ಸ್ಪರ್ಧೆಗೆ ಏರ್ ಇಂಡಿಯಾ; ಇದು ಸರ್ಕಾರಿ ಸವಾಲ್

ನವದೆಹಲಿ, ನ. 28: ತೀವ್ರ ನಷ್ಟದಿಂದ ಬಳಲುತ್ತಿದ್ದರೂ ಕೇಂದ್ರ ಸರ್ಕಾರ ಮಾಲೀಕತ್ವದ ಏರ್ ಇಂಡಿಯಾ ಸಂಸ್ಥೆ ಯಾವುದೇ ವಿಶೇಷ ಯೋಜನೆ ಜಾರಿಗೆ ತರಲು ಮುಂದಾಗಿರಲಿಲ್ಲ. ಇದರಿಂದ ಸಂಸ್ಥೆಯ ಆರ್ಥಿಕತೆ ಉತ್ತಮಗೊಳ್ಳುವ ನಿರೀಕ್ಷೆಯೂ ಕಂಡುಬಂದಿರಲಿಲ್ಲ. ಅಲ್ಲದೆ, ಅನೇಕ ಖಾಸಗಿ ಸಂಸ್ಥೆಗಳ ಪ್ರಯಾಣ ದರಕ್ಕಿಂತ ಏರ್ ಇಂಡಿಯಾ ಸಂಸ್ಥೆ ಹೆಚ್ಚು ಹಣ ಪಡೆಯುತ್ತದೆ ಎಂಬ ಟೀಕೆಯೂ ಇತ್ತು.

ಆದರೆ, ಇದೀಗ ದರ ಸಮರದ ಸ್ಪರ್ಧೆಗೆ ಧುಮುಕಿರುವ ಏರ್ ಇಂಡಿಯಾ ಸಂಸ್ಥೆ ತನ್ನ ವಾಪಸ್ ಮಾರ್ಗದ ಟಿಕೆಟ್‌ಗಳಿಗೆ ದರ ಕಡಿತ ಘೋಷಿಸಿದೆ. ಹೆಚ್ಚು ಉಪಯೋಗಿಸುವ ಪ್ರಮುಖ ಅಂತಾರಾಷ್ಟ್ರೀಯ ಮಾರ್ಗಗಳಿಗೆ ಮಾತ್ರ ಈ ಸೌಲಭ್ಯ ಅನ್ವಯಿಸುತ್ತದೆ. ಆದರೆ, ಟಿಕೆಟ್ ಖರೀದಿ ಅವಧಿಗೆ ಇದೇ ವರ್ಷ ಡಿಸೆಂಬರ್ 2ರ ವರೆಗೆ ಮಾತ್ರ ಲಭ್ಯ. ಪ್ರಯಾಣಿಕರು 2015ರ ನವೆಂಬರ್ 15ರ ವರೆಗಿನ ಟಿಕೆಟ್ ಖರೀದಿಸಬಹುದು ಎಂದು ಏರ್ ಇಂಡಿಯಾ ತಿಳಿಸಿದೆ. [ದರ ಸಮರ: ಏರ್ ಏಷ್ಯಾ ಎಂಟ್ರಿ ಆಫರ್]

airindia

ಎಲ್ಲೆಲ್ಲಿಂದ ಕಡಿಮೆ ದರ?: ನವದೆಹಲಿಯಿಂದ ಚಿಕಾಗೋ, ನ್ಯೂ ಯಾರ್ಕ್, ಮೆಲ್ಬೋರ್ನ್ ಮತ್ತು ಸಿಡ್ನಿ ಮಾರ್ಗಗಳಲ್ಲಿ ವಾಪಸ್ ಬರುವ ಟಿಕೆಟ್‌ಗೆ 49,999 ರೂ., ದೆಹಲಿಯಿಂದ ರೋಮ್, ಮಿಲನ್, ಫ್ರಾಂಕ್‌ಫೋರ್ಟ್, ಪ್ಯಾರಿಸ್, ಲಂಡನ್, ಬರ್ಮಿಂಗ್‌ಹ್ಯಾಮ್, ಟೋಕಿಯೋ, ಓಸಾಕಾ ಮತ್ತು ಸಿಯೋಲ್‌ ದೇಶಗಳಿಂದ 39,999 ರೂ. ಗಳಿಗೆ ವಾಪಸ್ ಬರುವ ಟಿಕೆಟ್ ನೀಡಲಾಗುತ್ತದೆ. [ಬೆಂಗಳೂರು-ಗೋವಾ ವಿಮಾನಯಾನ]

ನವದೆಹಲಿಯಿಂದ ಶಾಂಘೈ, ಮಾಸ್ಕೋ ಮತ್ತು ಹಾಂಗ್ ಕಾಂಗ್‌ ದೇಶಗಳಿಗೆ 29,999, ಬ್ಯಾಂಕಾಕ್ ಮತ್ತು ಸಿಂಗಪೂರ್ ದೇಶಗಳಿಂದ ವಾಪಸ್ ಬರುವ ಟಿಕೆಟ್‌ಗೆ 19,999 ರೂ. ನಿಗದಿಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+