12 ರಿಂದ 17 ವರ್ಷದವರಿಗೆ ಲಸಿಕೆ: 'ಕೋವೊವ್ಯಾಕ್ಸ್‌'ಗೆ ಲಸಿಕೆಗೆ NTAGI ಅನುಮೋದನೆ

ನವದೆಹಲಿ, ಏಪ್ರಿಲ್, 29: ದೇಶದಲ್ಲಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಎರಡು ಲಸಿಕೆಗಳು ಪರಿಣಾಕಾರಿಯಾಗಿ ಹೋರಾಟ ನಡೆಸಿದ್ದವು. ಕೋವಿಡ್‌ನಿಂದ ಪಾರಾಗಲು ಕೋವಿಡ್‌ಶೀಲ್ಡ್ ಹಾಗೂ ಕೋವಾಕ್ಸಿನ್ ಈ ಲಸಿಕೆಗಳು ತುಂಬಾ ಸಹಾಯಕಾರಿಯಾಗಿದ್ದವು. ಸದ್ಯ ದೇಶದಲ್ಲಿ ಕೋರಾನಾವೈಸರ್ ನಾಲ್ಕನೇ ಅಲೆ ಅಬ್ಬರದ ಭೀತಿ ನಡುವೆ ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ಭಾರತವು ಶೀಘ್ರದಲ್ಲೇ ಮತ್ತೊಂದು ಲಸಿಕೆಯನ್ನು ಉಡುಗೊರೆಯಾಗಿ ಪಡೆಯಬಹುದು.

ಹೌದು ಸದ್ಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಅಭಿವೃದ್ಧಿ ಪಡಿಸಿರುವ ಹೊಸ ಕೋರೊನಾವೈರಸ್ ಲಸಿಕೆ 'ಕೋವೊವ್ಯಾಕ್ಸ್' 12 ರಿಂದ 17 ವರ್ಷ ವಯಸ್ಸಿನವರಿಗೆ ಬಳಸಲು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯಿಂದ (ಎನ್‌ಟಿಎಜಿಐ) ಅನುಮೋದನೆ ಪಡೆದುಕೊಂಡಿದೆ. ಈಗ NTAGI ಯ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಡಲಾಗುವುದು, ಅದರ ನಂತರ ಭಾರತದ ಡ್ರಗ್ಸ್ ಕಂಟ್ರೋಲರ್ (DCGI) ಮಹಾನಿರ್ದೇಶಕರು ಈ ಲಸಿಕೆಯನ್ನು ತುರ್ತು ಬಳಕೆಗೆ ಶೀಘ್ರದಲ್ಲೇ ಅನುಮೋದಿಸಬಹುದು ಎಂದು ವರದಿಯಾಗಿದೆ.

ಪ್ರತಿರಕ್ಷಣೆಗಾಗಿ ಸ್ಥಾಪಿಸಲಾದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯು (NTAGI) ಲಸಿಕೆಯನ್ನು ನಿರ್ಧರಿಸಲು ಮೂರು ಹಂತದ ವ್ಯವಸ್ಥೆಯನ್ನು ಹೊಂದಿದೆ. ಈ ಕಾರ್ಯನಿರತ ಗುಂಪು ಮೊದಲ ಹಂತವಾಗಿದೆ. ಕಾರ್ಯನಿರತ ಗುಂಪು ಲಸಿಕೆ ಡೇಟಾದ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ನೋಡಿದ ನಂತರ ಎರಡನೇ ಹಂತದ ಸ್ಥಾಯಿ ತಾಂತ್ರಿಕ ಉಪ-ಸಮಿತಿ (STSC) ಲಸಿಕೆ ಡೇಟಾದ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಪರಿಶೀಲಿಸುತ್ತದೆ ಮತ್ತು ಚರ್ಚಿಸುತ್ತದೆ. ಆನಂತರ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ಸ್ಥಾಯಿ ತಾಂತ್ರಿಕ ಉಪ-ಸಮಿತಿ (STSC) ತನ್ನ ನಿರ್ಧಾರವನ್ನು ಮೂರನೇ ಗುಂಪಿಗೆ ನೀಡುತ್ತದೆ.

12 to 17 Years olds of Vaccination Approved by NTAGI

ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಡಿಸೆಂಬರ್ 28 ರಂದು ವಯಸ್ಕರಿಗೆ ಸೀಮಿತ ತುರ್ತು ಬಳಕೆಗಾಗಿ'ಕೋವೊವ್ಯಾಕ್ಸ್'( Covovax) ಲಸಿಕೆಯನ್ನು ಅನುಮೋದಿಸಿತು. ಇನ್ನು ದೇಶದ ಲಸಿಕೆ ಅಭಿಯಾನದಲ್ಲಿ ಇದನ್ನು ಇನ್ನೂ ಸೇರಿಸಲಾಗಿಲ್ಲ.

12 to 17 Years olds of Vaccination Approved by NTAGI

ಸದ್ಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಕೇಂದ್ರ ಸರ್ಕಾರ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಫೆಬ್ರವರಿ 21ರಂದು DCGIಗೆ 12 ರಿಂದ 17 ವರ್ಷ ವಯಸ್ಸಿನ ಮಕ್ಕಳ ಲಸಿಕೆಗಾಗಿ 'ಕೋವೊವ್ಯಾಕ್ಸ್'ನ ತುರ್ತು ಬಳಕೆಯ ಅನುಮತಿಗೆ EUAಗೆ ಅರ್ಜಿ ಸಲ್ಲಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+