ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಎ ಆಯಿತು, ಇನ್ಮುಂದೆ ಜನಸಂಖ್ಯಾ ನಿಯಂತ್ರಣ ಕಾಯ್ದೆ!

|
Google Oneindia Kannada News

ನವದೆಹಲಿ, ಮಾರ್ಚ್ 2: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆಯ (CAA) ವಿರುದ್ಧ ದೇಶಾದ್ಯಂತ ಸಾಕಷ್ಟು ಟೀಕೆಗಳು, ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಮತ್ತೊಂದು ವಿವಾದಾತ್ಮಕ ಕಾಯ್ದೆ ಜಾರಿಗೊಳಿಸಲು ಅಣಿಯಾಗುತ್ತಿದೆ ಎನ್ನಲಾಗಿದೆ.

'ಪೌರತ್ವ ತಿದ್ದುಪಡಿ ಕಾಯ್ದೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಜನಸಂಖ್ಯಾ ನಿಯಂತ್ರಣಾ ಕಾಯ್ದೆಯನ್ನು ಜಾರಿಗೊಳಿಸಲು ಸಿದ್ದರಾಗಿದ್ದಾರೆ' ಎಂದು ಕೇಂದ್ರದ ಗ್ರಾಮೀಣಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವೆ ಸಾದ್ವಿ ನಿರಂಜನಾ ಜ್ಯೋತಿ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಸರ್ಕಾರಿ ಕಟ್ಟಡಗಳ ಮೇಲೆ ಸಿಎಎ ವಿರೋಧಿ ಬರಹಬಳ್ಳಾರಿಯಲ್ಲಿ ಸರ್ಕಾರಿ ಕಟ್ಟಡಗಳ ಮೇಲೆ ಸಿಎಎ ವಿರೋಧಿ ಬರಹ

ಮಥುರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಜನಸಂಖ್ಯೆ ನಿಯಂತ್ರಣದ ಹೊಸ ಕಾಯ್ದೆ ತರುವ ಬಗ್ಗೆ ಅವರು ಪ್ರಸ್ತಾಪ ಮಾಡಿದ್ದಾರೆ.

ಮೋದಿ ಆಸಕ್ತಿ ತೋರಿಸಿದ್ದಾರೆ

ಮೋದಿ ಆಸಕ್ತಿ ತೋರಿಸಿದ್ದಾರೆ

'ದೇಶಕ್ಕೆ ಪ್ರಸ್ತುತ ಒಂದು ಪೂರ್ಣಸ್ವರೂಪದ ಜನಸಂಖ್ಯಾ ನಿಯಂತ್ರಣಾ ಕಾಯ್ದೆ ಬೇಕಿದೆ. ಈ ಬಗ್ಗೆ ನಾನು ಪ್ರಧಾನಿ ನರೇಂದ್ರ ಮೊದಿ ಅವರ ಜೊತೆ ಚರ್ಚಿಸಿದ್ದೇನೆ. ಅವರೂ ಕೂಡ ಈ ನಿಟ್ಟಿನಲ್ಲಿ ಆಸಕ್ತಿ ತೋರಿಸಿದ್ದಾರೆ. ಶೀಘ್ರವೇ ಈ ಬಗ್ಗೆ ಒಂದು ಅಂತಿ ನಿರ್ಧಾರ ಹೊರ ಬಿಳ್ಳಲಿದೆ' ಎಂದು ಸಾದ್ವಿ ಅವರು ಹೇಳಿದ್ದಾರೆ.

ಮೋದಿ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಾರೆ

ಮೋದಿ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಾರೆ

'ಕೆಲವೇ ವರ್ಷಗಳ ಹಿಂದೆ ಜಮ್ಮ ಮತ್ತು ಕಾಶ್ಮೀರ ಕುರಿತು ಪರಿಸ್ಥಿತಿ ಯಾವ ರೀತಿ ಇತ್ತು ಎಂಬುದನ್ನು ನೋಡಿದ್ದೇವೆ. ಯಾರೂ ಕೂಡ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನದ ಬಗ್ಗೆ ಚಕಾರ ಎತ್ತುತ್ತಿರಲಿಲ್ಲ. ಅಂತಹದ್ದನ್ನೇ ಪ್ರಧಾನಿ ಮೋದಿ ಅವರು ಯಶಸ್ವಿಯಾಗಿ ಮಾಡಿ ಮುಗಿಸಿ, ವಿಶೇಷ ಸ್ಥಾನ ಮಾನ ರದ್ದುಗೊಳಿಸಿದರು. ಜನಸಂಖ್ಯಾ ನಿಯಂತ್ರಣ ಕಾಯ್ದೆಗೂ ಇಂತಹದೇ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಾರೆ' ಎಂದಿದ್ದಾರೆ.

ಸಂಸತ್ ಅಧಿವೇಶನ ಮುಂದುವರಿಕೆ: ವಿಪಕ್ಷದ ಆಯುಧ ದೆಹಲಿ ಹಿಂಸಾಚಾರಸಂಸತ್ ಅಧಿವೇಶನ ಮುಂದುವರಿಕೆ: ವಿಪಕ್ಷದ ಆಯುಧ ದೆಹಲಿ ಹಿಂಸಾಚಾರ

ಉತ್ತರ ಪ್ರದೇಶದ ಸಂಸದೆ

ಉತ್ತರ ಪ್ರದೇಶದ ಸಂಸದೆ

ಕೇಂದ್ರದ ಗ್ರಾಮೀಣಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವೆಯಾಗಿ ಮೋದಿ ಮಂತ್ರಮಂಡಲದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿರಂಜನಾ ಜ್ಯೋತಿ ಅವರು ಸಾದ್ವಿ ನಿರಂಜನಾ ಜ್ಯೋತಿ ಎಂದು ಗುರುತಿಸಿಕೊಂಡಿದ್ದಾರೆ. ಅವರು ಉತ್ತರಪ್ರದೇಶದ ಫತೇಪುರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಸಿಎಎ ಪರ ಮಹಾರಾಷ್ಟ್ರ

ಸಿಎಎ ಪರ ಮಹಾರಾಷ್ಟ್ರ

ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರುದ್ಧ ಮಹಾರಾಷ್ಟ್ರ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸುವುದಿಲ್ಲ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ತಿಳಿಸಿದ್ದಾರೆ. ಮುಂಬೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸಿಎಎ ಕಾಯ್ದೆಯಿಂದ ಯಾರ ಪೌರತ್ವಕ್ಕೂ ದಕ್ಕೆ ಬರುವುದಿಲ್ಲ. ಯಾರೂ ಬಯಪಡುವ ಅಗತ್ಯ ಇಲ್ಲ ಎಂದು ಅವರು ಹೇಳಿದ್ದಾರೆ.

English summary
After CAA Population Control Act Our Target Says Central Minister Sadhvi Niranjana Jyoti In Mathura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X