Get Updates
Get notified of breaking news, exclusive insights, and must-see stories!

243 ಜನರನ್ನು ಹೊತ್ತಿದ್ದ ಕೇರಳದ ಹಡಗು ನಾಪತ್ತೆ, 5 ತಿಂಗಳಿಂದ ಪತ್ತೆಯಿಲ್ಲ!

ನವದೆಹಲಿ, ಜೂನ್ 21: ಸುಮಾರು 243 ಜನರನ್ನು ಹೊತ್ತಿದ್ದ ಹಡಗೊಂದು ಈ ವರ್ಷದ ಜನವರಿ ತಿಂಗಳಿನಿಂದ ಕಾಣೆಯಾಗಿದ್ದು, ಇದುವರೆಗೂ ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಕೇರಳದ ಎರ್ನಾಕುಲಂನಿಂದ 'ದೇವ ಮಾತಾ 2' ಎಂಬ ಹೆಸರಿನ ಈ ಹಡಗು ಜನವರಿ 12, 2019 ರಂದು ಹೊರಟಿತ್ತು. ಇದರಲ್ಲಿ 243 ಜನರಿದ್ದರು. ಪೆಸಿಫಿಕ್ ಸಾಗರದ ಕಡೆಗೆ ಹೊರಟಿದ್ದ ಈ ಹಡಗು ನಂತರ ಎಲ್ಲಿ ತೆರಳಿದೆ ಎಬ ಬಗ್ಗೆ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಈಗಾಗಲೇ ವಿದೇಶಾಂಗ ಸಚಿವ ಜೈಶಂಕರ್ ಅವರು ಪೆಸಿಫಿಕ್ ಸಮುದ್ರದ ಬಳಿಯ ದೇಶಗಳಿಗೆ ಮಾಹಿತಿ ನೀಡಿದ್ದು, ಪ್ರಯಾಣಿಕರ ಕುರಿತು ಯಾವುದೇ ಸಂಗತಿ ತಿಳಿದುಬಂದಿಲ್ಲ, ಭಾರತಕ್ಕೆ ತಿಳಿಸುವಂತೆ ಮನವಿ ಮಾಡಿದ್ದಾರೆ.

A Ship carrying 243 people onboard from Kerala missing since January

"ಹಡಗಿನ ಬಗ್ಗೆ ಕೇರಳ ರಾಜ್ಯ ಸರ್ಕಾರವನ್ನು ವಿಚಾರಿಸಿದಾಗ, ಪ್ರಯಾಣಿಕರು ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದು, ತಾವು ಪೆಸಿಫಿಕ್ ಸಾಗರದ ಕಡೆ ತೆರಳುತ್ತಿರುವುದಾಗಿ ತಿಳಿಸಿದ್ದರು" ಎಂದು ಕೇರಳ ಸರ್ಕಾರ ಹೇಳಿದೆ. ಆದರೆ ಪ್ರಯಾಣಿಕರು ಯಾಕಾಗಿ ತೆರಳಿದ್ದರು ಎಂಬ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+