5 ವರ್ಷದಲ್ಲಿ ವಿದೇಶ ಪ್ರವಾಸಕ್ಕಾಗಿ ಮೋದಿ ಖರ್ಚು ಮಾಡಿದ್ದು 446 ಕೋಟಿ

ದೆಹಲಿ, ಮಾರ್ಚ್ 4: ಭಾರತ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿ ಸಲವೂ ವಿದೇಶ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅದಕ್ಕಾಗಿ ಕೇಂದ್ರ ಸರ್ಕಾರ ಖರ್ಚು ಮಾಡುವ ಹಣವೆಷ್ಟು ಎಂಬ ಪ್ರಶ್ನೆ ಕಾಡುತ್ತೆ. ಪ್ರತಿಪಕ್ಷಗಳಿಗಂತೂ ಇದು ಚರ್ಚೆಯ ವಿಚಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

Recommended Video

      Modi's expenditure from past 5 years on foreign tour

      ಇದೀಗ, ವಿದೇಶಾಂಗ ಸಚಿವಾಲಯ ಅಧಿಕೃತವಾಗಿ ಮೋದಿ ವಿದೇಶ ಪ್ರವಾಸದ ಕುರಿತು ಲೆಕ್ಕಾಚಾರ, ಖರ್ಚು ಮಾಡಿರುವ ಹಣದ ವಿವರ ಬಹಿರಂಗಪಡಿಸಿದೆ.

      ಕಳೆದ ಐದು ವರ್ಷದಲ್ಲಿ ಮೋದಿ ವಿದೇಶ ಪ್ರವಾಸಕ್ಕಾಗಿ ಒಟ್ಟು 446.52 ಕೋಟಿ ಖರ್ಚು ಮಾಡಲಾಗಿದೆ ಎಂದು ವಿದೇಶಾಂಗ ಸಚಿವ ವಿ ಮುರುಳಿಧರನ್ ಮಾಹಿತಿ ನೀಡಿದ್ದಾರೆ.

      446 Crore Spent On PM Modi Foreign Visits In Last 5 Year

      ಸಚಿವ ವಿ ಮುರುಳಿಧರನ್ ನೀಡಿರುವ ಮಾಹಿತಿ ಪ್ರಕಾರ, 2015-16ನೇ ಸಾಲಿನಲ್ಲಿ ಒಟ್ಟು 121 ಕೋಟಿ ಹಾಗೂ 2016-17ನೇ ಸಾಲಿನಲ್ಲಿ 78.52 ಕೋಟಿ ಖರ್ಚಾಗಿದೆ.

      2017-18ನೇ ವರ್ಷದಲ್ಲಿ 99.90 ಕೋಟಿ ಮೋದಿ ವಿದೇಶ ಪ್ರವಾಸಕ್ಕಾಗಿ ವೆಚ್ಚ ಮಾಡಲಾಗಿದೆ. ಇನ್ನು 2018-19ನೇ ವರ್ಷದಲ್ಲಿ 100.02 ಕೋಟಿ ಆಗಿದೆ. 2019-20ನೇ ವರ್ಷದಲ್ಲಿ 46.23 ಕೋಟಿ ಖರ್ಚು ಮಾಡಲಾಗಿದೆ. ಈ ಲೆಕ್ಕಾಚಾರದಲ್ಲಿ ವಿಮಾನದ ವೆಚ್ಚವೂ ಸೇರಿದೆ ಎಂದು ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+