ಏರ್ ಏಷ್ಯಾ ಆಫರ್: ಬೆಂಗಳೂರು-ಕೊಚ್ಚಿ 500 ರೂ. ಅಷ್ಟೇ
ನವದೆಹಲಿ,ಜೂ.17:ಕಳೆದ ವಾರ ಕಡಿಮೆ ದರದಲ್ಲಿ ಬೆಂಗಳೂರಿನಿಂದ ಗೋವಾಗೆ ವಿಮಾನ ಪ್ರಯಾಣ ಕಲ್ಪಿಸಿದ್ದ ಏರ್ ಏಷ್ಯಾ ಇಂಡಿಯಾ ಈಗ ಬೆಂಗಳೂರು ಮತ್ತು ಕೊಚ್ಚಿಗೆ ಕೇವಲ 500 ರೂ.ಗೆ ಪ್ರಯಾಣಿಸುವ ಇನ್ನೊಂದು ಆಫರ್ ನೀಡಿದೆ.
ಜೂ.20ರಿಂದ ಬೆಂಗಳೂರು ಮತ್ತು ಕೊಚ್ಚಿ ನಡುವೆ ವಿಮಾನ ಹಾರಾಟ ಆರಂಭವಾಗಲಿದ್ದು ಈ ಆಫರ್ ಸಿಮೀತ ಅವಧಿಗೆ ಮಾತ್ರವೇ ಇರಲಿದೆ ಎಂದು ಏರ್ ಏಷ್ಯಾ ಇಂಡಿಯಾ ತಿಳಿಸಿದೆ. ಬುಕ್ಕಿಂಗ್ ಈಗಾಗಲೇ ಆರಂಭಗೊಂಡಿದ್ದು ಮೊದಲ 2 ಸಾವಿರ ಪ್ರಯಾಣಿಕರಿಗೆ ಮಾತ್ರ ಈ ಆಫರ್ ಅನ್ವಯವಾಗಲಿದೆ.

ಅತಿ ಕಡಿಮೆ ದರದ ವಿಮಾನಯಾನ ಸೇವೆ ಆರಂಭಿಸುತ್ತಿರುವ ಏರ್ ಏಷ್ಯಾ ಇಂಡಿಯಾ ದೇಶದಲ್ಲಿ ಜೂ.12ರಿಂದ ತನ್ನ ಹಾರಾಟವನ್ನು ಆರಂಭಿಸಿದೆ. ವಿಮಾನಯಾನ ಕ್ಷೇತ್ರದಲ್ಲಿ ಹೊಸ ದರ ಸಮರ ಆರಂಭಿಸಿರುವ ಏರ್ ಏಷ್ಯಾ ಬೆಂಗಳೂರು-ಗೋವಾ ನಡುವಿನ ಸಂಚಾರಕ್ಕೆ ತೆರಿಗೆ ಸೇರಿ ಪ್ರತಿ ಟಿಕೆಟ್ ಗೆ 990 ರೂ. ನಿಗದಿಗೊಳಿಸಿದೆ. ಏರ್ ಏಷ್ಯಾ ಭಾರತದಲ್ಲಿ ಟಾಟಾ ಗ್ರೂಪ್ ಮತ್ತು ಟೆಲೆಸ್ಟ್ರಾ ಟ್ರೇಡ್ಪ್ಲೇಸ್ ಗಳೊಂದಿಗೆ ಸಹಭಾಗಿತ್ವ ಹೊಂದಿದೆ.


Click it and Unblock the Notifications
