ಮಕ್ಕಳ ಡಯಾಪರ್ ನಲ್ಲಿ16 ಕೆಜಿ ಚಿನ್ನ ಸ್ಮಗಲಿಂಗ್
ದುಬೈನಿಂದ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಗುಂಪೊಂದು ಮಕ್ಕಳ ಡಯಾಪರ್ ನಲ್ಲಿ ಅಪಾರ ಪ್ರಮಾಣದ ಚಿನ್ನವನ್ನು ಅಕ್ರಮವಾಗಿ ಸಾಗಿಸುವಾಗ ಸಿಕ್ಕಿಬಿದ್ದಿದೆ
ನವದೆಹಲಿ, ಡಿಸೆಂಬರ್ 12: ದುಬೈನಿಂದ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಗುಂಪೊಂದು ಮಕ್ಕಳ ಡಯಾಪರ್ ನಲ್ಲಿ ಅಪಾರ ಪ್ರಮಾಣದ ಚಿನ್ನವನ್ನು ಅಕ್ರಮವಾಗಿ ಸಾಗಿಸುವಾಗ ಸಿಕ್ಕಿಬಿದ್ದಿದೆ.
ಮಕ್ಕಳ ಡಯಾಪರ್ ನಲ್ಲಿ 16 ಕೆಜಿ ಗೂ ಅಧಿಕ ಪ್ರಮಾಣದ ಚಿನ್ನದ ಗಟ್ಟಿಯನ್ನು ಆರು ಜನರ ಗುಂಪೊಂದು ಸಾಗಿಸುತ್ತಿತ್ತು. ಕಸ್ಟಮ್ ಚೆಕ್ಕಿಂಗ್ ವೇಳೆಯಲ್ಲಿ ಅಧಿಕಾರಿಗಳ ಕೈಗೆ ಈ ಕಳ್ಳರ ಗುಂಪು ಸಿಕ್ಕಿಬಿದ್ದಿದೆ.

ಸೂರತ್ ಮೂಲದ ಈ ಗುಂಪಿನಿಂದ ತಲಾ ಒಂದು ಕೆಜಿ ತೂಗುವ 16 ಬಿಸ್ಕತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಕ್ಕಳ ಒಳ ಉಡುಪು, ಟವೆಲ್ ಗಳಲ್ಲಿ ಈ ಚಿನ್ನವನ್ನು ಬಚ್ಚಿಡಲಾಗಿತ್ತು. ಈ ಗುಂಪಿನಲ್ಲಿ ಇಬ್ಬರು ದಂಪತಿಗಳು ತಲಾ ಒಂದೊಂದು ಮಗುವನ್ನು ತಮ್ಮ ಜತೆ ಹೊಂದಿದ್ದರು.












Click it and Unblock the Notifications