ಅಮೆರಿಕಾ ಮೂಲದ ಮಹಿಳೆ ಮೇಲೆ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 3: ಮೂಲತಃ ಅಮೆರಿಕಾ ವಾಸಿಯಾದ ಮಹಿಳೆಯೊಬ್ಬರ ಮೇಲೆ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ಆಗಿದೆ. ಗೈಡ್ ಸೇರಿದಂತೆ ಐವರಿದ್ದ ತಂಡವು ಕನ್ಹೌಟ್ ಪ್ಲೇಸ್ ಬಳಿಯ ಪಂಚತಾರಾ ಹೋಟೆಲ್ ನಲ್ಲಿ ಅತ್ಯಾಚಾರ ಎಸಗಿದೆ ಎಂದು ಆರೋಪಿಸಲಾಗಿದೆ.

ಇ ಮೇಲ್ ಮೂಲಕ ಮಹಿಳೆ ದೂರು ನೀಡಿದ್ದಾರೆ. ಎಫ್ ಐಆರ್ ದಾಖಲಾದ ನಂತರ ದೆಹಲಿಗೆ ಬಂದು ಹೇಳಿಕೆ ನೀಡುವುದಾಗಿ ಮಹಿಳೆ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಆಕೆ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಪೊಲೀಸ್ ಕಮಿಷನರ್ ಅಧಿಕೃತ ಅಕೌಂಟ್ ಗೆ ಇ ಮೇಲ್ ಕಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

American alleges rape by guide, 4 others in New Delhi

ಮಾರ್ಚ್ 2016ರಲ್ಲಿ ಪ್ರವಾಸಿ ವೀಸಾ ಪಡೆದು ದೆಹಲಿಗೆ ಬಂದಿದ್ದೆ. ಅಗ ಕನ್ಹೌಟ್ ಪ್ಲೇಸ್ ನ ಪಂಚತಾರಾ ಹೋಟೆಲ್ ವೊಂದರಲ್ಲಿ ಉಳಿದುಕೊಂಡಿದ್ದೆ. ದೆಹಲಿ ಸುತ್ತಾಡುವ ಉದ್ದೇಶದಿಂದ ಹೋಟೆಲ್ ಅಧಿಕಾರಿಗಳು ಸೂಚಿಸಿದ ಏಜೆನ್ಸಿ ಮೂಲಕ ಟೂರಿಸ್ಟ್ ಗೈಡ್ ಗುರುತು ಮಾಡಿದ್ದೆ.

ಒಂದು ದಿನ ಹೋಟೆಲ್ ರೂಮಿಗೆ ಬಂದ ಗೈಡ್, ರೂಟ್ ಮ್ಯಾಪ್ ಬಗ್ಗೆ ಮಾತನಾಡಬೇಕು ಎಂದ. ಆ ನಂತರ ಜತೆಗೆ ನಾಲ್ಕು ಮಂದಿಯನ್ನು ಕರೆತಂದು, ಮೊದಲಿಗೆ ತಾನು ಅತ್ಯಾಚಾರ ಮಾಡಿದ. ಉಳಿದವರು ಸಹ ದೌರ್ಜನ್ಯ ಎಸಗಿದರು ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ಇಡೀ ಪ್ರಕರಣದ ಬಗ್ಗೆ ದೆಹಲಿ ಪೊಲೀಸರು ಮಾಹಿತಿ ಕಲೆ ಹಾಕಲು ಆರಂಭಿಸಿದ್ದು, ಆರೋಪದ ಸತ್ಯಾಸತ್ಯತೆ ತಿಳಿಯಲು ಹಾಗೂ ಆರೋಪಿಗಳ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A woman based in the United States was allegedly gang-raped by a group of five men, including a tourist guide, at a five-star hotel near Connaught Place, New Delhi.
Please Wait while comments are loading...