ಅಕ್ರಮ ದೇಣಿಗೆ ಎಸ್ಐಟಿ ತನಿಖೆ ನಡೆಸಲಿ: ಎಎಪಿ

ನವದೆಹಲಿ, ಫೆ.3: ದೆಹಲಿ ಅಸೆಂಬ್ಲಿ ಚುನಾವಣೆಗೆ ಮುರ್ನಾಲ್ಕು ದಿನ ಇರುವಾಗ ಆಮ್ ಆದ್ಮಿ ಪಕ್ಷದ ವಿರುದ್ಧ ಅಕ್ರಮವಾಗಿ 'ಪಾರ್ಟಿ ಫಂಡ್' ಸಂಗ್ರಹಿಸಿದ ಆರೋಪ ಕೇಳಿ ಬಂದಿದೆ. ಇದಕ್ಕೆ ಉತ್ತರಿಸಿರುವ ಎಎಪಿ, ಈ ಬಗ್ಗೆ ವಿಶೇಷ ತನಿಖಾ ತಂಡ ರಚಿಸಲಿ ಎಂದು ಆಗ್ರಹಿಸಿದೆ.

ಎಎಪಿ ಅಕ್ರಮವಾಗಿ ದೇಣಿಗೆ ಸಂಗ್ರಹಿಸಿದೆ ಎಂದು ಆರೋಪಿಸಲಾಗಿದೆ ಇದರ ಸತ್ಯಾಸತ್ಯತೆಯನ್ನು ವಿಶೇಷ ತನಿಖಾ ತಂಡ(ಎಸ್ ಐಟಿ) ಕಂಡು ಹಿಡಿಯಲಿ, ಜೊತೆಗೆ ತನಿಖೆ ಕಾಂಗ್ರೆಸ್ ಹಾಗೂ ಬಿಜೆಪಿ ಸಿದ್ಧವೇ ಮೊದಲು ಹೇಳಲಿ. ನಮಗೆ ದೇಣಿಗೆ ನೀಡಿದವರ ವಿವರ ವೆಬ್ ಸೈಟ್ ನಲ್ಲಿ ಪ್ಯಾನ್ ಕಾರ್ಡ್ ಸಹಿತ ಪ್ರಕಟಿಸಲಾಗಿದೆ ಎಂದು ಕುಮಾರ್ ವಿಶ್ವಾಸ್ ಪ್ರತಿಕ್ರಿಯಿಸಿದ್ದಾರೆ.

ಎಸ್‌ಐಟಿ ರಚನೆ ಹಾಗೂ ಯಾವುದೇ ತನಿಖೆಗೆ ಸಹಕರಿಸುವಂತೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳಿಗೂ ಆಪ್‌ ಪತ್ರ ಬರೆಯಲಿದೆ. ಎಸ್ ಐಟಿ ರಚನೆಗೆ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸುತ್ತೇವೆ ಎಂದು ಎಎಪಿ ಮುಖಂಡರಾದ ಯೋಗೇಂದ್ರ ಯಾದವ್, ಕುಮಾರ್‌ ವಿಶ್ವಾಸ್, ಅಶುತೋಶ್, ಆಶಿಶ್‌ ಖೈತಾನ್ ಹೇಳಿದ್ದಾರೆ.

AAP demands SIT probe into funding

ಆಮ್ ಆದ್ಮಿ ಪಕ್ಷ ಅಕ್ರಮ ನಿಧಿ ಸಂಗ್ರಹಣೆಯಲ್ಲಿ ತೊಡಗಿದೆ ಎಂದು ಪಕ್ಷದಿಂದ ಬೇರ್ಪಟ್ಟ ಸ್ವಯಂಸೇವಾ ಗುಂಪು 'ಅವಾಮ್' ಆರೋಪಿಸಿತ್ತು. ಆಪ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದ ದೇಣಿಗೆದಾರರ ಪಟ್ಟಿಯ ವಿವರಗಳನ್ನು ಉಲ್ಲೇಖಿಸಿ ಆಪ್‌ ವಾಲಂಟಿಯರ್‌ ಆಕ್ಷನ್ ಮಂಚ್‌ (ಎವಿಎಎಂ) ಬೇನಾಮಿ ಕಂಪನಿಗಳಿಂದ 2 ಕೋಟಿ ರೂ ಹವಾಲಾ ಹಣ ಸಂಗ್ರಹಿಸಲಾಗಿದೆ ಎಂದು ಆರೋಪಿಸಲಾಗಿತ್ತು.

ಬೇನಾಮಿ ಕಂಪನಿಗಳಿಂದ ಹಣ: 2014ರ ಏಪ್ರಿಲ್‌ 5ರ ಮಧ್ಯರಾತ್ರಿ 12 ಗಂಟೆಗೆ ನಾಲ್ಕು ಕಂಪನಿಗಳಿಂದ ಏಕಕಾಲಕ್ಕೆ ತಲಾ 50 ಲಕ್ಷ ರೂ.ಗಳಂತೆ ಆಪ್‌ಗೆ ದೇಣಿಗೆ ಸಂದಾಯವಾಗಿದೆ. ಈ ಕಂಪನಿಗಳು ನಕಲಿ ವಿಳಾಸ ಹೊಂದಿದ್ದು, ಒಂದೇ ನಿರ್ದೇಶಕರ ಮಂಡಳಿಯನ್ನು ಹೊಂದಿದ್ದು ಎಲ್ಲವೂ ಬೇನಾಮಿ ಕಂಪನಿಗಳಾಗಿವೆ. ಇದೊಂದು ವ್ಯವಸ್ಥಿತಿ ಹವಾಲಾ ಜಾಲ'' ಎಂದು ಆರೋಪಿಸಲಾಗಿತ್ತು.

ಇದಕ್ಕೆ ಉತ್ತರಿಸಿರುವ ಆಪ್ ಮುಖಂಡರು, ಪಕ್ಷ ಪ್ರತಿ ದೇಣಿಗೆಯನ್ನೂ ಚೆಕ್‌ ಮೂಲಕವೇ ಪಡೆದುಕೊಳ್ಳುತ್ತಿದ್ದು, ದೇಣಿಗೆದಾರರ ಪಾನ್‌ ಕಾರ್ಡ್ ಸಂಖ್ಯೆಗಳನ್ನೂ ಪಡೆದುಕೊಳ್ಳುತ್ತಿದೆ ಎಂದು ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+