2 ಬಿಎಸ್ಎಫ್ ಯೋಧರು ಸಾವು, 193ಕ್ಕೆ ಏರಿದೆ ಸೋಂಕಿನ ಸಂಖ್ಯೆ

ದೆಹಲಿ, ಮೇ 7: ಕೊರೊನಾ ಸೋಂಕಿನಿಂದ ಇಬ್ಬರು ಬಿಎಸ್ಎಫ್ ಯೋಧರು ಮೃತಪಟ್ಟಿದ್ದಾರೆ. ಓರ್ವ ಸೈನಿಕ ಇಂದು ಸಾವನ್ನಪ್ಪಿದ್ದಾರೆ. ಮತ್ತೊರ್ವ ಯೋಧ ಸೋಮವಾರ ದೆಹಲಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Recommended Video

      ಅಪ್ಪನಿಗಿಂತ ನಾನೇನ್ ಕಮ್ಮಿನಾ ಅನ್ನೋ ರೀತಿ ಕೆಲಸ ಮಾಡ್ತಿದ್ದಾರೆ ಶಾಸಕ ಜಮೀರ್ ಖಾನ್ ಪುತ್ರ | Oneindia Kannada

      ಬಿಎಸ್ಎಫ್ ಯೋಧರ ಅಕಾಲಿಕ ನಿಧನಕ್ಕೆ ಬಿಎಸ್ಎಫ್ ಡಿಜಿ ಮತ್ತು ಇತರೆ ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ. ದುಃಖಿತ ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ ಹಾಗೂ ಆ ಕುಟುಂಬಗಳ ಜೊತೆ ನಾವಿದ್ದೇವೆ ಎಂದು ಬಿಎಸ್ಎಫ್ ತಿಳಿಸಿದೆ.

      ಹೊಸದಾಗಿ 41 ಬಿಎಸ್ಎಫ್ ಯೋಧರಿಗೆ ಸೋಂಕು ದೃಢವಾಗಿದೆ. ಈ ಮೂಲಕ ಬಿಎಸ್ಎಫ್‌ನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 193ಕ್ಕೆ ಏರಿಕೆಯಾಗಿದೆ. ನಿನ್ನೆ ಒಟ್ಟು 85 ಕೇಸ್ ವರದಿಯಾಗಿತ್ತು. ಇಂದು 41 ಕೇಸ್ ಸೇರ್ಪಡೆಯಾಗಿದೆ.

      2 BSF Army Die From COVID19

      ಸಿಆರ್‌ಪಿಎಫ್ ಯೋಧರೂ ಸಹ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಈವರೆಗೂ 441 ಯೋಧರು ಚಿಕಿತ್ಸೆ ಪಡೆಯುತ್ತಿದ್ದಾರೆ.

      ಇನ್ನು ಕೊರೊನಾ ಸೋಂಕಿನಿಂದ ಹೊರಬರಲು ಹೋರಾಡುತ್ತಿರುವ ಭಾರತದಲ್ಲಿ ಇದುವರೆಗೂ ಕೊವಿಡ್ ರೋಗಿಗಳ ಸಂಖ್ಯೆ 50 ಸಾವಿರ ಗಡಿದಾಟಿದೆ. 52952 ಜನರಿಗೆ ಸೋಂಕು ಖಚಿತವಾಗಿದ್ದು, 1783 ಮಂದಿ ಮೃತಪಟ್ಟಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+