• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೇಬು ಪೆಟ್ಟಿಗೆಯಲ್ಲಿ ಸಾಗಿಸುತ್ತಿದ್ದ 250 ಕೋಟಿ ಮೌಲ್ಯದ ಹೆರಾಯಿನ್ ವಶಕ್ಕೆ

|

ನವದೆಹಲಿ, ನವೆಂಬರ್ 8: 250 ಕೋಟಿ ಮೌಲ್ಯದ ಹೆರಾಯಿನ್ ನನ್ನು ವಶಪಡಿಸಿಕೊಳ್ಳಲಾಗಿದೆ. ಜಮ್ಮು-ಕಾಶ್ಮೀರದ ಕುಪ್ವಾರದಿಂದ ಬರುತ್ತಿದ್ದ ಟ್ರಕ್ ನಲ್ಲಿ ಈ ಹೆರಾಯಿನ್ ಇತ್ತು. ಸೇಬು ಸಾಗಿಸುವ ಬಾಕ್ಸ್ ನಲ್ಲಿ ಇವನ್ನು ಸಾಗಿಸಲಾಗುತ್ತಿತ್ತು ಎಂದು ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯುರೋ ಗುರುವಾರ ತಿಳಿಸಿದೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಈ ಟ್ರಕ್ ನಲ್ಲಿದ್ದ ಸರಕನ್ನು ಉತ್ತರ ದೆಹಲಿಯ ಆಜಾದ್ ಪುರ್ ಮಂಡಿಗೆ ಸಾಗಿಸಲಾಗುತ್ತಿತ್ತು. ನಾರ್ಕೊಟಿಕ್ಸ್ ಬ್ಯುರೋ ಹಾಗೂ ಜಮ್ಮು-ಕಾಶ್ಮೀರದ ಪೊಲೀಸರು ಸೇರಿ ಕಾರ್ಯಾಚರಣೆ ನಡೆಸಿದ್ದಾರೆ. ಜಮ್ಮು-ಕಾಶ್ಮೀರದ ಹೆದ್ದಾರಿ ಟೋಲ್ ಪ್ಲಾಜಾ ಬಳಿ ಪರಿಶೀಲನೆ ನಡೆಸುವಾಗ ಹೆರಾಯಿನ್ ಇರುವುದು ಗೊತ್ತಾಗಿದೆ.

ಕಾಶ್ಮೀರದಲ್ಲಿ ಅವಧಿಗೆ ಮುನ್ನವೇ ಹಿಮಪಾತ; ಸೇಬು ಬೆಳೆಗಾರರ ಕಣ್ಣೀರು

ಟ್ರಕ್ ನಲ್ಲಿದ್ದ 50.10 ಕೇಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟ್ರಕ್ ನಲ್ಲಿದ್ದ ಚಾಲಕನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರಿ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗ ವಶಪಡಿಸಿಕೊಂಡಿರುವ ಹೆರಾಯಿನ್ ಮೌಲ್ಯ 250 ಕೋಟಿ ರುಪಾಯಿ. ಕುಪ್ವಾರಕ್ಕೆ ಸೇರಿದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯುರೋದ ಅಧಿಕಾರಿಗಳು ಹೇಳಿದ್ದು, ಇನ್ನೂ ಹಲವರ ಬಂಧನ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

English summary
Heroin worth Rs. 250 crore, being smuggled to Delhi inside apple cartons in a truck from Jammu and Kashmir's Kupwara, was seized by the Narcotics Control Bureau today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X