ದೆಹಲಿಯಲ್ಲಿ ಅಮೆರಿಕ-ಭಾರತ ಮಹತ್ವದ 2+2 ಮಾತುಕತೆ

ನವದೆಹಲಿ, ಸೆಪ್ಟೆಂಬರ್ 06: ಅಮೆರಿಕ ಹಾಗೂ ಭಾರತದ ನಡುವೆ ಅತ್ಯಂತ ಮಹತ್ವದ ದ್ವಿ ಪಕ್ಷೀಯ ಮಾತುಕತೆ ಇಂದು ದೆಹಲಿಯಲ್ಲಿ ಆರಂಭವಾಗಿದೆ. ಅಮೆರಿಕ ಸರ್ಕಾರದ ಕಾರ್ಯದರ್ಶಿ ಮೈಕ್ ಪೋಂಪಿಯೋ ಹಾಗೂ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಮಾತುಕತೆಗಾಗಿ ಭಾರತಕ್ಕೆ ಬಂದಿದ್ದಾರೆ.

ಇಬ್ಬರೂ ಅಮೆರಿಕ ಸರ್ಕಾರದ ಪ್ರತಿನಿಧಿಗಳು ಭಾರತದ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಹಾಗೂ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಪರಸ್ಪರ ಮಾತುಕತೆ ನಡೆಸುತ್ತಿದ್ದಾರೆ.

'ಎರಡೂ ದೇಶಗಳು ಮುಕ್ತ ವಾಯು ಹಾಗೂ ಸಮುದ್ರ ಮಾರ್ಗದ ನೀತಿಗಳನ್ನು ಮುಂದುವರೆಸುತ್ತಾ, ವಿವಾದಗಳನ್ನು ಶಾಂತಿಯುತ ತೀರ್ಮಾನಗಳ ಮೂಲಕ ಎತ್ತಿಹಿಡಿಯುತ್ತಾ, ಮಾರುಕಟ್ಟೆ ಆಧಾರಿತ ಆರ್ಥಿಕತೆ ಹಾಗೂ ಉತ್ತಮ ಆಡಳಿತವನ್ನು ಮುಂದುವರೆಸುತ್ತೇವೆ' ಎಂದು ಯುಎಸ್‌ ಕಾರ್ಯದರ್ಶಿ ಮೈಕ್ ಫೋಂಪಿಯೋ ಹೇಳಿದ್ದಾರೆ.

America - India were in the 2+2 talks in Delhi

ಎರಡೂ ದೇಶಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಯುವ ಕಾರಣದಿಂದಾಗಿ ಒಂದಾಗಿವೆ. ಪ್ರತಿಯೊಬ್ಬರ ಹಕ್ಕನ್ನು ಗೌರವಿಸುವ, ಹಾಗೂ ಸ್ವಾತಂತ್ರ್ಯ ನೀಡುವ ವಿಷಯವೇ ಭಾರತ ಹಾಗೂ ಅಮೆರಿಕದ ಪ್ರಮುಖ ಆದ್ಯತೆಗಳಾಗಿವೆ ಎಂದು ಮೈಕ್ ಪೋಂಪಿಯೋ ಹೇಳಿದರು.

ದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಮಾತನಾಡಿ, ನಮ್ಮ ಮಾತುಕತೆ ಮತ್ತು ನಿರ್ಧಾರಗಳು ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಹತ್ತಿರ ತರುವಲ್ಲಿ ಹಾಗೂ ವಿವಿಧ ವಿಭಾಗಗಳಲ್ಲಿ ನಮ್ಮ ಪಾಲುದಾರಿಕೆಯನ್ನು ಹೆಚ್ಚು ಮಾಡಲಿದೆ ಎಂದು ಹೇಳಿದರು.

ಭಾರತದ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಫ್ ಅವರು ಭಾರತ-ಅಮೆರಿಕ ಬಾಂಧವ್ಯಕ್ಕೆ ನಿರ್ದಿಷ್ಟತೆಯನ್ನು ನೀಡಿದ್ದಾರೆ. ಎರಡೂ ದೇಶಗಳ ನಡುವಿನ ಬಾಂಧವ್ಯ ನಿರ್ದಿಷ್ಟ ವಿಭಾಗಗಳಲ್ಲಿ ಮುಂಚೆಗಿಂತಲೂ ಉತ್ತಮವಾಗಿ ನಡೆಯುತ್ತಿದೆ ಎಂದು ಸುಷ್ಮಾ ಸ್ವರಾಜ್ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+