ್ಮಾ ಸ್ವರಾಜ್ 67 ವರ್ಷ ವಯಸ್ಸಿನ ಸುಷ್ಮಾ ಸ್ವರಾಜ್, ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನರಾದರು.

English summary
Anand Mahindra Emotional Reaction On Sushma Swaraj's Demise,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X