ಪಾಕ್ ಮತ್ತು ಚೀನಾ ಗಡಿಯಲ್ಲಿ ಭಾರತದಿಂದ 110 ಏರ್‌ಬೇಸ್‌ಗಳ ನಿರ್ಮಾಣ

ನವದೆಹಲಿ, ಮಾರ್ಚ್ 12: ಪಾಕಿಸ್ತಾನ ಹಾಗೂ ಚೀನಾ ಗಡಿಯಲ್ಲಿ 100 ಏರ್‌ಬೇಸ್‌ಗಳನ್ನು ನಿರ್ಮಿಸಲು ಭಾರತ ಉಮದಾಗಿದೆ.

ಪಿಓಕೆ ವಾಯು ದಾಳಿ ಬೆನ್ನಲ್ಲೇ ಭಾರತ ಈ ನಿರ್ಧಾರಕ್ಕೆ ಬಂದಿದೆ. ಯಾವುದೇ ಪರಿಸ್ಥಿತಿ ಮತ್ತು ಶತ್ರು ಪಾಳಯದ ಕ್ಷಿಪಣಿ, ಬಾಂಬ್ ಗಳ ವಿರುದ್ಧ ತುರ್ತು ಕಾರ್ಯಾಚರಣೆಗಾಗಿ ಏರ್ ಬೇಸ್ ಗಳ ಬಳಕೆ ಮಾಡಲಾಗುತ್ತದೆ.

ಪಾಕ್ ಅಕ್ರಮಿತ ಕಾಶ್ಮೀರದಲ್ಲಿನ ಉಗ್ರ ಕ್ಯಾಂಪ್ ಗಳ ಮೇಲೆ ಭಾರತೀಯ ವಾಯುಸೇನೆ ವಾಯುದಾಳಿ ಮಾಡಿದ ವಿಚಾರ ಹಸಿಯಾಗಿರುವಾಗಲೇ ಇನ್ನೊಂದೆಡೆ ಕೇಂದ್ರ ಗೃಹ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯಗಳು ಇಂಡೋ-ಪಾಕ್ ಗಡಿ ಮತ್ತು ಇಂಡೋ-ಚೀನಾ ಗಡಿಗಳಲ್ಲಿ ಸುಮಾರು 110 ಏರ್ ಬೇಸ್ ಗಳ ನಿರ್ಮಾಣಕ್ಕೆ ಮುಂದಾಗಿದೆ.

110 hardened shelters for IAF fighter jets to be built close to Pakistan, China borders

ಅಲ್ಲದೆ ಭಾರತದ ಜೆಟ್ ಯುದ್ಧ ವಿಮಾನಗಳ ಮೇಲೆ ಶುತ್ರದೇಶಗಳು ನಡೆಸುವ ಕ್ಷಿಪಣಿ ದಾಳಿಗಳಿಂದ ಜೆಟ್ ಯುದ್ಧ ವಿಮಾನಗಳನ್ನು ರಕ್ಷಣೆ ಮಾಡಲೂ ಕೂಡ ಈ ಏರ್ ಬೇಸ್ ಗಳು (ಶೆಲ್ಟರ್ ಗಳು) ನೆರವಾಗಲಿದೆ. ಇದೇ ಕಾರಣಕ್ಕೆ ಸುಮಾರು 5 ಸಾವಿರ ಕೋಟಿ ರೂ ವೆಚ್ಚದಲ್ಲಿ ಸರ್ಕಾರ ಈ ಸುಸಜ್ಜಿತ ಏರ್ ಬೇಸ್ ಗಳ ನಿರ್ಮಾಣಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.

ಈ ಯೋಜನೆಯಿಂದಾಗಿ ವಾಯುಸೇನೆಯ ಬಳಿ ಇರುವ ಸುಖೋಯ್ 30ಎಂಕೆಐನಂತಹ ಅತ್ಯಂತ ದೊಡ್ಡ ಮತ್ತು ಭಾರಿ ತೂಕದ ಯುದ್ಧ ವಿಮಾನಗಳನ್ನು ರಕ್ಷಿಸಿಕೊಳ್ಳಲು ಈ ಏರ್ ಬೇಸ್ ಗಳು ನೆರವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+