ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಭಾರತದಲ್ಲಿ 11,502 ಹೊಸ ಕೇಸ್ ಪತ್ತೆ, 325 ಸಾವು

|
Google Oneindia Kannada News

ದೆಹಲಿ, ಜೂನ್ 15: ಭಾರತದಲ್ಲಿ ಮತ್ತೊಮ್ಮೆ ದಾಖಲೆಯ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದೆ. ಸೋಮವಾರ ಬೆಳಿಗ್ಗಿನ ವರದಿಯಲ್ಲಿ 11,502 ಹೊಸ ಕೇಸ್‌ಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಬಗ್ಗೆ ಮಾಹಿತಿ ನೀಡಿದೆ.

ಈ ಮೂಲಕ ಸತತ ಆರನೇ ದಿನ ದೇಶದಲ್ಲಿ 10 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಕಳೆದ 24 ಗಂಟೆಯಲ್ಲಿ 325 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ, ಒಟ್ಟು ಸಾವಿನ ಸಂಖ್ಯೆ 9520ಕ್ಕೆ ಏರಿದೆ.

ಇಂದಿನ ವರದಿ ಬಳಿಕ ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,32,424. ಇದರಲ್ಲಿ 169798 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 153106 ಮಂದಿ ಇನ್ನೂ ಕ್ವಾರಂಟೈನ್ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ತೆಲಂಗಾಣದಲ್ಲಿ 23 ಮಂದಿ ಪತ್ರಕರ್ತರಿಗೆ ಕೊರೊನಾ ಸೋಂಕು ದೃಢತೆಲಂಗಾಣದಲ್ಲಿ 23 ಮಂದಿ ಪತ್ರಕರ್ತರಿಗೆ ಕೊರೊನಾ ಸೋಂಕು ದೃಢ

ಮಹಾರಾಷ್ಟ್ರದಲ್ಲಿ ನಿನ್ನೆ 3390 ಜನರಿಗೆ ಸೋಂಕು ದೃಢವಾಗಿದೆ. ದೆಹಲಿಯಲ್ಲಿ 2224 ಕೇಸ್‌, ತಮಿಳುನಾಡಿನಲ್ಲಿ 1974 ಕೇಸ್, ರಾಜಸ್ಥಾನದಲ್ಲಿ 293 ಕೇಸ್, ಗುಜರಾತ್‌ನಲ್ಲಿ 511 ಹೊಸ ಪ್ರಕರಣ, ಪಶ್ಚಿಮ ಬಂಗಾಳದಲ್ಲಿ 389 ಕೇಸ್, ಕರ್ನಾಟಕದಲ್ಲಿ 176, ಗೋವಾದಲ್ಲಿ 41 ಕೇಸ್ ವರದಿಯಾಗಿದೆ.

11502 new COVID-19 cases reported in India

ಹೊಸ ಕೇಸ್‌ಗಳ ಪೈಕಿ ವಿಶ್ವದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಅಮೆರಿಕ, ಬ್ರೆಜಿಲ್ ಬಳಿಕ ಭಾರತದಲ್ಲಿ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿದೆ.

English summary
11,502 new COVID19 cases and 325 deaths reported in the last 24 hours at India. Total number of cases in the country now at 332424.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X