ಕೇಂದ್ರದಲ್ಲಿ ಸರ್ಕಾರಿ ಹುದ್ದೆಗಳು ಖಾಲಿ ಖಾಲಿ: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್

ನವದೆಹಲಿ, ನವೆಂಬರ್.21: ಕೆಲಸ ಇಲ್ಲ ಕೆಲಸ ಇಲ್ಲ ಎಂದು ಅಲೆಯುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. ಒಂದಲ್ಲ, ಎರಡಲ್ಲ, ಕೇಂದ್ರ ಸರ್ಕಾರದ ಅಡಿಯ ಬರೋಬ್ಬರಿ 7 ಲಕ್ಷ ಹುದ್ದೆಗಳು ಖಾಲಿ ಖಾಲಿ ಆಗಿವೆ ಎಂಬ ವಿಚಾರ ಇದೀಗ ಹೊರ ಬಿದ್ದಿದೆ.

ಕಳೆದ 2017-18ನೇ ಸಾಲಿನಲ್ಲಿ ಸಿ ಗ್ರೂಪ್ ನ 5,74,289 ಹುದ್ದೆಗಳು ಖಾಲಿಯಾಗಿದ್ದು, 89,638 ಬಿ ಗ್ರೂಪ್ ಹಾಗೂ 19,896 ಎ ಗ್ರೂಪ್ ನ ಹುದ್ದೆಗಳು ಖಾಲಿಯಾಗಿವೆ. ಒಟ್ಟು ಕೇಂದ್ರ ಸರ್ಕಾರದ 6,83,823 ಹುದ್ದೆಗಳು ಖಾಲಿಯಾಗಿದ್ದವು ಎಂದು ತಿಳಿದು ಬಂದಿದೆ.

ಈ ಬಗ್ಗೆ ಕೇಂದ್ರ ಸಚಿವ ಜೀತೇಂದ್ರ ಸಿಂಗ್ ರಾಜ್ಯಸಭೆಯಲ್ಲಿ ಲಿಖಿತ ಮಾಹಿತಿ ನೀಡಿದ್ದಾರೆ. ವಿವಿಧ ಗ್ರೂಪ್ ಸಿ ಮತ್ತು ಲೆವೆಲ್ -1 ವರ್ಗದ 1,27,573 ಸಂಯೋಜಿತ ಖಾಲಿ ಹುದ್ದೆಗಳಿಗೆ ಕೇಂದ್ರೀಕೃತ ಉದ್ಯೋಗ ಅಧಿಸೂಚನೆಯನ್ನು ರೈಲ್ವೆ ಮತ್ತು ರೈಲ್ವೆ ನೇಮಕಾತಿ ಮಂಡಳಿ ಸಚಿವಾಲಯವು ಹೊರಡಿಸಿದೆ. ಎರಡು ವರ್ಷದಲ್ಲಿ ಹೊಸ ಉದ್ಯೋಗಗಳ ಸೃಷ್ಟಿಯಾಗಲಿವೆ ಎಂದು ಜೀತಂದೇರ್ ಸಿಂಗ್ ತಿಳಿಸಿದ್ದಾರೆ.

7 Lakh Central Government Posts Are Vacant: Jeetendra Singh

ಖಾಲಿ ಇರುವ ಉದ್ಯೋಗಕ್ಕೆ ಸಿಬ್ಬಂದಿ ಆಯ್ಕೆ ಆಯೋಗವು (ಎಸ್​ಎಸ್​ಸಿ) ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, 2019-20ನೇ ಸಾಲಿನಲ್ಲಿ 1,05,338 ಸ್ಥಾನಗಳನ್ನು ಭರ್ತಿ ಮಾಡಲಿದೆ ಎಂದು ಜೀತೇಂದ್ರ ಸಿಂಗ್ ಲಿಖಿತ ಮಾಹಿತಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+