ಮಹಿಳೆಗೆ ಬೆದರಿಕೆ, ಎಎಪಿ ಶಾಸಕ ಅಮಾನುತುಲ್ಲಾ ಬಂಧನ

Posted By:
Subscribe to Oneindia Kannada

ನವದೆಹಲಿ, ಜುಲೈ 24: ದೆಹಲಿಯ ಆಮ್ ಆದ್ಮಿ ಪಕ್ಷದ (ಆಪ್) ಶಾಸಕರ ಮೇಲೆ ಮಹಿಳೆಯರು ದೂರು ನೀಡುವುದು ಹೆಚ್ಚಾಗಿದ್ದು, ಇತ್ತೀಚೆಗೆ ಓಕ್ಲಾದ ಶಾಸಕ ಅಮಾನುತುಲ್ಲಾ ಖಾನ್ ಅವರ ಮೇಲೆ ಮಹಿಳೆಯಯೊಬ್ಬರು ಕೊಲೆ ಬೆದರಿಕೆ ಕೇಸ್ ಹಾಕಿದ್ದರು. ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆಗಾಗಿ ಖಾನ್ ರನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.

'ದೆಹಲಿಯ ಓಕ್ಲಾದ ಶಾಸಕ ಅಮಾನುತುಲ್ಲಾ ಖಾನ್ ಅವರನ್ನು ಮಹಿಳೆಗೆ ಬೆದರಿಕೆ ಹಾಕಿದ ದೂರಿನ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಬಂಧಿಸಿದ್ದೇವೆ. ಮಹಿಳೆಯೊಬ್ಬರಿಗೆ ಕೊಲೆ ಬೆದರಿಕೆ ಹಾಕಿದ್ದಲ್ಲದೆ, ಸಾಕ್ಷಿ ನಾಶ ಪಡಿಸಲು ಯತ್ನಿಸಿದ ಆರೋಪವನ್ನು ಖಾನ್ ಹೊತ್ತಿದ್ದಾರೆ. ಕೂಡಲೇ ಅವರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದು' ಎಂದು ಆಗ್ನೇಯ ವಿಭಾಗದ ಡೆಪ್ಯುಟಿ ಪೊಲೀಸ್ ಆಯುಕ್ತ ರಾಜೀವ್ ರಂಜನ್ ಹೇಳಿದ್ದಾರೆ.

AAP MLA Aamanatullah Khan from Okhla arrested

ಜುಲೈ 20ರಂದು 35ರ ಹರೆಯದ ಮಹಿಳೆಯೊಬ್ಬರು ಖಾನ್ ವಿರುದ್ಧ ದೂರು ನೀಡಿದ್ದರು. ಐಪಿಸಿ ಸೆಕ್ಷನ್ 506, 509 ಅನ್ವಯ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆ ಹಿನ್ನಲೆ: ಜುಲೈ 10ರಂದು ದಕ್ಷಿಣ ದೆಹಲಿ ಬಾಟ್ಲಾ ಹೌಸ್ ಪ್ರದೇಶದಲ್ಲಿರುವ ಖಾನ್ ಅವರ ನಿವಾಸಕ್ಕೆ ಸಂತ್ರಸ್ತ ಮಹಿಳೆ ಹೋಗಿದ್ದಾರೆ. ಜಸೋಲಾ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆ ಬಗ್ಗೆ ದೂರು ನೀಡಿದ್ದಾರೆ.

ಆದರೆ, ಮಹಿಳೆ ವಿರುದ್ಧ ಖಾನ್ ಹಾಗೂ ಅವರ ಬೆಂಬಲಿಗರು ಕಿಡಿಕಾರಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿ ಅಲ್ಲಿಂದ ಕಳಿಸಿದ್ದಾರೆ. ನಂತರ ಜುಲೈ 20ರಂದು ಶಾಸಕ ಖಾನ್ ವಿರುದ್ಧ ದೂರು ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Delhi Police on Sunday(July 24) arrested Aam Aadmi Party (AAP) legislator from Okhla, Aamanatullah Khan, officials said.
Please Wait while comments are loading...