• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಕೋಟ್ ದಾಳಿ ನಂತರ ಮೊದಲ ಬಾರಿಗೆ ಪಾಕ್ ವಾಯುಮಾರ್ಗದಲ್ಲಿ ಮೋದಿ ಪ್ರಯಾಣ

|
Google Oneindia Kannada News

ನವದೆಹಲಿ, ಆಗಸ್ಟ್ 22: ಬಾಲಕೋಟ್ ಏರ್ ಸ್ಟ್ರೈಕ್ ನಂತರ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಅವರು ಪಾಕಿಸ್ತಾನದ ವಾಯುಮಾರ್ಗದ ಮೂಲಕ ಪ್ರಯಾಣ ಬೆಳೆಸಿದರು.

ದ್ವಿಪಕ್ಷೀಯ ಸಭೆಗಾಗಿ ಗುರುವಾರ ಫ್ರಾನ್ಸ್ ಗೆ ತೆರಳಿದ ನರೇಂದ್ರ ಮೋದಿ, ನಂತರ ಯನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬಹ್ರೇನ್ ಗೂ ಪ್ರಯಾಣ ಬೆಳೆಸಲಿದ್ದಾರೆ.

ಉದ್ವಿಗ್ನತೆ ಶಮನಗೊಳಿಸಿ: ಮೋದಿ, ಇಮ್ರಾನ್‌ಗೆ ಟ್ರಂಪ್ ಕರೆಉದ್ವಿಗ್ನತೆ ಶಮನಗೊಳಿಸಿ: ಮೋದಿ, ಇಮ್ರಾನ್‌ಗೆ ಟ್ರಂಪ್ ಕರೆ

ಫೆಬ್ರವರಿ 14 ರಂದು ಪಾಕಿಸ್ತಾನ ಮೂಲದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆತ್ಮಾಹುತಿ ಬಾಂಬರ್ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ಭಾರತದ ನಲವತ್ತಕ್ಕೂ ಹೆಚ್ಚು ಯೋಧರು ಹುತಾತ್ಮರಾಗುದ್ದರು.

ಇಡೀ ವಿಶ್ವವೂ ಈ ಹೇಯ ಕೃತ್ಯವನ್ನು ಖಂಡಿಸಿತ್ತು. ಭಯೋತ್ಪಾದನೆಯನ್ನು ಹತ್ತಿಕ್ಕುವಂತೆ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ನೀಡಿತ್ತು. ಈ ದಾಳಿ ನಡೆದು ಸರಿಯಾಗಿ ಹನ್ನೆರಡು ದಿನಕ್ಕೆ ಅಂದರೆ ಫೆಬ್ರವರಿ 26 ರಂದು ಭಾರತ ಪಾಕಿಸ್ತಾನದಲ್ಲಿರುವ ಬಾಲಕೋಟ್ ನ ಉಗ್ರನೆಲೆಯ ಮೇಲೆ ವಾಯುದಾಳಿ ನಡೆಸಿ ನಡೆಸಿತ್ತು. ಈ ದಾಳಿಯಲ್ಲಿ ನೂರಾರು ಉಗ್ರರನ್ನು ಕೊಲ್ಲಲಾಗಿದೆ ಎಂದು ಭಾರತ ಹೇಳಿತ್ತು. ಆದರೆ ಇದುವರೆಗೆ ಈ ಕುರಿತ ನಿಖರ ಸಂಖ್ಯೆ ಸಿಕ್ಕಿಲ್ಲ. ಈ ಘಟನೆಯ ನಂತರ ಪಾಕಿಸ್ತಾನ ಭಾರತದ ವಿರುದ್ಧ ಮುನಿಸಿಕೊಂಡಿತ್ತು.

ಆ ಘಟನೆಯ ನಂತರ ಭಾರತ ಪಾಕಿಸ್ತಾನದ ವಾಯುಮಾರ್ಗವನ್ನು ಉಪಯೋಗಿಸುತ್ತಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಮೋದಿ ಅವರು ಅದೇ ಮಾರ್ಗವಾಗಿ ಫ್ರಾನ್ಸ್ ಗೆ ಪ್ರಯಾಣ ಬೆಳೆಸಿದ್ದು, ಅಚ್ಚರಿ ಮೂಡಿಸಿದೆ.

ಅದೂ ಅಲ್ಲದೆ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸದ ಭಅರತ ಸರ್ಕಾರದ ನಡೆಯಿಂದ ಉಭಯ ದೇಶಗಳ ನಡುವೆ ಈಗಾಗಲೇ ಮತ್ತಷ್ಟು ಉದ್ವಿಗ್ನತೆ ಸೃಷ್ಟಿಯಾಗಿದೆ. ಈ ಹೊತ್ತಲ್ಲಿ ಮೋದಿ ಪಾಕ್ ವಾಯುಮಾರ್ಗವಾಗಿ ಪ್ರಯಾಣಿಸಿದ್ದುಗಮನ ಸೆಳೆದಿದೆ.

ಪಿಎಂ ಮೋದಿಗೆ ಅರಬ್ ರಾಷ್ಟ್ರದ 'ಅತ್ಯುನ್ನತ ನಾಗರಿಕ' ಪ್ರಶಸ್ತಿಪಿಎಂ ಮೋದಿಗೆ ಅರಬ್ ರಾಷ್ಟ್ರದ 'ಅತ್ಯುನ್ನತ ನಾಗರಿಕ' ಪ್ರಶಸ್ತಿ

ಮೊದಲಿಗೆ ಫ್ರಾನ್ಸ್ ಗೆ ತೆರಳುವ ಪ್ರಧಾನಿ ಮೋದಿ, ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುಯಲ್ ಮಾಕ್ರೋನ್ ಅವರನ್ನು ಭೇಟಿಯಾಗಿ ಭಯೋತ್ಪಾದನೆಯ ವಿರುದ್ಧ ಹೋರಾಡುವ ಬಗ್ಗೆ ಮಂಆತುಕತೆ ನಡೆಸಲಿದ್ದಾರೆ. ಜೊತೆಗೆ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಮಹತ್ವದ ವಿಚಾರಗಳೂ ಚರ್ಚೆಗೊಳಗಾಗಲಿವೆ. ಶುಕ್ರವಾರ ಫ್ರಾನ್ಸ್ ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಮೋದಿ ಸಂವಾದ ಕಾರ್ಯಕ್ರಮವನ್ನೂ ನಡೆಸಲಿದ್ದಾರೆ. ನಂತರ ಯುಎಇ ಮತ್ತು ಬಹ್ರೇನ್ ಗೆ ತೆರಳಲಿರುವ ಮೋದಿ, ಶುಕ್ರವಾರ ಮತ್ತೆ ಫ್ರಾನ್ಸಿಗೆ ಹಿಂದಿರುಗಿ ಭಾನುವಾರ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

English summary
For the first time after Balakot Airstrike, Prime minister Narendra Modi uses Pakistan airspace to travel to France.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X