ಅಂತಾರಾಷ್ಟ್ರೀಯ ವಿಮಾನ ಸಂಚಾರ ಆರಂಭ ಸಾಧ್ಯತೆ
ದೆಹಲಿ, ಜೂನ್ 25: ಕೊರೊನಾ ಭೀತಿಯಿಂದ ಸ್ಥಗಿತಗೊಂಡಿರುವ ಅಂತಾರಾಷ್ಟ್ರೀಯ ವಿಮಾನ ಸಂಚಾರ ಮತ್ತೆ ಆರಂಭಿಸುವ ಸಾಧ್ಯತೆ ಇದೆ ಎಂದು ಮೂಲಗಳ ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಜೂನ್ 30ರ ನಂತರ ದೇಶದಲ್ಲಿ ಮತ್ತಷ್ಟು ವಿನಾಯಿತಿ ಸಿಗಲಿದೆ. ಈ ಮಾರ್ಗಸೂಚಿಯಲ್ಲಿ ಕೆಲವು ನಿರ್ದೀಷ್ಟ ದೇಶಗಳಿಗೆ ಹಾಗೂ ನಿರ್ದಿಷ್ಟ ಮಾರ್ಗಗಳಿಗೆ ವಿಮಾನ ಸಂಚಾರ ಆರಂಭವಾಗಬಹುದು ಎನ್ನಲಾಗಿದೆ.
ಅಂತರರಾಷ್ಟ್ರೀಯ ವಿಮಾನ ಸಂಚಾರ ಆರಂಭದ ಬಗ್ಗೆ ಸಚಿವರು ಹೇಳಿದ್ದೇನು?
ದೆಹಲಿಯಿಂದ ನ್ಯಾರ್ಯಾಕ್, ಮುಂಬೈನಿಂದ ನ್ಯೂಯಾರ್ಕ್ ಮಾರ್ಗವಾಗಿ ವಿಮಾನ ಸಂಚಾರ ಆರಂಭವಾಗಬಹುದು ಎಂದು ಮೂಲಗಳು ತಿಳಿಸಿವೆ. ಇದಲ್ಲದೇ ಖಾಸಗಿ ಸಂಚಾರಕ್ಕೂ ಅನುಮತಿ ಸಿಗಬಹುದು ಎನ್ನಲಾಗಿದೆ. ವಿಶೇಷವಾಗಿ ಗಾಲ್ಫ್ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವವರಿಗಾಗಿ ಸಂಚಾರ ಮಾಡಲಿದೆ ಎನ್ನಲಾಗಿದೆ.
ಇನ್ನು ಮೆಟ್ರೋ ಮತ್ತು ಶಿಕ್ಷಣ ಸಂಸ್ಥೆಗಳು ತೆರೆಯುವ ಅವಕಾಶ ಸಿಗಬಹುದು ಎಂಬ ಕುತೂಹಲದ ಬಗ್ಗೆ ಮಾಹಿತಿ ನೀಡಿರುವ ಸರ್ಕಾರದ ಅಧಿಕಾರಿಯೊಬ್ಬರು ''ಕೇಂದ್ರ ಸರ್ಕಾರ ಅದಕ್ಕಾಗಿ ಈ ವಿಚಾರದಲ್ಲಿ ಆಸಕ್ತಿ ತೋರುತ್ತಿಲ್ಲ. ಏಕಂದ್ರೆ ಈ ವಿಚಾರದಲ್ಲಿ ರಾಜ್ಯಗಳು ಒಪ್ಪುವುದು ಕಷ್ಟ'' ಎಂದಿದ್ದಾರೆ.
ಜೂನ್ 18 ರಂದು ರಾಜ್ಯದ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದರು. ಈ ವೇಳೆ ಅನ್‌ಲಾಕ್ 2 ಕುರಿತು ಯೋಚಿಸಿ ಹಾಗೂ ಸೋಂಕು ನಿಯಂತ್ರಣ ಮಾಡುವ ಕಡೆಯೂ ಸರ್ಕಾರದ ಚಿಂತಿಸಬೇಕಾಗಿದೆ ಎಂದು ಸಲಹೆ ನೀಡಿದ್ದರು.
ಅನ್‌ಲಾಕ್ ಕಡೆ ಸಾಗುತ್ತಿರುವ ಈ ಹಂತದಲ್ಲಿ ಮತ್ತೆ ಲಾಕ್‌ಡೌನ್ ಕುರಿತು ಊಹಾಪೋಹಗಳು ಉಂಟಾಗದಂತೆ ನೋಡಿಕೊಳ್ಳಲು ಪ್ರಧಾನಿ ಸೂಚಿಸಿದ್ದರು ಎಂಬ ವಿಷಯವೂ ಸ್ಮರಿಸಬಹುದು.