• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನ.15 ರಂದು ಅಮಿತ್ ಶಾ ಹಾಗೂ ಅರವಿಂದ್ ಕೇಜ್ರಿವಾಲ್ ಮಹತ್ವದ ಭೇಟಿ

|

ನವದೆಹಲಿ, ನವೆಂಬರ್ 15: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶನಿವಾರ 7,340 ಹೊಸ ಕೊರೊನಾವೈರಸ್ ಪ್ರಕರಣಗಳನ್ನು ದಾಖಲಿಸಿದ್ದರಿಂದ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನವದೆಹಲಿಯ ಕೋವಿಡ್-19 ಪರಿಸ್ಥಿತಿಯನ್ನು ಪರಿಶೀಲಿಸಲು ಸಭೆ ಕರೆದಿದ್ದಾರೆ.

ದೆಹಲಿಯಲ್ಲಿ ಅತಿ ಹೆಚ್ಚು ಒಂದೇ ದಿನದಲ್ಲಿ 8,593 ಪ್ರಕರಣಗಳು ಬುಧವಾರ ದಾಖಲಾಗಿದ್ದು, ಆ ದಿನ 85 ಸಾವುಗಳು ದಾಖಲಾಗಿವೆ. ನ.12 ರಂದು ಸಾವುಗಳ ಸಂಖ್ಯೆ 104 ಆಗಿದ್ದು, ಇದು ಕಳೆದ ಐದು ತಿಂಗಳಲ್ಲಿ ಒಂದೇ ದಿನದ ಸಾವುಗಳ ಸಂಖ್ಯೆಯಲ್ಲಿ ಅತಿ ಹೆಚ್ಚಾಗಿದೆ.

ಅಕ್ಷರಧಾಮ್ ದೇವಸ್ಥಾನದಲ್ಲಿ ದೀಪಾವಳಿ ಪೂಜೆ ನೆರವೇರಿಸಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ಕೊರೊನಾ ಪ್ರಕರಣಗಳ ಹೆಚ್ಚಳದಿಂದಾಗಿ, ಅಮಿತ್ ಶಾ ಅವರು ಭಾನುವಾರ ಸಂಜೆ 5 ಗಂಟೆಗೆ ದೆಹಲಿಯ ನಾರ್ತ್ ಬ್ಲಾಕ್ ನ ಗೃಹ ವ್ಯವಹಾರ ಸಚಿವಾಲಯದ ಕಟ್ಟಡದಲ್ಲಿ ಸಭೆ ಕರೆದಿದ್ದಾರೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಇತ್ತೀಚಿನ ಸಂಖ್ಯೆಗಳೊಂದಿಗೆ ರಾಜಧಾನಿ ನವದೆಹಲಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣವು 4,82,170ಕ್ಕೆ ಏರಿದೆ. ಶನಿವಾರ ವರದಿಯಾದ 96 ಹೊಸ ಸಾವುಗಳು ನಗರದಲ್ಲಿ ಸಾವಿನ ಒಟ್ಟು ಸಂಖ್ಯೆಯನ್ನು 7,519ಕ್ಕೆ ಏರಿಸಿದೆ.

   ಲಸಿಕೆಯಿಂದ ತೊಂದ್ರೆ ಆಗತ್ತಾ! | Oneindia Kannada

   ಹಿಂದಿನ ದಿನ ನಡೆಸಿದ 19,635 ಆರ್‌ಟಿ-ಪಿಸಿಆರ್ ಸೇರಿದಂತೆ 49,645 ಪರೀಕ್ಷೆಗಳಿಂದ ಈ ಹೊಸ ಪ್ರಕರಣಗಳು ಪತ್ತೆಯಾಗಿವೆ. ಹಬ್ಬಗಳು ಮತ್ತು ಹೆಚ್ಚುತ್ತಿರುವ ಮಾಲಿನ್ಯದ ಮಧ್ಯೆ ನಗರದಲ್ಲಿ ಸಕಾರಾತ್ಮಕ ಪ್ರಮಾಣವು ಶೇಕಡಾ 14.78 ರಷ್ಟಿದೆ ಎಂದು ದೆಹಲಿ ಆರೋಗ್ಯ ಇಲಾಖೆ ಹೊರಡಿಸಿದ ಬುಲೆಟಿನ್ ಹೇಳಿದೆ.

   English summary
   NEW DELHI: Union Home Minister Amit Shah has convened a meeting to review the Covid-19 situation in New Delhi as 7,340 new cases of coronavirus were registered in the national capital on Saturday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X