ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಲ್ವಾನ್ ಕಣಿವೆಯಲ್ಲಿನ ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ: ವಾಯುಸೇನೆ ಮುಖ್ಯಸ್ಥ

|
Google Oneindia Kannada News

ನವದೆಹಲಿ, ಜೂನ್ 20: ಭಾರತ ಎಂದಿಗೂ ಶಾಂತಿಯನ್ನು ಕಾಪಾಡಿಕೊಳ್ಳಲು ಹೋರಾಡುತ್ತದೆ. ಗಲ್ವಾನ್ ಕಣಿವೆಯಲ್ಲಿನ ಯೋಧರ ತ್ಯಾಗವನ್ನು ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ ಎಂದು ವಾಯುಸೇನೆ ಮುಖ್ಯಸ್ಥ ಆರ್‌ಕೆಎಸ್ ಬದೌರಿಯಾ ಹೇಳಿದ್ದಾರೆ.

Recommended Video

ನಮ್ಮ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದ ವಾಯು ಸೇನಾ ಮುಖ್ಯಸ್ಥ. | IAF | Oneindia Kannada

ಹೈದರಾಬಾದ್‌ನಲ್ಲಿ ನಡೆದ ಗ್ರಾಜುವೇಷನ್ ಪರೇಡ್‌ನಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಸ್ತುತ ಪರಿಸ್ಥಿತಿ ಭಾರತ ಮತ್ತು ಯೋಧರಿಗೆ ಬಹುದೊಡ್ಡ ಸವಾಲು. ಧೈರ್ಯವಾಗಿ ಸಮಸ್ಯೆಯನ್ನು ಎದುರಿಸುತ್ತೇವೆ, ಭಾರತದ ಸಾರ್ವಭೌಮತ್ವವನ್ನು ಕಾಪಾಡುತ್ತೇವೆ ಎಂದರು.

ಭಾರತ-ಚೀನಾ ನಡುವೆ ಮಧ್ಯಸ್ಥಿಕೆ: ಯೂಟರ್ನ್ ಹೊಡೆದ ಟ್ರಂಪ್ಭಾರತ-ಚೀನಾ ನಡುವೆ ಮಧ್ಯಸ್ಥಿಕೆ: ಯೂಟರ್ನ್ ಹೊಡೆದ ಟ್ರಂಪ್

ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಜೂನ್ 15 ರಂದು ಭಾರತ-ಚೀನಾ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಚೀನಾದ 40 ಮಂದಿ ಸೈನಿಕರು ಮೃತಪಟ್ಟಿದ್ದರು.

Air Force Chief Says Wont Let Sacrifice At Galwan Valley Go In Vain

ಯಾವುದೇ ಸಂದರ್ಭದಲ್ಲಿ ಏನೇ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಲು ಸಿದ್ಧರಿದ್ದೇವೆ, ಶಾಂತಿಯನ್ನು ಕೂಡ ಕಾಪಾಡುತ್ತೇವೆ. ಯಾದರೆ ಯೋದರ ತ್ಯಾಗ ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ.

ದೇಶದ ಈ ಪರಿಸ್ಥಿತಿಯಲ್ಲಿ ಸಶಸ್ತ್ರ ಪಡೆಗಳು ಎಲ್ಲಾ ಸಮಯದಲ್ಲೂ ಸಿದ್ಧರಿರಬೇಕು. ಐಎಎಫ್ ಲಡಾಖ್‌ನಲ್ಲಿ ಎಎಚ್‌-64ಎಚ್ ಅಪಾಚೆ ಹೆಲಿಕಾಪ್ಟರ್‌ನ್ನು ನಿಯೋಜಿಸಿದೆ.
ಚೀನಾವು ಭಾರತದ ಯಾವುದೇ ಭೂಭಾಗವನ್ನು ಆಕ್ರಮಿಸಿಕೊಂಡಿಲ್ಲ, ಅಥವಾ ಗಡಿಯನ್ನು ದಾಟಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದರು.

English summary
Air Chief Marshall RKS Bhadauria today said the country will always strive towards maintaining peace and the "sacrifice" at Galwan Valley will not go in vain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X