ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ 19 ವರ್ಷದ ಹುಡುಗ ಗುಂಡಿಗೆ ಬಲಿ: ಶಂಕಿತನ ಬಂಧನಕ್ಕೆ ಪೊಲೀಸ್ ಬಲೆ

|
Google Oneindia Kannada News

ನವದೆಹಲಿ ಮೇ 28: ರಾಷ್ಟ್ರ ರಾಜಧಾನಿಯಲ್ಲಿ 19 ವರ್ಷದ ಹುಡುಗನನ್ನು ಗುಂಡಿಕ್ಕಿ ಕೊಂದಿರುವ ಘಟನೆ ಶುಕ್ರವಾರ ರಾತ್ರಿ ಬೆಳಕಿಗೆ ಬಂದಿದೆ. ಮೃತರನ್ನು ಸೊಹೈಲ್ ಎಂದು ಗುರುತಿಸಲಾಗಿದ್ದು, ಈಶಾನ್ಯ ದೆಹಲಿಯ ಖಜುರಿ ಖಾಸ್ ಪ್ರದೇಶದಲ್ಲಿ ಹತ್ಯೆ ಮಾಡಲಾಗಿದೆ. ಇವರು ಕಳೆದ 6 ವರ್ಷಗಳಿಂದ ಚಿಕ್ಕಪ್ಪನೊಂದಿಗೆ ಶ್ರೀರಾಮ್ ಕಾಲೋನಿಯಲ್ಲಿ ವಾಸವಾಗಿದ್ದರು. ಪೊಲೀಸರ ಪ್ರಕಾರ, ರಾತ್ರಿ 10.40 ರ ಸುಮಾರಿಗೆ ಅವರ ಎದೆಗೆ ಗುಂಡು ಹಾರಿಸಲಾಗಿದೆ. ಆತ ಸೊಹೈಲ್ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವುದು ತಿಳಿದು ಬಂದಿದೆ.

ಸೊಹೈಲ್‌ನ ಸೋದರ ಸಂಬಂಧಿ ಮುಬಾರಕ್ ಅನ್ಸಾರಿ, "ಸೊಹೈಲ್ ನನ್ನ ಚಿಕ್ಕಮ್ಮನ ಮಗ, ಅವನು ನಮ್ಮೊಂದಿಗೆ ಇಲ್ಲಿ ವಾಸಿಸುತ್ತಿದ್ದನು. ಘಟನೆಯ ಬಗ್ಗೆ ನನ್ನ ಸ್ನೇಹಿತನಿಂದ ನನಗೆ ತಿಳಿದಿದೆ. ನಾನು ಸ್ಥಳಕ್ಕೆ ತಲುಪಿದಾಗ, ಅವನು ನೆಲದ ಮೇಲೆ ಬಿದ್ದಿರುವುದನ್ನು. ಕೆಲವರು ಆತನಿಗೆ ಗುಂಡು ಹಾರಿಸಿ ಪರಾರಿಯಾಗಿದ್ದರು. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಮತ್ತು ಸೊಹೈಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪೊಲೀಸರು ಶೀಘ್ರವಾಗಿ ಕೊಲೆಗಾರನನ್ನು ಗುರುತಿಸಬೇಕೆಂದು ನಾವು ಬಯಸುತ್ತೇವೆ' ಎಂದಿದ್ದಾರೆ.

"ಅವನಿಗೆ ಶತ್ರುಗಳಿರಲಿಲ್ಲ, ಅವನು ಕೆಲಸಕ್ಕೆ ಹೋಗಿ ನೇರವಾಗಿ ಮನೆಗೆ ಬರುತ್ತಿದ್ದನು. ಕಳೆದ ಆರು ವರ್ಷಗಳಿಂದ ಅವನು ನಮ್ಮೊಂದಿಗೆ ವಾಸಿಸುತ್ತಿದ್ದನು. ಅವನು ಇಲ್ಲಿಯವರೆಗೆ ಯಾರೊಂದಿಗೂ ಜಗಳವಾಡಿದ ಬಗ್ಗೆ ನಾವು ಕೇಳಿಲ್ಲ" ಎಂದು ಅವರು ಹೇಳಿದ್ದಾರೆ.

19-year-old boy shot dead in Delhi

ಪ್ರಾಥಮಿಕ ತನಿಖೆಯ ಪ್ರಕಾರ, ಒಬ್ಬ ಶಂಕಿತನನ್ನು ಗುರುತಿಸಲಾಗಿದೆ ಮತ್ತು ಆತನನ್ನು ಪತ್ತೆಹಚ್ಚಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

19-year-old boy shot dead in Delhi

ಘಟನೆ ನಡೆದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸ್ ತಂಡ ಪರಿಶೀಲನೆ ನಡೆಸಿದಾಗ ರಕ್ತದ ಮಡುವಿನಲ್ಲಿ ಹುಡುಗ ಬಿದ್ದಿರುವುದು ಪತ್ತೆಯಾಗಿದೆ. ದೈಹಿಕ ತಪಾಸಣೆಯಲ್ಲಿ ಅವರ ಎದೆಯ ಮೇಲೆ ಗುಂಡಿನ ಗಾಯದ ಗುರುತು ಪತ್ತೆಯಾಗಿದೆ. ಅವರನ್ನು ಜೆಪಿಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಷ್ಟರಲ್ಲಾಗಲೇ ಸೊಹೈಲ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಅಪರಾಧ ಸ್ಥಳವನ್ನು ವಿಧಿವಿಜ್ಞಾನ ಮತ್ತು ಅಪರಾಧ ತಂಡ ಆಗಮಿಸಿ ಪರಿಶೀಲಿಸಿದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

English summary
A 19-year-old boy has been shot and killed in the national capital on Friday night. The deceased have been identified as Sohail and have been murdered in Khajuri Khas area of ​​northeast Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X