ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ ಪ್ರಕರಣಗಳ ತನಿಖೆ: ಪೊಲೀಸ್ ಠಾಣೆಗಳಿಗೆ 5,000 ಕಿಟ್

|
Google Oneindia Kannada News

ನವದೆಹಲಿ, ಜುಲೈ 23: ಲೈಂಗಿಕ ಕಿರುಕುಳ ಪ್ರಕರಣದ ತ್ವರಿತ ವಿಚಾರಣೆಗೆ ಅನುಕೂಲವಾಗುವಂತೆ ದೇಶದಾದ್ಯಂತ ಪೊಲೀಸ್ ಠಾಣೆಗಳಿಗೆ ವಿತರಿಸಲು ಗೃಹ ಸಚಿವಾಲಯವು 5 ಸಾವಿರ ಅತ್ಯಾಚಾರ ತನಿಖಾ ಕಿಟ್‌ಗಳನ್ನು ಖರೀದಿಸಿದೆ.

ಸದ್ಯಕ್ಕೆ ಐದು ಕಿಟ್‌ಗಳನ್ನು ಆಯ್ದ ಪೊಲೀಸ್ ಠಾಣೆಗಳಿಗೆ ಹಂಚಲಾಗುತ್ತದೆ. ಈ ಠಾಣೆಗಳ ಕೆಲಸದ ಮಾಹಿತಿ ಪಡೆದುಕೊಳ್ಳುವಂತೆ ರಾಜ್ಯಗಳಿಗೆ ಸೂಚಿಸಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರಲ್ಲಿ ಮಹಿಳೆಯರ ರಕ್ಷಣೆಗೆ ಮನೇಕಾ ಗಾಂಧಿ ಒತ್ತಾಯಬೆಂಗಳೂರಲ್ಲಿ ಮಹಿಳೆಯರ ರಕ್ಷಣೆಗೆ ಮನೇಕಾ ಗಾಂಧಿ ಒತ್ತಾಯ

ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ತಕ್ಷಣ ವೈದ್ಯಕೀಯ ತನಿಖೆ ಹಾಗೂ ಸಾಕ್ಷ್ಯ ಸಂಗ್ರಹದ ಕೆಲಸಗಳನ್ನು ನಡೆಸಲು ಅನುಕೂಲವಾಗುವಂತೆ ಕಿಟ್‌ಅನ್ನು ವಿನ್ಯಾಸಗೊಳಿಸಲಾಗಿದೆ.

5,000 rape investigation kits to distribute to police station

ಪ್ರತಿ ಕಿಟ್‌ನಲ್ಲಿಯೂ ಟೆಸ್ಟ್ ಟ್ಯೂಬ್‌ಗಳ ಸೆಟ್ ಮತ್ತು 200 ರಿಂದ 300 ರೂ ವೆಚ್ಚದ ಬಾಟಲಿಗಳು ಸಹ ಇರುತ್ತವೆ ಎಂದು ಅವರು ಹೇಳಿದ್ದಾರೆ.

ಲೈಂಗಿಕ ಅಪರಾಧ ಪ್ರಕರಣ: ಪೊಲೀಸರಿಗೆ ಮತ್ತೆ ತರಬೇತಿ ಕೊಡಿಲೈಂಗಿಕ ಅಪರಾಧ ಪ್ರಕರಣ: ಪೊಲೀಸರಿಗೆ ಮತ್ತೆ ತರಬೇತಿ ಕೊಡಿ

ಇಂತಹ ಕಿಟ್‌ಗಳನ್ನು ಖರೀದಿಸಿ ಅವುಗಳನ್ನು ಪೊಲೀಸ್ ಠಾಣೆಗಳಿಗೆ ವಿತರಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಕಳೆದ ವಾರ ರಾಜ್ಯಗಳಿಗೆ ಮನವಿ ಮಾಡಿದ್ದರು.

ಇದಕ್ಕೆ ರಾಜ್ಯಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಹರಿಯಾಣ ಸರ್ಕಾರ ಈಗಾಗಲೇ ತಮ್ಮ ಪಾಲಿನ ಹಂಚಿಕೆಗೆ ಅನುಮೋದನೆ ಪಡೆದುಕೊಂಡಿದೆ.

ಇಂತಹ ಪ್ರಕರಣಗಳಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳನ್ನು ಕೆಡದಂತೆ ವಿಧಿವಿಜ್ಞಾನ ಪ್ರಯೋಗಾಲಯಗಳಿಗೆ ತಲುಪಿಸುವುದು ಮುಖ್ಯವಾಗಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಸಾಕ್ಷ್ಯಗಳು ಹಾಳಾಗುತ್ತವೆ. ಅದನ್ನು ಕಡಿಮೆಗೊಳಿಸಲು ಅತ್ಯಾಚಾರ ತನಿಖಾ ಕಿಟ್‌ಗಳನ್ನು ಎಲ್ಲ ಪೊಲೀಸ್ ಠಾಣೆಗಳಿಗೂ ಪೂರೈಸಲಾಗುವುದು ಎಂದು ಅಧಿಕಾರಿ ತಿಳಿಸಿದರು.

ಬಾಲಕಿಯರ ಮೇಲಿನ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ: ಮೇನಕಾ ಗಾಂಧಿಬಾಲಕಿಯರ ಮೇಲಿನ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ: ಮೇನಕಾ ಗಾಂಧಿ

ಸಂತ್ರಸ್ತೆಯ ರಕ್ತ, ವೀರ್ಯ ಮತ್ತು ಬೆವರು ಸೇರಿದಂತೆ ವಿವಿಧ ಮಾದರಿಗಳನ್ನು ಸಂಗ್ರಹಿಸಿ ಭದ್ರಪಡಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಈ ಕಿಟ್ ಸಹಾಯಮಾಡುತ್ತದೆ. ಇದು ಮಾದರಿಗಳನ್ನು ತುಂಬಿಸಿದ ಸಮಯ, ಪೊಲಿಸ್ ಅಧಿಕಾರಿ ಹಾಗೂ ಅದರಲ್ಲಿ ಪಾಲ್ಗೊಂಡ ಅಧಿಕಾರಿಯ ಮಾಹಿತಿಗಳನ್ನು ಒಳಗೊಂಡಿರುತ್ತದೆ.

ದೇಶದ ಪ್ರಯೋಗಾಲಯಗಳಲ್ಲಿ ಸಾಮರ್ಥ್ಯದ ಕೊರತೆಯಿರುವುದರಿಂದ ಪ್ರತಿ ವರ್ಷ ಸುಮಾರು 13 ಸಾವಿರ ಅತ್ಯಾಚಾರ ಪ್ರಕರಣಗಳ ವಿಧಿವಿಜ್ಞಾನ ಪರಿಶೀಲನೆಯೇ ನಡೆಯುತ್ತಿಲ್ಲ.

ಅತ್ಯಾಚಾರ ಪ್ರಕರಣಗಳ ತನಿಖೆ ಸೂಕ್ತವಾಗಿ ನಡೆಯುವ ಸಲುವಾಗಿ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಸಂಬಂಧ ನಿಟ್ಟಿನಲ್ಲಿ ತಮ್ಮ ಸಚಿವಾಲಯ ಕೆಲಸ ಮಾಡುತ್ತಿದೆ ಎಂದು ಮೇನಕಾ ಗಾಂಧಿ ಹೇಳಿದ್ದರು.

English summary
The Home Ministry has purchased 5,000 rape investigation kits to distribute to police stations across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X