ಟ್ರಂಪ್ ಬಂದು ಹೋದ ಮೇಲೆ; ವೈರಲ್ ಆಯಿತು ಅದೊಂದು ವಿಡಿಯೋ

ನವದೆಹಲಿ, ಫೆಬ್ರವರಿ 29; ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ವಾಪಸ್ ಹೋಗಿದ್ದಾರೆ. ಟ್ರಂಪ್ ಭಾರತ ಭೇಟಿ ವಿಶ್ವಾದ್ಯಂತ ಗಮನ ಸೆಳೆದಿತ್ತು.

ಅದರಲ್ಲಿ ಟ್ರಂಪ್ ಹಾಗೂ ನರೇಂದ್ರ ಮೋದಿ ಅವರ ಸುದ್ದಿಗೋಷ್ಟಿ ಕೂಡ ಕೇಂದ್ರ ಬಿಂದುವಾಗಿತ್ತು. ಫೆಬ್ರವರಿ 25 ರಂದು ದೆಹಲಿಯಲ್ಲಿ ಟ್ರಂಪ್ ಹಾಗೂ ಮೋದಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದರು. ಸುದ್ದಿಗೋಷ್ಠಿಯಯಲ್ಲಿ ಟ್ರಂಪ್ ಹಾಗೂ ಮೋದಿ ನಗು ನಗುತ್ತಲೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಸುಮ್ಮನಾಗಿದ್ದರು.

ಆದರೆ ಜಾಗತಿಕವಾಗಿ ಈ ಸುದ್ದಿಗೋಷ್ಠಿಯಲ್ಲಿ ನಡೆದ ಒಂದು ಘಟನೆಯ ವಿಡಿಯೋ ಟ್ರಂಪ್ ಬಂದು ಹೋದ ಮೇಲೆ ವೈರಲ್ ಆಗಿದೆ. ಟ್ರಂಪ್ ಗೆ ಭಾರತದ ಪತ್ರಕರ್ತರೊಬ್ಬರು ಪ್ರಶ್ನೆ ಕೇಳುವ ಸಮಯದಲ್ಲಿ ನ್ಯೂಯಾರ್ಕ ಟೈಮ್ಸ್ ಪತ್ರಿಕೆಯ ವರದಿಗಾರ್ತಿ ಪ್ರತಿಕ್ರಿಯಿಸಿದ ವಿಡಿಯೀ ವೈರಲ್ ಆಗಿದೆ.

America Lady Journalist Mocks Indian Reporter

ಜಗತ್ತಿನಾದ್ಯಂತ ತಲ್ಲಣ ಸೃಷ್ಠಿಸಿರುವ ಕೊರೊನಾ ವೈರಸ್ ಬಗ್ಗೆ ಭಾರತದ ಪತ್ರಕರ್ತ ಟ್ರಂಪ್ ಅವರಿಗೆ ಪ್ರಶ್ನೆ ಕೇಳುತ್ತಿದ್ದರು. ಈ ವೇಳೆ ಅವರು ಟ್ರಂಪ್ ಅವರು, ಕೊರೊನಾ ಅಮೆರಿಕ ಪ್ರವೇಶಿಸದಂತೆ ಉತ್ತಮ ಕ್ರಮ ಕೈಗೊಂಡಿದ್ದಾರೆ. ಇದು ಟ್ರಂಪ್ ನಾಯಕತ್ವಕ್ಕೆ ಸಾದ್ಯ ಎಂದು ಪ್ರಶಂಸಿನೀಯ ನುಡಿಗಳನ್ನು ಹೇಳುತ್ತಾರೆ. ಹೀಗೆ ಹೇಳುವಾಗ ಆ ವರದಿಗಾರ್ತಿ ಭಾರತದ ಪತ್ರಕರ್ತ ಏನು ಕೇಳುತ್ತಿದ್ದಾರೆ ಎಂದು ಅವಮಾನಿಸುವ ರೀತಿಯಲ್ಲಿ ನಗೆಯಾಡಿದ್ದಾರೆ.

ಆ ಪತ್ರಕರ್ತೆಯ ಚೇಷ್ಟೇಗೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ವರದಿಗಾರ್ತಿಯನ್ನು ತೀವ್ರ ತರಾಟೆಗೆ ತೆಗದುಕೊಂಡು ಕಾಮೆಂಟ್ ಮಾಡಿದ್ದಾರೆ. ಟ್ರಂಪ್ ವಿರೋಧಿ ಪತ್ರಕರ್ತರ ಚೇಷ್ಟೇ ನೋಡಿ ಎಂದು ಕಾಲೆಳದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+