SC/ST ಕಾಯ್ದೆ ತಿದ್ದುಪಡಿ: ಎಲ್ಲ ರಾಜ್ಯಗಳಲ್ಲೂ ಕಟ್ಟೆಚ್ಚರ!

Recommended Video

      SC/ST ಕಾಯ್ದೆ ತಿದ್ದುಪಡಿ: ಎಲ್ಲ ರಾಜ್ಯಗಳಲ್ಲೂ ಕಟ್ಟೆಚ್ಚರ! | Oneindia Kannada

      ನವದೆಹಲಿ, ಅಕ್ಟೋಬರ್ 03: ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಯ್ದೆಯನ್ನು ತಿದ್ದುಪಡಿಯ ನಂತರ ಜಾರಿಗೊಳಿಸುತ್ತಿರುವುದರಿಂದ ಎಲ್ಲಾ ರಾಜ್ಯಗಳೂ ಕಟ್ಟೆಚ್ಚರ ವಹಿಸುವಂತೆ ಗೃಹ ಸಚಿವ ರಾಜನಾಥ್ ಸಿಂಗ್ ಸೂಚಿಸಿದ್ದಾರೆ.

      ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ತಾವು ಈ ಕಾಯ್ದೆಯನ್ನು ಸಮರ್ಥವಾಗಿ ಜಾರಿಗೊಳಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಈ ಕಾಯ್ದೆ ಇನ್ನೆಂದಿಗೂ ಮಧ್ಯಪ್ರದೇಶದಲ್ಲಿ ದುರುಪಯೋಗವಾಗುವುದಿಲ್ಲ ಎಂಬ ಅಭಯ ನೀಡಿದ್ದಾರೆ.

      ಹಾಗೆಯೇ ಈ ವರ್ಷ ಹಲವು ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿರುವುದರಿಂದ, ಮತ್ತು ಇದೇ ಸಮಯದಲ್ಲಿ ಈ ಕಾಯ್ದೆಯೂ ಜಾರಿಯಾಗುತ್ತಿರುವುದರಿಂದ ಹಿಂಸಾಚಾರವಾಗುವ ಸಾಧ್ಯತೆ ಇದ್ದು, ಈ ಕುರಿತು ಎಲ್ಲಾ ರಾಜ್ಯಗಳೂ ಭದ್ರತೆ ಕಲ್ಪಿಸಬೇಕು, ಕಟ್ಟೆಚ್ಚರ ವಹಿಸಬೇಕು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

      ಕಾಯ್ದೆಯಲ್ಲಿ ಏನಿತ್ತು?

      ಕಾಯ್ದೆಯಲ್ಲಿ ಏನಿತ್ತು?

      1989 ರ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ಕಾಯ್ದೆಯಡಿ, ಈ ಸಮುದಾಯಕ್ಕೆ ಸೇರಿದ ಯಾವುದೇ ವ್ಯಕ್ತಿ ತನ್ನ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ದೂರು ನೀಡಿದ್ದರೆ, ಯಾವುದೇ ವಿಚಾರಣೆಯಿಲ್ಲದೆ ಆರೋಪಿಯನ್ನು ಬಂಧಿಸುವುದಕ್ಕೆ ಸಾಧ್ಯವಿತ್ತು. ಬಂಧಿತರಾದವರಿಗೆ ಜಾಮೀನು ಸಹ ಸಿಗುತ್ತಿರಲಿಲ್ಲ.

      ತಿದ್ದುಪಡಿಯಲ್ಲೇನಿದೆ?

      ತಿದ್ದುಪಡಿಯಲ್ಲೇನಿದೆ?

      ಕಾಯ್ದೆಯಲ್ಲಿ ಮಾಡಲಾದ ಹೊಸ ತಿದ್ದುಪಡಿಯ ಪ್ರಕಾರ ಎಸ್ಸಿ ಎಸ್ಟಿ ಕಾಯ್ದೆಯನ್ವಯ ಯಾರನ್ನಾದರೂ ಬಂಧಿಸಬೇಕಾದರೆ ಪ್ರಾಥಮಿಕ ಡಿಎಸ್ಪಿ ತನಿಖೆಯಾಗಬೇಕು, ನಂತರ ಅಗತ್ಯವಿದ್ದಲ್ಲಿ ಮಾತ್ರವೇ ಕ್ರಮ ಕೈಗೊಳ್ಳಬೇಕು. ಅಷ್ಟೇ ಅಲ್ಲ, ತಿದ್ದುಪಡಿಗೂ ಮುನ್ನ ಈ ಕಾಯ್ದೆಯಡಿ ಬಂಧಿತರಾದವರಿಗೆ ಜಾಮೀನು ಸಿಗುತ್ತಿರಲಿಲ್ಲ. ತಿದ್ದುಪಡಿಯ ನಂತರ ಜಾಮೀನು ನೀಡಬಹುದಾಗಿದೆ.

      ಮುಂಗಾರು ಅಧಿವೇಶನದಲ್ಲಿ ತಿದ್ದುಪಡಿ

      ಮುಂಗಾರು ಅಧಿವೇಶನದಲ್ಲಿ ತಿದ್ದುಪಡಿ

      ಈ ವರ್ಷದ ಸಂಸತ್ ಮುಂಗಾರು ಅಧಿವೇಶನದ ಸಮಯದಲ್ಲಿ ಎಸ್ ಸಿ ಎಸ್ಟಿ ತಿದ್ದುಪಡಿ ಕಾಯ್ದೆಯನ್ನು ಮಂಡಿಸಲಾಯಿತು. ಆದರೆ ಈ ಕುರಿತು ದೇಶದಾದ್ಯಂತ ಎಸ್ ಸಿ ಎಸ್ಟಿ ಸಮುದಾಯದವರಿಂದ ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ತಿದ್ದುಪಡಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡುವುದಾಗಿ ಕೇಮದ್ರ ಸರ್ಕಾರ ಅಭಯ ನೀಡಿತ್ತು.

      ಹಿಂಸಾಚಾರಕ್ಕೆ ತಿರುಗಿದ್ದ ಪ್ರತಿಭಟನೆ

      ಹಿಂಸಾಚಾರಕ್ಕೆ ತಿರುಗಿದ್ದ ಪ್ರತಿಭಟನೆ

      ಕಳೆದ ಏಪ್ರಿಲ್ ತಿಂಗಳಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಯ್ದೆಯಲ್ಲಿ ತಿದ್ದುಪಡಿ ತರುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ನಡೆದಿದ್ದ ಬಂದ್, ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ಐದಕ್ಕೂ ಹೆಚ್ಚು ಜನ ಮೃತರಾಗಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+