ನವದೆಹಲಿ: ಎಎಪಿಯ ಮತ್ತೊಬ್ಬ ಶಾಸಕ ಬಂಧನ

Posted By:
Subscribe to Oneindia Kannada

ನವದೆಹಲಿ, ನವೆಂಬರ್, 6: ಛಠ್ ಪೂಜಾ ಆಚರಣೆ ವೇಳೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಎಎಪಿ ಶಾಸಕ ರಿತುರಾಜ್ ಗೋವಿಂದ್ ಅವರನ್ನು ಇಲ್ಲಿಯ ಕಿರಾರಿ ಪ್ರದೇಶದಿಂದ ಭಾನುವಾರ (ನ.6) ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಇಲ್ಲಿನ ಅಮಾನ್ ವಿಹಾರ್ ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ವಿನಾಕರಣ ಗದ್ದಲ ಸೃಷ್ಠಿ ಮತ್ತು ಶಾಂತಿ ಸುಭದ್ರತೆಗೆ ಅಡಚಣೆ ಉಂಟುಮಾಡಿರುವ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಎಂ.ಎನ್.ತಿವಾರಿ ತಿಳಿಸಿದ್ದಾರೆ.

ರಿತುರಾಜ್ ಅವರ ವಿರುದ್ಧ ಸೆಕ್ಷನ್ 144 ಅಡಿ ಕ್ರಿಮಿನಲ್ ಪ್ರಕರಣ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಿತುರಾಜ್ ಮತ್ತು ಅವರ ಬೆಂಬಲಿಗರು, ಛಠ್ ಪೂಜೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮುಂದಾಗಿದ್ದರು, ಆದರೆ ಕಾರ್ಯಕ್ರಮದಲ್ಲಿ ಗುಂಪುಗುಂಪಾಗಿ ಭಾಗವಹಿಸುವುದನ್ನು ನಿಷೇಧಿಸಲಾಗಿತ್ತು.

ಈ ಕಾರಣದಿಂದಾಗಿ ರಿತುರಾಜ್ ಮತ್ತು ಅವರ ಬೆಂಬಲಿಗರನ್ನು ಪೊಲೀಸರು ತಡೆದು ಶಾಂತಿ ಸುವ್ಯವಸ್ಥೆಗೆ ಭಂಗ ತರುವಂತಹ ಪ್ರಯತ್ನ ಮಾಡಿರುವ ಆರೋಪದ ಮೇಲೆ ಬಂಧಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Aam Admi Party MLA Rituraj has been arrested for allegedly creating a ruckus and violating prohibitory orders at a Chhath Ghat in Aman Vihar during celebrations on Saturday.
Please Wait while comments are loading...